More

    ಹೊಟ್ಟೆಯೇ ಇಲ್ಲದೆ 12 ವರ್ಷ ಬದುಕಿದ್ದ ಮಹಿಳೆ ಸಾವು

    ಪುಣೆ: ಫುಡ್​​ ಬ್ಲಾಗರ್​  ‘ದ ಗಟ್ಲೆಸ್ ಫುಡೀ’  ಎಂದು ಜನಪ್ರಿಯಳಾಗಿದ್ದ 50 ವರ್ಷದ ನತಾಶಾ ದಿಡ್ಡಿ, ಮಾರ್ಚ್ 24 ರಂದು ನಿಧನರಾದರು.  ಈಕೆಯ ನಿಧನದ ಸುದ್ದಿಯನ್ನು ಅವರ ಪತಿ ಇನ್​ಸ್ಟಾಗ್ರಾಮ್​​ನಲ್ಲಿ ಖಚಿತಪಡಿಸಿದ್ದಾರೆ.

    ನತಾಶಾ ಪತಿ ಇನ್​ಸ್ಟಾಗ್ರಾಮ್​​ನಲ್ಲಿ, ನನ್ನ ಹೆಂಡತಿ ನತಾಶಾ  ಅವರನ್ನು ಕಳೆದುಕೊಂಡಿದ್ದು, ತುಂಬಾ ನೋವು ಮತ್ತು ದುಃಖದಿಂದ ಕೂಡಿದೆ. 2024 ಮಾರ್ಚ್ 24ರ ಮುಂಜಾನೆ ಪುಣೆಯಲ್ಲಿ ನತಾಶಾ ಸ್ವರ್ಗವಾಸಿಯಾಗಿದ್ದಾರೆ. ನತಾಶಾ ಅವರ ಪೋಸ್ಟ್‌ಗಳು ಲಕ್ಷಾಂತರ ಜನರಿಗೆ ಉತ್ತೇಜನ ಮತ್ತು ಸ್ಫೂರ್ತಿ ನೀಡಿರುವುದರಿಂದ ಅವರ ಇನ್‌ಸ್ಟಾಗ್ರಾಮ್ ಖಾತೆ(@thegutlessfoodie)ಯನ್ನು  ಆಕ್ಟಿವ್​ ಆಗಿ ಇಡಲಾಗುತ್ತದೆ ಎಂದು ಅವರು ಹಂಚಿಕೊಂಡಿದ್ದಾರೆ.

    ಭಾರತದ ಪುಣೆಯ ನತಾಶಾ ‘ದ ಗಟ್‌ಲೆಸ್ ಫುಡೀ’ ನಿಂದ ಜನಪ್ರಿಯವಾಗಿದ್ದರು. ಅವರ Instagram ಫೀಡ್ ನತಾಶಾ ಅವರೇ ಬೇಯಿಸಿದ ರುಚಿಕರವಾದ ಆಹಾರದ ಚಿತ್ರಗಳಿಂದ ತುಂಬಿದೆ. ನತಾಶಾ ರಾಯಭಾರ ಕಚೇರಿಯಲ್ಲಿ ಸ್ವೀಡಿಷ್ ಬ್ರ್ಯಾಂಡ್ ಅನ್ನು ನಿರ್ವಹಿಸುವಾಗ ಸ್ವೀಡಿಷ್ ಟ್ರೇಡ್ ಕಮಿಷನರ್ ಬೆಂಗ್ಟ್ ಜಾನ್ಸನ್ ಅವರನ್ನು ಎರಡನೇ ವಿವಾಹವಾಗಿದ್ದರು.

    ನತಾಶಾ ತನ್ನ ಮೊದಲ ಮದುವೆಯಿಂದ ಹೊರಬಂದ ಒಂದು ವರ್ಷದ ನಂತರ ವಿಪರೀತ ಹೊಟ್ಟೆ ನೋವು, ಭುಜ ನೋವು ಅನುಭವಿಸಲು ಪ್ರಾರಂಭಿಸಿದರು. ಆಕೆಯ ಭುಜದ ಮೇಲೆ ಎರಡು ಶಸ್ತ್ರಚಿಕಿತ್ಸೆಗಳು ಮತ್ತು ಮೂರು ಬಾರಿ ವಿಕಿರಣ ಚಿಕಿತ್ಸೆಯ ನಂತರವೂ ವೈದ್ಯರಿಗೆ ಅವಳ ನೋವನ್ನು ಪರಿಹರಿಸಲು ಸಾಧ್ಯವಾಗಲಿಲ್ಲ. ಕಡೆಗೆ ವೈದ್ಯರು ಹೊಟ್ಟೆಯಲ್ಲಿ ಟ್ಯೂಮರ್ ಪತ್ತೆ ಹಚ್ಚಿದ ಬಳಿಕ ಎಂಟು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ, ನತಾಶಾ ಅವರ ಹೊಟ್ಟೆಯನ್ನು ತೆಗೆದುಹಾಕಿದ್ದರು. ತನ್ನ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕಾರಣ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಆಹಾರ-ಸಂಬಂಧಿತ ನಿರ್ಬಂಧಗಳೊಂದಿಗೆ ಬದುಕಿದರು. ಅವರು ಡಂಪಿಂಗ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು. ನತಾಶಾ ಅವರು ಏನು ತಿಂದರೂ ಅದು ನೇರವಾಗಿ ತನ್ನ ಕರುಳಿಗೆ ಹೋಗುತ್ತಿತ್ತು. ಇದರ ಅಡ್ಡ ಪರಿಣಾಮಗಳು ವಿಪರೀತವಾಗಿ ಬೆವರುವುದು, ವ್ಯಾಪಕವಾಗಿ ಆಕಳಿಕೆ ಮತ್ತು ಶೌಚಾಲಯಕ್ಕೆ ಅನೇಕ ಬಾರಿ ಓಡಾಡುವುದು ಸೇರಿದ್ದವು. ಇಷ್ಟೆಲ್ಲ ಸಮಸ್ಯೆ ಇದ್ದರೂ ಅವರು ರುಚಿರುಚಿಯಾದ ಅಡುಗೆಗಳನ್ನು ತಯಾರಿಸಿ ರೆಸಿಪಿಯನ್ನು ತಮ್ಮ ಪೇಜ್‌ನಲ್ಲಿ ಹಂಚಿಕೊಳ್ಳುತ್ತಿದ್ದರು.

    ನತಾಶಾ ಅವರ ಸಹೋದರ, ಸ್ಯಾಮ್ ದಿಡ್ಡಿ ಕೂಡ ತನ್ನ ಪ್ರೀತಿಯ ಸಹೋದರಿಯನ್ನು ನೆನಪಿಸಿಕೊಂಡು ತನ್ನ ಕಿರಿಯ ಸಹೋದರಿ ನತಾಶಾ ಕಳೆದ 12 ವರ್ಷಗಳಿಂದ ಹೊಟ್ಟೆಯಿಲ್ಲದೆ ಬದುಕುತ್ತಿದ್ದಳು ಎಂದು ಬಹಿರಂಗಪಡಿಸಿದ್ದಾರೆ.

    ಹಣಕಾಸು ಸಚಿವರ ಬಳಿಯೇ ದುಡ್ಡಿಲ್ಲವಂತೆ! ಬಿಜೆಪಿ ಆಫರ್​ ತಿರಸ್ಕರಿಸಿದ ನಿರ್ಮಲಾ ಸೀತಾರಾಮನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts