ಉಡುಪಿಯಲ್ಲಿ ಬೀಸಿದ ಸುಂಟರಗಾಳಿಗೆ ಹಾರಿದ ಮನೆ ಚಾವಣಿ: ಇಬ್ಬರಿಗೆ ಗಾಯ, ಕಂಪೌಂಡ್ ಗೋಡೆ ಕುಸಿತ

House
Published on

ಉಡುಪಿ: ಕಳತ್ತೂರು ಹಾಗೂ ಪಾದೂರು ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಬೀಸಿದ ಸುಂಟರಗಾಳಿಗೆ ಎರಡು ಮನೆ ಹಾಗೂ ಕಂಪೌಂಡ್ ಗೋಡೆ ಕುಸಿತವಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ.

ಬಿರುಗಾಳಿಗೆ ಚಾವಣಿ ಕುಸಿತವಾಗಿದ್ದು ಈ ಸಂದರ್ಭ ಮನೆಯೊಳಗಿದ್ದ ಶಾಮಲಾ ಮಡಿವಾಳ ಹಾಗೂ ಮೂರ್ತಿ ಎಂಬುವರ ತಲೆಗೆ ಹೆಂಚು ತುಂಡು ಬಿದ್ದು ಗಾಯವಾಗಿದೆ. ಗಾಯಗೊಂಡವರಿಗೆ ಕಾಪು ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ.

ರಸ್ತೆ ಬದಿ ಇದ್ದ ಗೂಡಂಗಡಿಯ ಛಾವಣಿಯ ಹಾರಿಹೋಗಿದೆ. ಸ್ಥಳಕ್ಕೆ ಪಾದೂರು ಗ್ರಾಮಲೆಕ್ಕಾಧಿಕಾರಿ ಕ್ಲಾರೆನ್ಸ್ ಹಾಗೂ ಮಜೂರು ಪಂಚಾಯಿತಿ ಮಾಜಿ ಅಧ್ಯಕ್ಷ ಸಂದೀಪ್ ರಾವ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ರಂಗಶೆಟ್ಟಿ ಮೊದಲಾದವರು ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net