More

    ನರಗುಂದ ಪುರಸಭೆ ಅಧಿಕಾರಿಗಳ ಕಾರ್ಯಾಚರಣೆ ತರಕಾರಿ ಅಂಗಡಿ, ಮುಂಗಟ್ಟು ತೆರವು

    ನರಗುಂದ: ಪುರಸಭೆಯ ನಿಯಮ ಗಾಳಿಗೆ ತೂರಿ ಪಟ್ಟಣದ ಎಲ್ಲೆಂದರಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ವಿವಿಧ ಅಂಗಡಿ, ಮುಂಗಟ್ಟುಗಳನ್ನು ಪುರಸಭೆ ಸದಸ್ಯರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಪೊಲೀಸ್ ಇಲಾಖೆ ನೇತೃತ್ವದಲ್ಲಿ ಗುರುವಾರ ಜಂಟಿ ತೆರವು ಕಾರ್ಯಾಚರಣೆ ನಡೆಸಿದರು.

    ಪಟ್ಟಣದ ಬಸವೇಶ್ವರ ವರ್ತಲದಿಂದ ತರಕಾರಿ ಮುಖ್ಯ ಮಾರುಕಟ್ಟೆ ಪ್ರದೇಶದವರೆಗೆ ಅನಧಿಕೃತ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವಿವಿಧ ವ್ಯಾಪಾರಸ್ಥರನ್ನು ತೆರವುಗೊಳಿಸಲಾಯಿತು.

    ರಸ್ತೆ ಮೇಲೆ ನಡೆಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡು ಎರಡು ಟ್ರ್ಯಾಕ್ಟರ್​ಗಳ ಮೂಲಕ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು.

    ಭದ್ರಗೌಡ್ರ ಸಂದಿ, ಶ್ರೀರಾಮಪೇಟೆಯಲ್ಲಿ ಆಗುತ್ತಿರುವ ನಿರಂತರ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಲ್ಲಿ ಯಾರೊಬ್ಬರೂ ತರಕಾರಿ ವ್ಯಾಪಾರ ನಡೆಸುವಂತಿಲ್ಲ ಎಂದು ಪುರಸಭೆ ಸದಸ್ಯರು, ಅಧಿಕಾರಿಗಳು ಸೂಚಿಸಿದರು.

    ಇದರಿಂದ ವಿ.ಎನ್. ಕೊಳ್ಳಿಯವರ, ಅಪ್ಪಣಗೌಡ ನಾಯ್ಕರ, ಬಸು ಪಾಟೀಲ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಕೆಲ ತರಕಾರಿ ವ್ಯಾಪಾರಸ್ಥರು ಪುರಸಭೆ ಆಡಳಿತ ಮಂಡಳಿಯವರು ಸರ್ವಾಧಿಕಾರಿ ಮನೋಭಾವ ತೋರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿಪಿಐ ಮಲ್ಲಯ್ಯ ಮಠಪತಿ ಮಧ್ಯಪ್ರವೇಶಿಸಿ, ಕಾನೂನು ನಿಯಮ ಪಾಲಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳೆ. ಅಣ್ಣಪ್ಪ ದೊಡಮನಿ, ಪುರಸಭೆ ಸದಸ್ಯರಾದ ಮಹೇಶ ಬೋಳಶೆಟ್ಟಿ. ದತ್ತು ಜೋಗಣ್ಣವರ, ಸ್ವಾಭಿಮಾನಿ ರಕ್ಷಣಾ ವೇದಿಕೆ ಜಿಲ್ಲಾ ಪ್ರ. ಕಾರ್ಯದರ್ಶಿ ರವಿ ಚಿಂತಾಲ, ಪ್ರಶಾಂತ ಜೋಶಿ, ರಾಚನಗೌಡ ಪಾಟೀಲ, ಬಸು ಪಾಟೀಲ, ಚಂದ್ರಗೌಡ ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ಸುನೀಲ ಕುಷ್ಟಗಿ, ದಿವಾನಸಾಬ ಕಿಲ್ಲೇದಾರ. ಸಂಗಮೇಶ ಬ್ಯಾಳಿ, ಪ್ರೀತಿ ಗವಿಮಠ, ಹಸನ್ ತಹಶೀಲ್ದಾರ, ಸಿದ್ದಪ್ಪ ಯಲಿಗಾರ, ಹನುಮಂತ ಹವಾಲ್ದಾರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts