More

    ನವಿಲುತೀರ್ಥ ಡ್ಯಾಂನಿಂದ 10 ಸಾವಿರ ಕ್ಯೂಸೆಕ್ಸ್​ ನೀರು ಬಿಡುಗಡೆ: ಮಲಪ್ರಭಾ ನದಿ ತೀರದಲ್ಲಿ ಪ್ರವಾಹ ಭೀತಿ

    ಬಾಗಲಕೋಟೆ: ಇಂದು ಬೆಳಗ್ಗೆ ನವಿಲು ತೀರ್ಥ ಡ್ಯಾಂನಿಂದ 10 ಸಾವಿರ ಕ್ಯೂಸೆಕ್ಸ್​ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಮತ್ತೆ ಮಲಪ್ರಭಾ ನದಿ ತೀರದಲ್ಲಿ ಪ್ರವಾಹ ಆತಂಕ ತಲೆದೂರಿದೆ.

    ಬಾದಾಮಿ ತಾಲೂಕಿನ ಗೋವನಕೊಪ್ಪ, ತಳಕವಾಡ, ಬೀರನೂರು, ಹೆಬ್ಬಳ್ಳಿ, ಸುಳ್ಳ, ಕರ್ಲಕೊಪ್ಪ, ಹಾಗನೂರು, ಆಲೂರ ಎಸ್ ಕೆ, ಕಳಸ, ಕಿತ್ತಲಿ ಸೇರಿದಂತೆ 34 ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಪ್ರವಾಹ ಭೀತಿ ಶುರುವಾಗಿದೆ.

    ಇದನ್ನೂ ಓದಿ: ಭೂಕುಸಿತದ ಜಾಗದಲ್ಲಿ ರಾಶಿರಾಶಿ ತಲೆಬುರುಡೆ- ಮೂಳೆ, ಕಿವಿಯೋಲೆ ಪತ್ತೆ!

    ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಗೋವನಕೊಪ್ಪ ಸೇತುವೆಗೆ ಬಾದಾಮಿ ತಹಸೀಲ್ದಾರ್​ ಸುಹಾಸ್ ಇಂಗಳೇ ಭೇಟಿ ನೀಡಿ ಸೇತುವೆಯಲ್ಲಿ ಸಿಲುಕಿದ ಮುಳ್ಳಿನ ಕಂಟಿಯನ್ನು ತೆರವುಗೊಳಿಸಿದರು.

    ಮಲಪ್ರಭಾ ನದಿ ತೀರದ ವಿವಿಧ ಹಳ್ಳಿಗಳಿಗೆ ಭೇಟಿ ತಹಸೀಲ್ದಾರ್​ ಪರಿಶೀಲನೆ ನಡೆಸಿ, ಹಲವು ಕ್ರಮಕ್ಕೆ ಸೂಚನೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಉಡುಪಿಯಲ್ಲಿ ಬೀಸಿದ ಸುಂಟರಗಾಳಿಗೆ ಹಾರಿದ ಮನೆ ಚಾವಣಿ: ಇಬ್ಬರಿಗೆ ಗಾಯ, ಕಂಪೌಂಡ್ ಗೋಡೆ ಕುಸಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts