More

    ಮಂಜೇಶ್ವರದ ಮನೆಗಳಲ್ಲಿ ಸಿದ್ಧವಾಗುತ್ತಿವೆ 17,500 ತಿರಂಗಾ!

    ಮಂಜೇಶ್ವರ: ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕಾಗಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ 17,500 ರಾಷ್ಟ್ರ ಧ್ವಜಗಳನ್ನು ತಯಾರಿಸಲಾಗುತ್ತಿದೆ. ಆಗಸ್ಟ್ 13ರೊಳಗೆ ಅಗತ್ಯವಿರುವವರಿಗೆ ತಲುಪಿಸಲು ಮನೆಗಳಲ್ಲಿ ಮತ್ತು 45 ಕುಟುಂಬಶ್ರೀ ಘಟಕಗಳು ಧ್ವಜ ತಯಾರಿಯಲ್ಲಿ ತೊಡಗಿಸಿಕೊಂಡಿವೆ.

    ಘಟಕಗಳಿಗೆ ವಾರದ ಹಿಂದೆಯೇ ಧ್ವಜ ತಯಾರಿಗೆ ಸಾಮಗ್ರಿಗಳು ಒದಗಿಸಲಾಗಿತ್ತು. ಬಳಿಕ ಸದಸ್ಯರು ಮನೆ, ಅಂಗಡಿಗಳಿಗೆ ತಂದು ತಯಾರಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ಮಂಗಳೂರು ಮತ್ತು ತಿರುಪುರದಿಂದ ಬಟ್ಟೆ ತರಲಾಗಿತ್ತು. ಮಂಜೇಶ್ವರ, ಕಡಂಬಾರ್, ಕಣ್ವತೀರ್ಥ, ಅರಿಮಲ, ಕುಂಜತ್ತೂರು ಮುಂತಾದೆಡೆ ಮನೆಗಳಲ್ಲಿ ಧ್ವಜಗಳನ್ನು ತಯಾರಿಸಲಾಗುತ್ತದೆ. ಆಗಸ್ಟ್ 8 ಮತ್ತು 9ರಂದು ಧ್ವಜಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಅಶೋಕ ಚಕ್ರದ ಮುದ್ರೆ ಮೂಡಿಸಲಾಗುತ್ತದೆ.

    ಬಳಿಕ 10, 11 ಮತ್ತು 12ರಂದು ತಲುಪಿಸಲಾಗುವುದು. ಆಗಸ್ಟ್ 10ರಂದು ಮಂಜೇಶ್ವರದ ಶಾಲೆಗಳಿಗೆ ವಿತರಿಸಲಾಗುವುದು. 11 ಮತ್ತು 12ರಂದು ಮಂಜೇಶ್ವರ ಪಂಚಾಯಿತಿ ಕಚೇರಿ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಧ್ವಜಗಳನ್ನು ತಲುಪಿಸಲಾಗುವುದು ಎಂದು ಕುಟುಂಬಶ್ರೀ ಸದಸ್ಯರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts