More

    ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಭೇಟಿ ಮಾಡಿ ಬಜೆಟ್​ ಮಂಡನೆಗೆ ಒಪ್ಪಿಗೆ ಪಡೆದ ವಿತ್ತಸಚಿವೆ

    ನವದೆಹಲಿ: ಕೇಂದ್ರ ಬಜೆಟ್​ ಮಂಡನೆಗೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಂದ ಬಜೆಟ್​ ಮಂಡನೆಗೆ ಔಪಚಾರಿಕ ಒಪ್ಪಿಗೆ ಪಡೆದರು.

    ಭೇಟಿಯ ವೇಳೆ ಹಣಕಾಸು ರಾಜ್ಯ ಮಂತ್ರಿಗಳಾದ ಡಾ. ಭಾಗವತ್​ ಕಿಶಾನ್​ರಾವ್​ ಕಾರಡ್​ ಮತ್ತು ಶ್ರೀ ಪಂಕಜ್​ ಚೌಧರಿ ಹಾಗೂ ಹಣಕಾಸು ಸಚಿವಾಲಯದ ಅಧಿಕಾರಿಗಳು ನಿರ್ಮಲಾ ಸೀತಾರಾಮನ್ ಅವರಿಗೆ ಸಾಥ್​ ನೀಡಿದರು.

    ರಾಷ್ಟ್ರಪತಿಗಳ ಒಪ್ಪಿಗೆ ಬಳಿಕ ಸಂಸತ್ತಿನ ಕಡೆ ತೆರಳಲಿರುವ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆಗೂ ಮುನ್ನ ಸಂಪುಟ ಸಭೆಯಲ್ಲಿ ಬಜೆಟ್​ಗೆ ಅನುಮೋದನೆ ಪಡೆಯಲಿದ್ದಾರೆ. ಇದಾದ ನಂತರ ಬೆಳಗ್ಗೆ 11 ಗಂಟೆಗೆ ಬಜೆಟ್​ ಮಂಡನೆ ಆರಂಭಿಸಲಿದ್ದಾರೆ.

    ಕರೊನಾ ಅಲೆಗಳಿಂದ ಕಂಗೆಟ್ಟಿರುವ ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಇಂದಿನ ಬಜೆಟ್ ಮಹತ್ವದ್ದಾಗಿದ್ದು, ಯಾವ ಕ್ಷೇತ್ರಕ್ಕೆ ಏನೆಲ್ಲ ಕೊಡುಗೆ ಸಿಗಲಿದೆ? ರಾಜ್ಯದ ಪಾಲಿಗೆ ಏನೇನು ಬರಲಿದೆ? ಜನರಿಗೆ ಸಿಗುತ್ತಾ ತೆರಿಗೆ ವಿನಾಯಿತಿ? ಕರೋನದಿಂದ ಆದಾಯ ಕಳೆದುಕೊಂಡಿರುವ ವಲಯಕ್ಕೆ ಕೊಡುತ್ತಾ ಕೇಂದ್ರ ಗುಡ್ ನ್ಯೂಸ್? ಪೆಟ್ರೋಲ್, ಡಿಸೇಲ್ ಮೇಲಿನ ಸುಂಕ ಇಳಿಕೆ ಆಗುತ್ತಾ ಏರಿಕೆ ಆಗುತ್ತಾ? ಆರೋಗ್ಯ ಉಪಕರಣಗಳು ಮತ್ತು ಔಷಧಿಗಳ ಮೇಲೆ ಹಾಕ್ತಿರುವ ತೆರಿಗೆ ಕಡಿಮೆ ಆಗುತ್ತಾ? ಯಾವುದು ಇಳಿಕೆ ಯಾವುದು ಏರಿಕೆ? ಜನರಿಗೆ ಪ್ರಧಾನಿ ಮೋದಿ ಕೊಡ್ತಾರಾ ಗುಡ್ ನ್ಯೂಸ್? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಂದಿನ ಬಜೆಟ್​ನಲ್ಲಿ ಸಿಗಲಿದೆ.

    ಈ ಬಾರಿಯು ಸಾಂಪ್ರದಾಯಿಕ “ಬಹಿ ಖಾತಾ” ಬದಲು ಟ್ಯಾಬ್​ ಮೂಲಕ ಬಜೆಟ್​ ಮಂಡಿಸಲಿರುವ ವಿತ್ತ ಸಚಿವೆ

    ಚುನಾವಣಾ ಗಿಫ್ಟ್ ಬಜೆಟ್: ಕರೊನೋತ್ತರ ಬದುಕಿಗೆ ಉತ್ತೇಜನ; ಆರ್ಥಿಕತೆಗೂ ಟಾನಿಕ್

    ಆರೋಗ್ಯಕರ ಅರ್ಥವ್ಯವಸ್ಥೆ: ಆರ್ಥಿಕ ಸಮೀಕ್ಷೆ 2021-22 ಮಂಡನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts