More

    ಪ್ರತಿಭೆ, ಪರಿಶ್ರಮಕ್ಕೆ ಮಾತ್ರ ಯಶಸ್ಸು ಒಲಿಯಲು ಸಾಧ್ಯ : ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ. ಶ್ಯಾಂ

    ಪ್ರತಿಭೆ ಹಾಗೂ ಪರಿಶ್ರಮ ಇದ್ದರೆ ಮಾತ್ರ ಯಶಸ್ಸು ದೊರೆಯಲು ಸಾಧ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ. ಶ್ಯಾಂ ಪ್ರಸಾದ್ ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಚೆನ್ನೈನ ಸುರಾನ ಮತ್ತು ಸುರಾನ ಅಂತಾರಾಷ್ಟ್ರೀಯ ಕಾನೂನು ಸಂಸ್ಥೆ (ಎಸ್‌ಎಸ್‌ಐಎ) ವತಿಯಿಂದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿದ್ದ 20ನೇ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಕಠಿಣ ಪರಿಶ್ರಮ ವಹಿಸಿ ಯಶಸ್ಸು ಕಾಣಬೇಕು

    ನಿಮ್ಮ ಪ್ರತಿಭೆಗೆ ಯಶಸ್ಸು ಒಲಿಯುವುದು ಕೇವಲ ಶೇ.1 ರಷ್ಟು ಮಾತ್ರ. ಇನ್ನುಳಿದ ಶೇ.99 ರಷ್ಟು ಯಶಸ್ಸನ್ನು ನೀವು ಪರಿಶ್ರಮ ದಿಂದಲೇ ಪಡೆಯಬೇಕು. ಹಾಗಾಗಿ ಕಾನೂನು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರೈಸಿದ ವೃತ್ತಿ ಜೀವನಕ್ಕೆ ಕಾಲಿರಿಸಿದ ನಂತರ ಕಠಿಣ ಪರಿಶ್ರಮ ವಹಿಸಿ ಯಶಸ್ಸು ಕಾಣಬೇಕು ಎಂದು ಹೇಳಿದರು.

    ವಕೀಲ ವೃತ್ತಿಯಲ್ಲಿ ತೊಡಗುವವರು ಹೆಚ್ಚಿನ ಸಮಯವನ್ನು ಅಧ್ಯಯನಕ್ಕೆ ಮೀಸಲಿಡಬೇಕು. ಹೆಚ್ಚು ಅಧ್ಯಯನ ನಡೆಸಿದಷ್ಟು ಉತ್ತಮ ವಕೀಲರಾಗಿ ರೂಪುಗೊಳ್ಳಬಹುದು. ನಿಮ್ಮದೇ ಶೈಲಿಯಲ್ಲಿ ನೀವು ವಾದ ಮಂಡಿಸಿ. ಆದರೆ, ಪ್ರಕರಣವನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳುವ ರೀತಿಯಲ್ಲಿ ವಾದ ಮಂಡಿಸಿ ಎಂದು ಸಲಹೆ ನೀಡಿದರು.

    ಹಿರಿಯರೇ ನಿಮಗೆ ಮಾರ್ಗದರ್ಶಕರು

    ಕಾಲೇಜಿನಲ್ಲಿ ನಿಮಗೆ ಮಾರ್ಗದರ್ಶನ ನೀಡಲು ಪ್ರಾಧ್ಯಾಪಕರು ಇರುತ್ತಾರೆ. ಆದರೆ, ವಿದ್ಯಾಭ್ಯಾಸ ಮುಗಿಸಿ ವಕೀಲ ವೃತ್ತಿಗೆ ಕಾಲಿಟ್ಟ ಸಂದರ್ಭ ನಿಮಗೆ ಮಾರ್ಗದರ್ಶ ನೀಡುವವರು ಯಾರು? ಅಂತಹ ಸಂದರ್ಭದಲ್ಲಿ ಹಿರಿಯ ವಕೀಲರ ಮಾರ್ಗದರ್ಶನ ಪಡೆಯಬೇಕು. ಹಿರಿಯರ ಅನುಭವಗಳನ್ನು ಪಡೆದು ಉತ್ತಮ ವಕೀಲರಾಗಿ ರೂಪುಗೊಳ್ಳಬೇಕು ಎಂದರು.

    ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಮಾತನಾಡಿ, ದೇಶದ ಜನರು ಅತ್ಯಂತ ಬುದ್ಧಿವಂತರು ಇದ್ದಾರೆ. ಈ ಕಾರಣಕ್ಕೆ ವಿಶ್ವದ ಹಲವಾರು ಭಾಗಗಳಲ್ಲಿ ಭಾರತೀಯರು ತಮ್ಮ ಸಾಧನೆಯನ್ನು ತೋರುತ್ತಿದ್ದಾರೆ. ವಿಶ್ವದ ಪ್ರತಿಷ್ಠಿತ ಕಂಪನಿಗಳನ್ನು ಭಾರತೀಯರೇ ಮುನ್ನಡೆಸುತ್ತಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ ಶೇ.25 ರಷ್ಟು ಭಾರತೀಯ ವಿಜ್ಞಾನಿಗಳೇ ಇದ್ದಾರೆ ಎಂಬುದು ಹೆಮ್ಮೆಯ ವಿಚಾರ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts