More

    ಕ್ಷಯ ರೋಗ ನಿರ್ಮೂಲನೆಗೆ ಸರ್ಕಾರ ಪಣ ತೊಟ್ಟಿದೆ- ಡಾ. ರೇಣುಕಾ ಕೊರವನವರ

    ನರಗುಂದ: ಕ್ಷಯ ರೋಗ ನಿರ್ಮೂಲನೆಗೆ ಸರ್ಕಾರ ಪಣ ತೊಟ್ಟಿದೆ. ರೋಗದ ಲಕ್ಷಣಗಳು ಇದ್ದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರೇಣುಕಾ ಕೊರವನವರ ಹೇಳಿದರು.
    ತಾಲೂಕಿನ ಜಗಾಪೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಎರಡು ವಾರಕ್ಕಿಂತ ಹೆಚ್ಚು ಸತತ ಕೆಮ್ಮು, ಕಫ, ಕಫದೊಂದಿಗೆ ರಕ್ತ ಬೀಳುವುದು. ಸಂಜೆ ವೇಳೆ ಜ್ವರ ಬರುವುದು. ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಮುಂತಾದವುಗಳು ಕ್ಷಯ ರೋಗದ ಲಕ್ಷಣಗಳಾಗಿವೆ. ಕ್ಷಯರೋಗ ಕಂಡು ಹಿಡಿಯಲು ಸಂಶಯಾಸ್ಪದರಿAದ ಕಫ ಸಂಗ್ರಹಿಸಿ ಅದನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಅವಶ್ಯವಿದ್ದಲ್ಲಿ ಕ್ಷ-ಕಿರಣ ಪರೀಕ್ಷೆ ಮಾಡಲಾಗುತ್ತದೆ. ರೋಗ ಖಚಿತತೆ ಪಟ್ಟಲ್ಲಿ ೬ ತಿಂಗಳ ಉಚಿತ ಚಿಕಿತ್ಸೆ ನೀಡಲಾಗುವುದು. ರೋಗಿಗಳಿಗೆ ಚಿಕಿತ್ಸೆ ಅವಧಿಯಲ್ಲಿ ತಿಂಗಳಿಗೆ ೫೦೦ ರೂಪಾಯಿಗಳಂತೆ ಪೌಷ್ಠಿಕ ಆಹಾರ ಸೇವನೆಗಾಗಿ ಪ್ರೋತ್ಸಾಹ ಧನವನ್ನು ನೆರವಾಗಿ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದರು.
    ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ವ್ಹಿ.ಕೊಣ್ಣೂರ ಮಾತನಾಡಿ, ಕ್ಷಯ ರೋಗದಲ್ಲಿ ಶ್ವಾಸಕೋಶ ಕ್ಷಯರೋಗ ಮತ್ತು ಶ್ವಾಸ ಕೋಶೆತರ ಕ್ಷಯರೋಗ ಎಂಬ ಎರಡು ರೀತಿಯ ಪ್ರಕಾರಗಳನ್ನು ಕಾಣಬಹುದಾಗಿದೆ. ಸಮಯಕ್ಕೆ ಸರಿಯಾಗಿ ಪೌಷ್ಠಿಕ ಆಹಾರ ಸೇವನೆ ಮಾಡಿ, ಮಾತ್ರೆಗಳನ್ನು ಸೇವಿಸಿದರೆ ಕ್ಷಯರೋಗದಿಂದ ಬಹುಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದರು ೨೦೨೫ಕ್ಕೆ ಕ್ಷಯ ಮುಕ್ತ ಕರ್ನಾಟಕ ಮಾಡುವ ಸರ್ಕಾರದ ಗುರಿಯ ಉದ್ದೇಶಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
    ಕಾರ್ಯಕ್ರಮದಲ್ಲಿ ಜಗಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಿಖಿಲ ಪಾಟೀಲ, ಶಿವಾನಂದ ಕುರಹಟ್ಟಿ, ಪ್ರವೀಣ ಕುಲಕರ್ಣಿ, ನಾಗರಾಜ ವಿಠಪ್ಪನವರ, ಶಂಕರಮ್ಮ ಹೂಲಿ, ಮಲ್ಲಮ್ಮ ಮದಗುಣಕಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts