More

    ರಾಷ್ಟ್ರೀಯ ವಿಚಾರ ಸಂಕಿರಣ

    ಉಡುಪಿ: ಪ್ರಸ್ತುತ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಂಶೋಧನೆಗಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿ, ಹಿತಕ್ಕಾಗಿ ಪರಿಸರಕ್ಕೆ ಹಾನಿಕಾರಕವಲ್ಲದ ರೀತಿಯಲ್ಲಿ ನಮ್ಮ ಸಂಶೋಧನೆಗಳು ನಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಭಿಪ್ರಾಯಪಟ್ಟರು. ಉಡುಪಿ ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ಸುಸ್ಥಿರ ಅಭಿವೃದ್ಧಿಗೆ ‘ಅಡ್ವಾನ್ಸಸ್ ಇನ್ ನ್ಯಾನೋ ಟೆಕ್ನಾಲಜಿ ಮತ್ತು ಎನ್ವಿರಾನ್‌ಮೆಂಟಲ್ ಕೆಮಿಸ್ಟ್ರಿ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
    ವಿಶೇಷವಾಗಿ ನ್ಯಾನೋ ತಂತ್ರಜ್ಞಾನ ಅನ್ವೇಷಣೆ ಬಳಿಕ ಹಲವು ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು. ಏರೋಸ್ಪೇಸ್, ಕೃಷಿ, ಕೈಗಾರಿಕೆ ಕ್ಷೇತ್ರಕ್ಕೆ ನ್ಯಾನೋ ತಂತ್ರಜ್ಞಾನ ಅನುಕೂಲಕರವಾಗಿ ಪರಿಣಮಿಸಿತು. ನ್ಯಾನೋ ತಂತ್ರಜ್ಞಾನ ಅಭಿವೃದ್ಧಿಯಿಂದ ನಮ್ಮ ಪರಿಸರಕ್ಕೂ ಅನುಕೂಲವಾಯಿತು. ಸಂಶೋಧನೆ, ಅನ್ವೇಷಣೆ ಜತೆಗೆ ಪರಿಸರ ಸಂರಕ್ಷಣೆ ಆಶಯ ನಮ್ಮಲ್ಲಿರಬೇಕು. ಹೊಸ ಅವಕಾಶಗಳು ನಮ್ಮ ಮುಂದಿವೆ. ಇದಕ್ಕೆ ಬೇಕಾದ ಎಲ್ಲ ಸಹಕಾರ ಸಿಗುತ್ತಿದೆ ಎಂದು ಹೇಳಿದರು. ಮಣಿಪಾಲ ಆಕಾಡೆಮಿ ಆಫ್ ಹೈಯರ್ ಎಜುಕೇಶನ್ ಎಂಐಟಿ ನ್ಯಾನೋ ಟೆಕ್ನಾಲಜಿ ವಿಭಾಗ ಪ್ರಾಧ್ಯಾಪಕ ಡಾ.ಸುರೇಶ್ ಕುಲಕರ್ಣಿ ಮಾತನಾಡಿ, ವಿಜ್ಞಾನ-ತಂತ್ರಜ್ಞಾನ ನಿರ್ದಿಷ್ಟ ಚೌಕಟ್ಟು ಹೊಂದಿರದೆ ವಿಸ್ತಾರ ರೂಪ ಹೊಂದಿದೆ. ಇಂದು ಗ್ರಾಹಕ ಬಳಕೆಯ 500ಕ್ಕೂ ಅಧಿಕ ಪರ್ಸನಲ್ ಕೇರ್ ಉತ್ಪನ್ನಗಳು ನ್ಯಾನೋ ತಂತ್ರಜ್ಞಾನದ ಅಡಿಯಲ್ಲಿ ರೂಪುಗೊಂಡಿರುವಂತಾಗಿದೆ. ಆರೋಗ್ಯ, ಸೇನೆ, ವಿದ್ಯುತ್ ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನ ಮಹತ್ವದ ಬೆಳವಣಿಗೆಗೆ ಕಾರಣವಾಗಿದೆ ಎಂದರು. ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ.ಎಂ.ಜಿ ವಿಜಯ ಅಧ್ಯಕ್ಷತೆ ವಹಿಸಿದ್ದರು. ಪಿಯುಸಿ ಪ್ರಾಂಶುಪಾಲೆ ಮಾಲತಿದೇವಿ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವಿಭಾಗ ಪ್ರಾಧ್ಯಾಪಕ ಪ್ರೊ.ಕೆ.ಭಾಸ್ಕರ ಆಚಾರ್ಯ ವಂದಿಸಿದರು. ವಿಭಾಗ ಮುಖ್ಯಸ್ಥ ಪ್ರೊ.ಅರುಣ್ ಕುಮಾರ್ ಬಿ. ಸ್ವಾಗತಿಸಿದರು. ಚೈತ್ರಾ ಪೈ ಕಾರ್ಯಕ್ರಮ ನಿರೂಪಿಸಿದರು.

    ಸವಾಲಾಗಿ ಕಾಡಲಿದೆ ನೀರಿನ ಸಮಸ್ಯೆ: ಮಾಹೆ ರಿಜಿಸ್ಟ್ರರ್ ಡಾ.ನಾರಾಯಣ ಸಭಾಹಿತ್ ಮಾತನಾಡಿ, ನಮ್ಮಲ್ಲಿ ಉತ್ತಮ ಯೋಜನೆಯೊಂದು ಆರಂಭಗೊಳ್ಳುವಾಗ ಇರುವಷ್ಟು ಆಸಕ್ತಿ ಅನಂತರದ ಪ್ರಕ್ರಿಯೆಯಲ್ಲಿ ಇರುವುದಿಲ್ಲ. ಹೀಗಾಗಿ ಸಾಕಷ್ಟು ಯೋಜನೆಗಳು ಅನುಷ್ಠಾನದಲ್ಲಿ ವಿಫಲವಾಗುತ್ತವೆ. ನಗರಗಳು ದೊಡ್ಡದಾಗಿ ಬೆಳೆಯುತ್ತಿದ್ದು, ಜನಸಂಖ್ಯೆ ಹೆಚ್ಚುತ್ತಿದೆ. ಇದು ಸಂಪನ್ಮೂಲ ಕೊರತೆಗೆ ಕಾರಣವಾಗುತ್ತದೆ. ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಬಳಸಿದ ನೀರು ಶುದ್ಧಿಕರಿಸಿ ಮರು ಬಳಕೆ ಮಾಡುವ ವಿಧಾನದ ಬಗ್ಗೆ ವ್ಯವಸ್ಥಿತ ಸಂಶೋಧನೆಗಳು ನಡೆಯಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts