More

    ನೌಕಾಪಡೆಗೆ ಸೇರಿದ ಮಿಗ್​ 29ಕೆ ಯುದ್ಧವಿಮಾನ ಗೋವಾದಲ್ಲಿ ಪತನ; ತರಬೇತಿ ಹಾರಾಟದ ವೇಳೆ ಅವಘಡ

    ನವದೆಹಲಿ: ಭಾರತೀಯ ನೌಕಾಪಡೆಗೆ ಸೇರಿದ ಮಿಗ್​ 29ಕೆ ಯುದ್ಧ ವಿಮಾನ ಇಂದು ಬೆಳಗ್ಗೆ ಗೋವಾದಲ್ಲಿ ಅಪಘಾತಕ್ಕೀಡಾಗಿದೆ.

    ಯುದ್ಧವಿಮಾನದ ಎಂದಿನಂತೆ ತರಬೇತಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಪತನಗೊಂಡಿದ್ದು ಪೈಲಟ್​ಗೆ ಯಾವುದೇ ಅಪಾಯವಾಗಿಲ್ಲ. ವಿಮಾನ ಅಪಘಾತಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

    ಇಂದು ಬೆಳಗ್ಗೆ ಗೋವಾ ಕರಾವಳಿ ತೀರದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ಮಿಗ್​ 29 ಕೆ ಯುದ್ಧವಿಮಾನ ಪತನಗೊಂಡಿದೆ. ಪೈಲಟ್​​ನನ್ನು​ ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಕರೆದು ಕೊಂಡುಬರಲಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳುತ್ತೇವೆ ಎಂದು ಭಾರತೀಯ ನೌಕಾಪಡೆ ಟ್ವೀಟ್ ಮೂಲಕ ತಿಳಿಸಿದೆ.

    ಈ ಯುದ್ಧ ವಿಮಾನ ವಾಸ್ಕೋದ ಐಎನ್​ಎಸ್​ ಹಂಸಾ ನೌಕಾನೆಲೆಯಿಂದ ಟೇಕ್​ ಆಫ್​ ಆಗಿ ಹಾರಾಟ ನಡೆಸುತ್ತಿತ್ತು ಎನ್ನಲಾಗಿದೆ. ಕಳೆದ ವರ್ಷ ನವೆಂಬರ್​ನಲ್ಲಿ ಕೂಡ ಮಿಗ್​ 29 ಕೆ ಯುದ್ಧ ವಿಮಾನ ಪತನವಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts