More

    ಗೌರವ ಕೊಟ್ಟು ಗೌರವ ತೆಗೆದುಕೊಳ್ಳಿ, ಅಫ್ರಿದಿಗೆ ಆಫ್ಘನ್ ಕ್ರಿಕೆಟಿಗ ತಿರುಗೇಟು

    ಕೊಲಂಬೊ: ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ (ಎಲ್‌ಪಿಎಲ್) ಕ್ರಿಕೆಟಿಗರ ನಡುವೆ ನಡೆದ ಜಗಳವೊಂದು ಭಾರಿ ಸದ್ದು ಮಾಡಿತ್ತು. ಟೂರ್ನಿಯಲ್ಲಿ ಆಡುತ್ತಿರುವ ಅಫ್ಘಾನಿಸ್ತಾನದ ಯುವ ಕ್ರಿಕೆಟಿಗ ನವೀನ್ ಉಲ್ ಹಕ್ ವರ್ತನೆಯ ಬಗ್ಗೆ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕಿಡಿಕಾರಿದ್ದರು. ಇದೀಗ ಅಫ್ರಿದಿಗೆ ನವೀನ್ ಉಲ್ ಹಕ್ ತಿರುಗೇಟು ನೀಡಿದ್ದಾರೆ.

    ಗಾಲೆ ಗ್ಲಾಡಿಯೇಟರ್ಸ್‌ ಮತ್ತು ಕ್ಯಾಂಡಿ ಟಸ್ಕರ್ಸ್‌ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿತ್ತು. ಕ್ಯಾಂಡಿ ಟಸ್ಕರ್ಸ್‌ ಪರ ಆಡುತ್ತಿರುವ ನವೀನ್ ಉಲ್ ಹಕ್, ಗಾಲೆ ಗ್ಲಾಡಿಯೇಟರ್ಸ್‌ ತಂಡದಲ್ಲಿರುವ ಪಾಕ್ ಆಟಗಾರ ಮೊಹಮದ್ ಆಮೀರ್ ಜತೆ ಪಂದ್ಯದ ವೇಳೆ ಜಗಳವಾಡಿದ್ದರು. ಇದಕ್ಕಾಗಿ ಪಂದ್ಯದ ಬಳಿಕ ಅಫ್ರಿದಿ, ನವೀನ್ ಉಲ್ ಹಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಸಹ-ಆಟಗಾರರು ಮತ್ತು ಎದುರಾಳಿ ಆಟಗಾರರಿಗೆ ಗೌರವ ನೀಡುವುದು ಕ್ರೀಡಾಸ್ಫೂರ್ತಿಯ ಮುಖ್ಯ ಭಾಗ ಎಂದು ಬುದ್ದಿವಾದ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ನವೀನ್ ಉಲ್ ಹಕ್ ಇದೀಗ, ‘ಗೌರವ ಕೊಟ್ಟು ಗೌರವ ತೆಗೆದುಕೊಳ್ಳಬೇಕು’ ಎಂದು ತಿರುಗೇಟು ನೀಡಿದ್ದಾರೆ.

    ‘ನಾನು ಸಲಹೆಗಳನ್ನು ತೆಗೆದುಕೊಳ್ಳಲು ಮತ್ತು ಗೌರವ ನೀಡಲು ಯಾವಾಗಲೂ ಸಿದ್ಧವಿರುವೆ. ಕ್ರಿಕೆಟ್ ಒಂದು ಜಂಟಲ್‌ಮ್ಯಾನ್ ಗೇಮ್. ಆದರೆ ನೀನು ಯಾವಾಗಲೂ ನಮ್ಮ ಕಾಲಡಿಯಲ್ಲಿರುತ್ತೀಯ ಮತ್ತು ಅಲ್ಲಿಯೇ ಉಳಿಯುವೆ ಎಂದು ಯಾರಾದರೂ ಹೇಳುತ್ತಿದ್ದರೆ ಅದು ಕೇವಲ ನನ್ನ ಬಗ್ಗೆ ಮಾತ್ರವಲ್ಲ ನನ್ನ ಜನರ ಬಗ್ಗೆಯೂ ಆ ಮಾತು ಹೇಳಿದಂತಾಗುತ್ತದೆ. ಗೌರವ ನೀಡಿ, ಗೌರವ ತೆಗೆದುಕೊಳ್ಳಿ’ ಎಂದು ನವೀನ್ ಉಲ್ ಹಕ್ ಬುಧವಾರ ಟ್ವೀಟಿಸಿದ್ದಾರೆ.

    VIDEO | ನಾನು ಮೊದಲ ಶತಕ ಸಿಡಿಸಿದಾಗ ನೀನಿನ್ನೂ ಹುಟ್ಟಿರಲಿಲ್ಲ, ಲಂಕಾ ಲೀಗ್‌ನಲ್ಲಿ ಅಫ್ರಿದಿ ಗರಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts