More

    ನವರಾತ್ರಿ ಮಹೋತ್ಸವ ಇಂದು ಆರಂಭ

    ಮೊಗವೀರಪೇಟೆ ದೇವಳ ನವರಾತ್ರಿ ಉತ್ಸವ
    ಕೊಕ್ಕರ್ಣೆ: ಮೊಗವೀರಪೇಟೆ ಶ್ರೀ ದುರ್ಗಾಪರಮೇಶ್ವರಿ, ಶ್ರೀ ನಾಗಬ್ರಹ್ಮ, ಶ್ರೀ ಪರಿವಾರ ದೇವತಾ ಬೊಬ್ಬರ್ಯೇಶ್ವರ, ಶ್ರೀ ಕಪ್ಪಣ್ಣ ಸ್ವಾಮಿ, ಶ್ರೀ ಮಲಸಾವರಿ ಮತ್ತು ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಅ.17ರಿಂದ 26ರ ತನಕ ಶರನ್ನವರಾತ್ರಿ ಉತ್ಸವ ಜರುಗಲಿರುವುದು. ಅ.20ರಂದು ಸಂಜೆ 4ರಿಂದ ಚಂಡಿಕಾ ಪಾರಾಯಣ ಜರುಗಲಿರುವುದು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ. ಭಕ್ತರು ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವಂತೆ ವಿನಂತಿಸಲಾಗಿದೆ.

    ಪಾಂಡೇಶ್ವರ-ರಕ್ತೇಶ್ವರಿ ದೇವಳ
    ಕೋಟ: ಶ್ರೀ ಕ್ಷೇತ್ರ ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದಲ್ಲಿ ಅ.17ರಿಂದ 26ರ ವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದ್ದು, ಆ ಪ್ರಯುಕ್ತ ಲಲಿತಪಂಚಮಿ, ಶಾರದಾಪೂಜೆ, ದುರ್ಗಾಷ್ಟಮಿ, ಮಹಾನವಮಿ ದುರ್ಗಾಹೋಮ, ಪ್ರತಿದಿನ ಸಪ್ತಸತೀ ಪಾರಾಯಣ ರಂಗಪೂಜೆ, ಕೋವಿಡ್ ನಿಯಮದಂತೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ದೇವಳದ ಆಡಳಿತ ಧರ್ಮದರ್ಶಿ ಕೆ.ವಿ.ರಮೇಶ್ ರಾವ್ ತಿಳಿಸಿದ್ದಾರೆ.

    ಕೋಟ ಅಮೃತೇಶ್ವರಿ ದೇವಳ
    ಕೋಟ: ಇಲ್ಲಿನ ಶ್ರೀ ಕ್ಷೇತ್ರ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಈ ಬಾರಿ ಶರನ್ನವರಾತ್ರಿ ಕೋವಿಡ್ ನಿಯಮದಂತೆ ನಡೆಯಲ್ಲಿದೆ. ಆ ಪ್ರಯುಕ್ತ ಚಂಡಿಕಾ ಸಪ್ತಶತೀ ಪಾರಾಯಣ, ದುರ್ಗಾಯಾಗ ಸಕಲ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅ.17ರಿಂದ ಆರಂಭಿಸಿ 25ರ ವರೆಗೆ ನಡೆಯಲಿದೆ ಎಂದು ದೇವಳದ ಆಡಳಿತಾಧಿಕಾರಿ ತಿಳಿಸಿದ್ದಾರೆ.

    ಕೊಕ್ಕರ್ಣೆ ಶರನ್ನವರಾತ್ರಿ ಪೂಜೆ
    ಕೊಕ್ಕರ್ಣೆ: ಇಲ್ಲಿನ ಶರನ್ನವರಾತ್ರಿ ಉತ್ಸವ ಸಮಿತಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಶರನ್ನವರಾತ್ರಿ ಪೂಜಾಮಹೋತ್ಸವ ಅ.17ರಿಂದ 26ರ ವರೆಗೆ ಜರುಗಲಿರುವುದು. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ. ಭಕ್ತರು ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವಂತೆ ದೇವಳ ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

    ಶ್ರೀ ಸಿಂಹವಾಹಿನಿ ಬನ್ನಿ ಮಹಾಕಾಳಿ ದೇವಳ
    ಬ್ರಹ್ಮಾವರ: ಬಾರಕೂರಿನ ಶ್ರೀ ಸಿಂಹವಾಹಿನಿ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಅ.17ರಿಂದ 25ರ ತನಕ ನವರಾತ್ರಿ ಉತ್ಸವ ಜರುಗಲಿದೆ. ನವರಾತ್ರಿಯಲ್ಲಿ ಪ್ರತಿ ದಿನ ನಿಸರ್ಗದತ್ತ ಬಣ್ಣಗಳಿಂದ ಶ್ರೀ ಚಕ್ರವನ್ನು ರಚಿಸಿ ಪೂಜಿಸುವುದು, ವಿಜಯ ದಶಮಿಯಂದು ಅನ್ನಪ್ರಾಶನ ಮತ್ತು ಸಂಜೆ ಮೈಸೂರು ಅರಸರ ಕಾಲದಂತೆ ದಿಗ್ವಿಜಯ ಉತ್ಸವ ಇಲ್ಲಿನ ವಿಶೇಷ .

    ಬಾರಕೂರು ಶ್ರೀ ಕಾಳಿಕಾಂಬಾ ದೇವಳ
    ಬ್ರಹ್ಮಾವರ: ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಅ.17ರಿಂದ 26ರ ತನಕ ವಿಶೇಷ ಪೂಜೆ ಮತ್ತು ಸಾಮೂಹಿಕ ಚಂಡಿಕಾಯಾಗ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

    ಇಂದು ಕಾಪಾಡಿಯಲ್ಲಿ ಚಂಡಿಕಾ ಹವನ
    ಕೊಕ್ಕರ್ಣೆ: ಕಾಪಾಡಿ ಹರಿಖಂಡಿಗೆ ಶ್ರೀ ವನದುರ್ಗಾ ನಾಗಬ್ರಹ್ಮ ಪ್ರತಿಷ್ಠಾನದಲ್ಲಿ ಅ.17ರಂದು 2ನೇ ವರ್ಷದ ಚಂಡಿಕಾ ಹವನ ಹಾಗೂ 5ನೇ ವರ್ಷದ ದುರ್ಗಾನಮಸ್ಕಾರ ಪೂಜೆ ಜರುಗಲಿದೆ. ಬೆಳಗ್ಗೆ ಮಹಾಪ್ರಾರ್ಥನೆ, ಚಂಡಿಕಾ ಹವನ, ಮಧ್ಯಾಹ್ನ ಮಹಾ ಪೂರ್ಣಾಹುತಿ, ಅನ್ನಸಂತರ್ಪಣೆ, ಸಾಯಂಕಾಲ ದುರ್ಗಾ ನಮಸ್ಕಾರ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಸಂತರ್ಪಣೆ ಜರುಗಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ ಎಂದು ಆಡಳಿತ ಮಂಡಳಿ ತಿಳಿಸಿದೆ.

    ಬಸ್ರೂರು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ
    ಗಂಗೊಳ್ಳಿ: ಪುರಾಣ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಮಹೋತ್ಸವ ಅ.17ರಿಂದ 26ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
    23ರಂದು ದುರ್ಗಾಷ್ಟಮಿ ಪ್ರಯುಕ್ತ ಸಾಯಂಕಾಲ ದುರ್ಗಾ ದೀಪ ನಮಸ್ಕಾರ ಸೇವೆ, ಅ.26ರಂದು ವಿಜಯದಶಮಿ, ಸಾಯಂಕಾಲ ರಜತ ಪಲ್ಲಕಿ ಉತ್ಸವ ಸೇವೆ, ಅ.29ರಂದು ಚಂಡಿಕಾ ಹವನ, ಮಧ್ಯಾಹ್ನ ಹವನದ ಪೂರ್ಣಾಹುತಿ, ಮಹಾಪೂಜೆ, ಸಮಾರಾಧನೆ, ಸಂಜೆ ರಜತ ಪಲ್ಲಕಿ ಉತ್ಸವ ಸೇವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ನವರಾತ್ರಿ ಸಮಯದಲ್ಲಿ ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

    ಕೋವಿಡ್-19ರ ನಿಯಮ ಮತ್ತು ಅವಕಾಶದ ಮಿತಿಯಲ್ಲಿ ದೇವಳದ ನವರಾತ್ರಿ ಮಹೋತ್ಸವದ ನಿತ್ಯಪೂಜೆ, ಸೇವಾ, ಹವನ, ಸಂತರ್ಪಣೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

    ಕೆಳಾರ್ಕಳಬೆಟ್ಟು ಮಾರಿಗುಡಿ
    ಉಡುಪಿ: ಕೆಳಾರ್ಕಳಬೆಟ್ಟು ಶ್ರೀ ದುರ್ಗಾ ಪರಮೇಶ್ವರಿ ಮಾರಿಗುಡಿ ಗದ್ದಿಗೆ ಶರನ್ನವರತ್ರಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ. ವಿಶೇಷ ಪೂಜೆಗಳು ನಡೆಯಲಿವೆ. ಅ.17 ರಿಂದ ಅ.25ವರೆಗೆ ರಾತ್ರಿ ಹೂವಿನಪೂಜೆ, ಭಜನೆ, ಮಹಾಪೂಜೆ ನಡೆಯಲಿದೆ. ಅ.26 ವಿಜಯದಶಮಿ ಪ್ರಯುಕ್ತ ಬೆಳಗ್ಗೆ 10ಕ್ಕೆ ಭಜನ ಮಂಗಲ, ಮಧ್ಯಾಹ್ನ 12ಕ್ಕೆ ಮಹಾಪುಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಳ
    ಆರ್ಡಿ: ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ದುರ್ಗಾಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ನವರಾತ್ರಿ ಮಹೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಅ. 18ರಂದು ನಡೆಯಲಿದೆ. ಬೆಳಗ್ಗೆ 8.45ಕ್ಕೆ ಮೂರ್ತಿ ಪ್ರತಿಷ್ಠಾಪನೆ, 10.30ಕ್ಕೆ ದುರ್ಗಾಹೋಮ, ದುರ್ಗಾಪೂಜೆ, 11ಕ್ಕೆ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ,ಪ್ರತಿಭಾ ಪುರಸ್ಕಾರ, 11.30ಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಯವರಿಂದ ಪ್ರವಚನ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 3.30ಕ್ಕೆ ಸ್ಪರ್ಧೆ, 4.30ಕ್ಕೆ ಬಹುಮಾನ ವಿತರಣೆ, ವಿಗ್ರಹ ವಿಸರ್ಜನೆ ನಡೆಯಲಿದೆ.

    ಚಾರ ಮಹಿಷಮರ್ದಿನಿ ಸನ್ನಿಧಿ
    ಉಡುಪಿ: ಚಾರ ಶ್ರೀ ಮಹಾಗಣಪತಿ ಮತ್ತು ಮಹಿಷಮರ್ದಿನಿ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರತಿ ದಿನ ಹೂವಿನಪೂಜೆ, ಕುಂಕುಮಾರ್ಚನೆ, ದುರ್ಗಾ ಪಾರಾಯಣ, ಹರಿವಾಣ ನೈವೇದ್ಯ, ಪಂಚಾಮೃತ ಅಭಿಷೇಕ ನಡೆಯಲಿದೆ. ಅ.25ರಂದು ಸನ್ನಿಧಿಯಲ್ಲಿ ಸಾಮೂಹಿಕ ದುರ್ಗಾಯಾಗ, ಸಾಯಂಕಾಲ 6ಕ್ಕೆ ಶ್ರೀ ಚಾರ ಮಹಿಷಮರ್ದಿನಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ರಾತ್ರಿ 8ಕ್ಕೆ ಸಾಮೂಹಿಕ ರಂಗಪೂಜಾ ದೀಪೋತ್ಸವ ನಡೆಯಲಿದೆ.

    ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಕ್ಷೇತ್ರ
    ಕಮಲಶಿಲೆ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಳದಲ್ಲಿ ಅ.17ರಿಂದ 26ರ ತನಕ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಅ.25ರಂದು ಮಹಾನವಮಿ, 26ರಂದು ವಿಜಯದಶಮಿ ಕಾರ್ಯಕ್ರಮ ನಡೆಯಲಿದೆ. ಭಕ್ತರು ಕೋವಿಡ್-19ಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಂಜಾಗ್ರತಾ ನಿಯಮಗಳನ್ನು ಪಾಲಿಸಿಕೊಂಡು ದೇವರ ದರ್ಶನ ಪಡೆಯುವಂತೆ ಶ್ರೀ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್.ಸಚ್ಚಿದಾನಂದ ಚಾತ್ರ ತಿಳಿಸಿದ್ದಾರೆ.

    ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾ
    ಆರ್ಡಿ: ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದಲ್ಲಿ ಅ.17ರಿಂದ ಅ.25ರ ತನಕ ಶರನ್ನವರಾತ್ರಿ ಮಹೋತ್ಸವವು ಜರುಗಲಿದೆ. ಪ್ರತಿದಿನ ಸಂಜೆ 6ಗಂಟೆಯಿಂದ ಸಪ್ತಶತೀ ಪಾರಾಯಣ ಪುರಸ್ಸರ, ದುರ್ಗಾ ನಮಸ್ಕಾರ ಸೇವೆ ನಡೆಯಲಿದೆ.

    ಕೆಳಾರ್ಕಳಬೆಟ್ಟು ಮಾರಿಗುಡಿ
    ಉಡುಪಿ: ಕೆಳಾರ್ಕಳಬೆಟ್ಟು ಶ್ರೀ ದುರ್ಗಾ ಪರಮೇಶ್ವರಿ ಮಾರಿಗುಡಿ ಗದ್ದಿಗೆ ಶರನ್ನವರತ್ರಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ. ವಿಶೇಷ ಪೂಜೆಗಳು ನಡೆಯಲಿವೆ. ಅ.17 ರಿಂದ ಅ.25ವರೆಗೆ ರಾತ್ರಿ ಹೂವಿನಪೂಜೆ, ಭಜನೆ, ಮಹಾಪೂಜೆ ನಡೆಯಲಿದೆ. ಅ.26 ವಿಜಯದಶಮಿ ಪ್ರಯುಕ್ತ ಬೆಳಗ್ಗೆ 10ಕ್ಕೆ ಭಜನ ಮಂಗಲ, ಮಧ್ಯಾಹ್ನ 12ಕ್ಕೆ ಮಹಾಪುಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಮಣೂರು ದೇವಳದಲ್ಲಿ ಶರನ್ನವರಾತ್ರಿ
    ಕೋಟ: ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅಂಗವಾಗಿ ಅ.17ರಿಂದ 25ರತನಕ ಪಾರ್ವತಿ ದೇವಿಗೆ ಪಂಚಾಮೃತ ಅಭಿಷೇಕ ಸಹಿತ ಪ್ರಾತ ಪೂಜೆ, ಚಂಡಿಕಾ ಸಪ್ತಸತೀ ಪಾರಾಯಣ ಸಹಿತ ಕಲ್ಪೋಕ್ತ ಮಹಾಪೂಜೆ, ಹೂವಿನ ಪೂಜೆ, ಅಕ್ಷರಾಭ್ಯಾಸ ನೆರವೇರಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಚ್. ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts