More

    LIVE| ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದ ನೇರಪ್ರಸಾರ

    ನವದೆಹಲಿ: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಸಾಮಾನ್ಯವಾಗಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭ ಈ ಬಾರಿ ಕರೊನಾ ವೈರಸ್ ಭೀತಿಯಿಂದಾಗಿ ಮೊದಲ ಬಾರಿಗೆ ವರ್ಚುವಲ್ ಸಮಾರಂಭ ನಡೆಯುತ್ತಿದೆ.

    ಬೆಳಗ್ಗೆ 11 ಗಂಟೆಗೆ ಆರಂಭವಾದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ರಾಷ್ಟ್ರಪತಿ ಭವನದಿಂದ ಆನ್‌ಲೈನ್ ಮೂಲಕ ಕ್ರೀಡಾ ಗೌರವವನ್ನು ಪ್ರದಾನ ಮಾಡುತ್ತಿದ್ದಾರೆ. ಪ್ರಶಸ್ತಿ ವಿಜೇತರು ತಮಗೆ ಹತ್ತಿರವಿರುವ ದೇಶದ 9 ಸಾಯ್ ಕೇಂದ್ರಗಳಲ್ಲಿ ಹಾಜರಿದ್ದು, ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ.

    ಕ್ರೀಡಾ ಸಚಿವ ಕಿರಣ್ ರಿಜಿಜು, ಇನ್ನಿತರ ಅಧಿಕಾರಿಗಳು ವಿಜ್ಞಾನ ಭವನದಲ್ಲಿ ಕುಳಿತು ಸಮಾರಂಭ ವೀಕ್ಷಿಸುತ್ತಿದ್ದಾರೆ. ದೂರದರ್ಶನದಲ್ಲಿ ಕಾರ್ಯಕ್ರಮ ನೇರಪ್ರಸಾರವಾಗುತ್ತಿದೆ. ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ ಪ್ರಶಸ್ತಿ ಪುರಸ್ಕೃತರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.

    2020ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರು:
    ಖೇಲ್‌ರತ್ನ: ರೋಹಿತ್ ಶರ್ಮ (ಕ್ರಿಕೆಟ್), ಮರಿಯಪ್ಪನ್ ತಂಗವೇಲು (ಪ್ಯಾರಾ ಅಥ್ಲೆಟಿಕ್ಸ್), ಮನಿಕಾ ಬಾತ್ರಾ (ಟೇಬಲ್ ಟೆನಿಸ್), ವಿನೇಶ್ ಪೋಗಟ್ (ಕುಸ್ತಿ), ರಾಣಿ ರಾಂಪಾಲ್ (ಹಾಕಿ). ಅರ್ಜುನ ಪ್ರಶಸ್ತಿ: ಇಶಾಂತ್ ಶರ್ಮ (ಕ್ರಿಕೆಟ್), ಅತನು ದಾಸ್ (ಆರ್ಚರಿ), ದೀಪಕ್ ಹೂಡಾ (ಕಬಡ್ಡಿ), ದೀಪಿಕಾ ಠಾಕೂರ್ (ಹಾಕಿ), ದಿವಿಜ್ ಶರಣ್ (ಟೆನಿಸ್), ಆಕಾಶ್‌ದೀಪ್ ಸಿಂಗ್ (ಹಾಕಿ), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಮನು ಭಾಕರ್ (ಶೂಟಿಂಗ್), ಸೌರಭ್ ಚೌಧರಿ (ಶೂಟಿಂಗ್), ಮನೀಷ್ ಕೌಶಿಕ್ (ಬಾಕ್ಸಿಂಗ್), ಸಂದೇಶ್ ಜಿನ್‌ಗಾನ್ (ಫುಟ್‌ಬಾಲ್), ದತ್ತು ಭೋಕನಲ್ (ರೋಯಿಂಗ್), ರಾಹುಲ್ ಅವಾರೆ (ಕುಸ್ತಿ), ದ್ಯುತಿ ಚಂದ್ (ಅಥ್ಲೆಟಿಕ್ಸ್), ದೀಪ್ತಿ ಶರ್ಮ (ಕ್ರಿಕೆಟ್), ಶಿವ ಕೇಶವನ್ (ವಿಂಟರ್ ಸ್ಪೋರ್ಟ್ಸ್), ಮಧುರಿಕಾ ಪಾಟ್ಕರ್ (ಟೇಬಲ್ ಟೆನಿಸ್), ಮನೀಷ್ ನರ್ವಾಲ್ (ಪ್ಯಾರಾ ಶೂಟರ್), ಸಂದೀಪ್ ಚೌಧರಿ (ಪ್ಯಾರಾಥ್ಲೀಟ್), ಸೂಯಾಂಶ್ ನಾರಾಯಣ್ ಜಾಧವ್ (ಪ್ಯಾರಾ ಸ್ವಿಮ್ಮರ್), ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ (ಬ್ಯಾಡ್ಮಿಂಟನ್), ವಿಶೇಷ್ ಭಾರ್ಗುವಂಶಿ (ಬಾಸ್ಕೆಟ್‌ಬಾಲ್), ಅಜಯ್ ಸಾವಂತ್ (ಈಕ್ವೇಸ್ಟ್ರಿಯನ್), ಅದಿತಿ ಅಶೋಕ್ (ಗಾಲ್ಫ್), ಕಾಲೆ ಸಾರಿಕಾ (ಖೋ ಖೋ), ದಿವ್ಯಾ ಕಾಕ್ರನ್ (ರೆಸ್ಲಿಂಗ್).

    ದ್ರೋಣಾಚಾರ್ಯ ಪ್ರಶಸ್ತಿ: ಜೀವಮಾನ ಸಾಧನೆ ವಿಭಾಗ: ಧರ್ಮೇಂದ್ರ ತಿವಾರಿ (ಆರ್ಚರಿ), ಪುರುಷೋತ್ತಮ್ ರೈ (ಅಥ್ಲೆಟಿಕ್ಸ್), ಶಿವ್ ಸಿಂಗ್ (ಬಾಕ್ಸಿಂಗ್), ರಮೇಶ್ ಪಂಥಾನಿಯಾ (ಹಾಕಿ), ಕೃಷ್ಣನ್ ಕುಮಾರ್ ಹೂಡಾ (ಕಬಡ್ಡಿ), ವಿಜಯ್ ಮುಶೀಶ್ವರ್ (ಪ್ಯಾರಾ ಪವರ್‌ಲಿಫ್ಟಿಂಗ್), ನರೇಶ್ ಕುಮಾರ್ (ಟೆನಿಸ್), ಓಂ ಪ್ರಕಾಶ್ ದಾಹಿಯಾ (ರೆಸ್ಲಿಂಗ್). ಸಾಮಾನ್ಯ ವಿಭಾಗ: ಜೂಡ್ ಫೆಲಿಕ್ಸ್ (ಹಾಕಿ), ಯೋಗೇಶ್.ಎಂ (ಮಲ್ಲಕಂಬ), ಜಸ್‌ಪಾಲ್ ರಾಣಾ (ಶೂಟಿಂಗ್), ಕುಲದೀಪ್ ಕುಮಾರ್ (ವುಶು), ಗೌರವ್ ಖನ್ನಾ (ಪ್ಯಾರಾ ಬ್ಯಾಡ್ಮಿಂಟನ್). ಧ್ಯಾನ್‌ಚಂದ್ ಪ್ರಶಸ್ತಿ: ಕುಲದೀಪ್ ಸಿಂಗ್ ಬುಲ್ಲಾರ್, ಜಿನ್ಸಿ ಫಿಲಿಪ್ಸ್ (ಇಬ್ಬರೂ ಅಥ್ಲೆಟಿಕ್ಸ್), ಪ್ರದೀಪ್ ಗಂಧೆ, ತೃಪ್ತಿ ಮುರ್ಗುಂಡೆ (ಇಬ್ಬರೂ ಬ್ಯಾಡ್ಮಿಂಟನ್), ಎನ್.ಉಷಾ, ಲಖಾ ಸಿಂಗ್ (ಇಬ್ಬರೂ ಬಾಕ್ಸಿಂಗ್), ಸುಖ್ವಿಂದರ್ ಸಿಂಗ್ ಸಾಂಧು (ುಟ್‌ಬಾಲ್), ಅಜಿತ್ ಸಿಂಗ್ (ಹಾಕಿ), ಮನ್‌ಪ್ರೀತ್ ಸಿಂಗ್ (ಕಬಡ್ಡಿ), ರಣಜಿತ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಸತ್ಯಪ್ರಕಾಶ್ ತಿವಾರಿ (ಪ್ಯಾರಾ ಬ್ಯಾಡ್ಮಿಂಟನ್), ಮಂಜೀತ್ ಸಿಂಗ್ (ರೋಯಿಂಗ್), ಲೇಟ್ ಸಚಿನ್ ನಾಗ್ (ಈಜು), ನಂದನ್ ಪಿ ಬಾಲ್ (ಟೆನಿಸ್), ನೇತ್ರಾಪಾಲ್ ಹೂಡಾ (ರೆಸ್ಲಿಂಗ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts