More

    Web Exclusive | ಮಂಗಳೂರಲ್ಲಿ ದೇಶದ ಮೊದಲ ಡೆಂಟಲ್ ರಿಸರ್ಚ್ ಲ್ಯಾಬ್; 2022ರಲ್ಲಿ ಕಾರ್ಯಾರಂಭ ನಿರೀಕ್ಷೆ..

    | ಪಿ.ಬಿ.ಹರೀಶ್ ರೈ ಮಂಗಳೂರು

    ದೇಶದಲ್ಲೇ ಪ್ರಥಮ ಬಾರಿಗೆ ದಂತ ವೈದ್ಯಕೀಯ ಸಂಶೋಧನಾ ಪ್ರಯೋಗಾಲಯ (ಡೆಂಟಲ್ ರಿಸರ್ಚ್ ಲ್ಯಾಬ್) ಮಂಗಳೂರಿನಲ್ಲಿ ಸ್ಥಾಪನೆಯಾಗುತ್ತಿದೆ. ನಗರದ ಮೇರಿಹಿಲ್​ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಸ್ಥಾಪನೆಯಾಗುತ್ತಿದ್ದು, ಇಲ್ಲಿ ಡೆಂಟಲ್ ರಿಸರ್ಚ್ ಲ್ಯಾಬ್ ಕಾರ್ಯಾರಂಭಿಸಲಿದೆ.

    ದೇಶದಲ್ಲಿ 313, ರಾಜ್ಯದಲ್ಲಿ 44 ದಂತ ವೈದ್ಯಕೀಯ ಕಾಲೇಜುಗಳಿವೆ. ಆದರೆ, ದಂತ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಈವರೆಗೆ ಪ್ರತ್ಯೇಕ ಸಂಶೋಧನಾ ಪ್ರಯೋಗಾಲಯವಿಲ್ಲ. ಈಗ ರಾಜೀವ್ ಗಾಂಧಿ ಆರೋಗ್ಯ ವಿವಿ ಪ್ರತ್ಯೇಕ ಸಂಶೋಧನಾ ಪ್ರಯೋಗಾಲಯ ಸ್ಥಾಪಿಸಲು ಮುಂದಾಗಿದೆ.

    ಏನಿದು ರಿಸರ್ಚ್ ಲ್ಯಾಬ್?

    ಹಲ್ಲಿನ ಶುಚಿತ್ವಕ್ಕೆ ಬಳಸುವ ಪೇಸ್ಟ್, ಬ್ರಷ್, ವಕ್ರ ಹಲ್ಲುಗಳನ್ನು ಸರಿಪಡಿಸಲು ಬಳಸುವ ಲೋಹದ ಸರಿಗೆ, ಹಲ್ಲಿನ ಸೆಟ್​ಗೆ ಬಳಸುವ ಸಿಮೆಂಟ್ ಸೇರಿ ದಂತ ವೈದ್ಯಕೀಯಕ್ಕೆ ಸಂಬಂಧಿಸಿದ ಯಾವುದೇ ಉಪಕರಣದ ಬಗ್ಗೆ ಮೊದಲು ಪ್ರಯೋಗಾಲಯದಲ್ಲಿ ಸೂಕ್ತ ರೀತಿ ಸಂಶೋಧನೆ ಅಗತ್ಯ. ಖಾಸಗಿ ಕಂಪನಿ ದಂತ ವೈದ್ಯಕೀಯಕ್ಕೆ ಸಂಬಂಧಿಸಿದ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಅಧಿಕೃತ ಪ್ರಯೋಗಾಲಯದಿಂದ ಸರ್ಟಿಫಿಕೆಟ್ ಪಡೆಯಬೇಕು. ಯಾವುದೇ ಹಾನಿಕಾರಕ ಅಂಶ ಇಲ್ಲ, ಅಡ್ಡ ಪರಿಣಾಮ ಇಲ್ಲ ಎಂದು ದೃಢಪಟ್ಟ ಬಳಿಕವೇ ಸಂಬಂಧಪಟ್ಟ ಇಲಾಖೆ ಬಳಕೆಗೆ ಅನುಮತಿ ನೀಡುತ್ತದೆ.

    ಏಕೀಕೃತ ವ್ಯವಸ್ಥೆ

    ದಂತ ವೈದ್ಯಕೀಯಕ್ಕೆ ಸಂಬಂಧಿಸಿ ಪ್ರತ್ಯೇಕ ಸಂಶೋಧನಾ ಪ್ರಯೋಗಾಲಯ ಇಲ್ಲದ ಕಾರಣ 3-4 ಪ್ರಯೋಗಾಲಯಗಳನ್ನು ಅವಲಂಬಿಸುವ ಅನಿವಾರ್ಯತೆ ಇದೆ. ದಂತ ಚಿಕಿತ್ಸೆ ಸಂಬಂಧಿಸಿದ ಸಂಶೋಧನೆಗೆ ವೈದ್ಯಕೀಯ ಪ್ರಯೋಗಾಲಯ, ಬಳಸುವ ವಯರ್, ಲೋಹ, ಸಿಮೆಂಟ್​ಗಳ ಗುಣಮಟ್ಟ ಪರೀಕ್ಷೆಗೆ ಇಂಜಿನಿಯರಿಂಗ್ ಪ್ರಯೋಗಾಲಯ, ಪೇಸ್ಟ್, ಮೌತ್​ವಾಶ್ ಮುಂತಾದ ಉತ್ಪನ್ನಗಳ ಸಂಶೋಧನೆಗೆ ಇನ್ನೊಂದು ಪ್ರಯೋಗಾಲಯಕ್ಕೆ ಅಲೆಯಬೇಕಿದೆ. ಮಂಗಳೂರಿನಲ್ಲಿ ಸ್ಥಾಪನೆಯಾಗುವ ಸಂಶೋಧನಾ ಲ್ಯಾಬ್​ನಲ್ಲಿ ಈ ಎಲ್ಲ ಸಂಶೋಧನೆಗಳನ್ನು ಮಾಡುವ ಸೌಲಭ್ಯ ಕಲ್ಪಿಸಲಾಗುತ್ತಿದೆ. 5 ಕೋಟಿ ರೂ.ವೆಚ್ಚದ ಎಲೆಕ್ಟ್ರಾನ್ ಮೈಕ್ರೋ ಸ್ಕೋಪ್ ಸಹಿತ ಅತ್ಯಾಧುನಿಕ ವ್ಯವಸ್ಥೆಯನ್ನು ಈ ಪ್ರಯೋಗಾಲಯ ಹೊಂದಲಿದೆ.

    Web Exclusive | ಮಂಗಳೂರಲ್ಲಿ ದೇಶದ ಮೊದಲ ಡೆಂಟಲ್ ರಿಸರ್ಚ್ ಲ್ಯಾಬ್; 2022ರಲ್ಲಿ ಕಾರ್ಯಾರಂಭ ನಿರೀಕ್ಷೆ..ಮಂಗಳೂರಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಹಲವು ವರ್ಷಗಳಿಂದ ನಡೆಸಿದ ಪ್ರಯತ್ನ ಈಗ ಸಾಕಾರಗೊಂಡಿದೆ. ಜತೆಗೆ ಪ್ರತ್ಯೇಕ ಡೆಂಟಲ್ ರಿಸರ್ಚ್ ಲ್ಯಾಬ್ ಸ್ಥಾಪಿಸುವಂತೆ ವಿವಿ ಸಭೆಗಳಲ್ಲಿ ಬೇಡಿಕೆ ಸಲ್ಲಿಸಿದ್ದೆವು. ವಿವಿ ಆಡಳಿತ ಸ್ಪಂದಿಸಿದ ಪರಿಣಾಮ, ಮಂಗಳೂರಿನಲ್ಲಿ 2 ವರ್ಷದಲ್ಲಿ ದೇಶದ ಮೊದಲ ಲ್ಯಾಬ್ ಕಾರ್ಯಾರಂಭಿಸಲಿದೆ.

    | ಡಾ.ಶಿವಶರಣ್ ಶೆಟ್ಟಿ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯ, ರಾಜೀವ್ ಗಾಂಧಿ ಆರೋಗ್ಯ ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts