More

    ಭಾರತ ಪತ್ರಿಕಾರಂಗಕ್ಕೆ ಉಜ್ವಲ ಭವಿಷ್ಯ, ಕ್ಯಾ.ಗಣೇಶ್ ಕಾರ್ಣಿಕ್ ಅಭಿಮತ

    ಕಾರ್ಕಳ: ವಿಶ್ವದಲ್ಲಿಯೇ ಭಾರತದ ಪತ್ರಿಕಾರಂಗಕ್ಕೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ, ವಿಪುಲ ಅವಕಾಶಗಳಿವೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ಹೇಳಿದರು.

    ಕಾರ್ಕಳ ಪ್ರವಾಸಿ ಮಂದಿರದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳಿಂದ ಹಾಗೂ ದಿನದ 24 ಗಂಟೆಗಳ ಕಾಲ ಸುದ್ದಿ ಮಾಹಿತಿ ಒದಗಿಸುವ ಸುದ್ದಿಜಾಲಗಳ ನಡುವೆ ಅತ್ಯಂತ ನಿಖರ ಹಾಗೂ ವಿಶ್ವಾಸಾರ್ಹ ಸುದ್ದಿ ನೀಡುವುದು ಪತ್ರಿಕಾರಂಗದ ಕಾರ್ಯವಾಗಿದೆ ಎಂದರು.

    ಪತ್ರಕರ್ತರಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಜಯನ್ ಮಲ್ಪೆ, ಸುಂದರ ಪೂಜಾರಿ, ಸುಮಿತ್ ಬೈಲೂರು ಅಭಿಪ್ರಾಯ ಹಂಚಿಕೊಂಡರು.

    ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪಾಂಡೇಲು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಹಮ್ಮದ್ ಗೌಸ್, ನಲ್ಲೂರು ಕೃಷ್ಣ ಶೆಟ್ಟಿ, ಕಾರ್ಕಳ ಪುರಸಭೆಯ ನಿಟಕಪೂರ್ವ ಕೌನ್ಸಿಲರ್ ಪಾರ್ಶ್ವನಾಥ ವರ್ಮ, ಸಾಮಾಜಿಕ ಕಾರ್ಯಕರ್ತ ಆಗಸ್ಟಿನ್, ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ನಾಯಕ್ ಸಾಣೂರು ಮೊದಲಾದವರು ಉಪಸ್ಥಿತರಿದ್ದರು.

    ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ್ ಸ್ವಾಗತಿಸಿದರು. ಕೋಶಾಧಿಕಾರಿ ವಿಲಾಸ ಕುಮಾರ್ ನಿಟ್ಟೆ ವಂದಿಸಿದರು. ಜಿಲ್ಲಾ ಕಮಿಟಿ ಸದಸ್ಯ ನಿರೂಪಿಸಿದರು.

    ಪ್ರಶಸ್ತಿ ಸ್ವೀಕರಿಸಿದವರು: ಸಾಮಾಜಿಕ ಹೋರಾಟಗಾರ ಜಯನ್ ಮಲ್ಪೆ- ಜನದನಿ ಸಿರಿ, ಉಡುಪಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಬೈಲೂರು- ಜಾಗೃತಿ ಸಿರಿ, ನಿವೃತ್ತ ಆರೋಗ್ಯಾಧಿಕಾರಿ ಎಂ.ಸುಂದರ ಪೂಜಾರಿ-ಸೇವಾ ಸಿರಿ, ಅಕ್ಷತಾ ಬೋಳ-ವಿಕ್ರಮ ಸಿರಿ, ಸಮಾಜಸೇವಕ ಮಹಮ್ಮದ್ ಶರೀಫ್-ಕಾಯಕ ಸಿರಿ, ಚಿತ್ರಕಲಾವಿದ ವಿಜಯ ಪರವ-ವರ್ಣ ಸಿರಿ ಹಾಗೂ ಪತ್ರಿಕಾ ವಿತರಕರಾದ ಸತೀಶ್ ಪೈ ಸಾಣೂರು, ದಿವಾಕರ ಆಚಾರ್ಯ ದುರ್ಗ ಅವರಿಗೆ ಶ್ರಮ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts