ಆಗಸ್ಟ್​ 1ರಿಂದ ಹಾಲಿನ ದರ ಏರಿಕೆ ಬರೆ: ನಂದಿನಿ ಹಾಲಿನ ದರ ಎಷ್ಟೆಷ್ಟು ಹೆಚ್ಚಾಗಲಿದೆ? ಇಲ್ಲಿದೆ ಮಾಹಿತಿ…

Nandini
blank

ಬೆಂಗಳೂರು: ಸಾಲು ಸಾಲು ದರ ಏರಿಕೆಯ ಬಿಸಿಯಲ್ಲಿ ಬೇಯುತ್ತಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಂಬಂತೆ ಮತ್ತೊಂದು ಹೊರೆ ಬಿದ್ದಿದೆ. ಹಾಲಿನ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸ್ತು ಎಂದಿದ್ದು, ಆಗಸ್ಟ್​ 1ರಿಂದ ಹಾಲಿನ ದರ 3 ರೂಪಾಯಿ ಹೆಚ್ಚಾಗಲಿದೆ. ಹೊಸ ಸರ್ಕಾರ ಬಂದರೆ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಬಹುದೇನೋ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.

5 ರೂಪಾಯಿ ಏರಿಕೆ ಮಾಡಲು ಹಾಲು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದ್ದರು. ಆದರೆ, ಸಿಎಂ 3 ರೂ. ಏರಿಕೆಗೆ ಮಾತ್ರ ಅನುಮತಿ ನೀಡಿದ್ದಾರೆ. ಅಲ್ಲದೆ, ಏರಿಕೆಯಾಗುವ 3 ರೂಪಾಯಿ ಹಾಲು ಉತ್ಪಾದಕರಿಗೆ ಹೋಗಬೇಕು ಎಂದು ಖಡಕ್​ ಸೂಚನೆ ನೀಡಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಹಾಲಿನ ಬೆಲೆ ಏರಿಕೆಯ ಬಿಸಿ ತಟ್ಟಲಿದ್ದು, ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

ಇದನ್ನೂ ಓದಿ: ಜನನ ಪ್ರಮಾಣಪತ್ರದಲ್ಲಿ ಗೊಂದಲ: ವಿಶೇಷ ಮನವಿಯೊಂದಿಗೆ ಕೋರ್ಟ್​ ಮೆಟ್ಟಿಲೇರಿದ ತೃತೀಯಲಿಂಗಿ ದಂಪತಿ!

ಸದ್ಯದ ಹಾಲಿನ ದರ ಹಾಗೂ ಆಗಸ್ಟ್​ 1 ರಿಂದ ಜಾರಿಗೆ ಪರಿಷ್ಕೃತ ದರ ಪಟ್ಟಿ ಈ ಕೆಳಕಂಡಂತಿದೆ.

1. ನಂದಿನಿ( ಟೋನ್ಡ್ ಹಾಲು)
ಸದ್ಯದ ಹಾಲಿನ ದರ ಅರ್ಧ ಲೀಟರ್​ಗೆ 20 ಹಾಗೂ ಒಂದು ಲೀಟರ್​ಗೆ 39 ರೂಪಾಯಿ.
ಪರಿಷ್ಕೃತ ದರ 3 ರೂ. ಜಾಸ್ತಿ ಆದರೆ, ಅರ್ಧ ಲೀಟರ್‌ಗೆ 23 ಹಾಗೂ ಒಂದು ಲೀಟರ್‌ಗೆ 43 ರೂ. ಆಗಲಿದೆ.

2. ನಂದನಿ (ಡಬಲ್ ಟೋನ್ಡ್ ಹಾಲು)
* ಸದ್ಯದ ಹಾಲಿನ ದರ ಅರ್ಧ ಲೀಟರ್​ 19 ಹಾಗೂ ಒಂದು ಲೀಟರ್‌ಗೆ 38 ರೂಪಾಯಿ.
* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ಗೆ 22 ಹಾಗೂ ಒಂದು ಲೀಟರ್‌ಗೆ 41 ರೂಪಾಯಿ ಆಗಲಿದೆ.

3. ನಂದಿನಿ ಶುಭಂ
* ಸದ್ಯದ ದರ ಅರ್ಧ ಲೀಟರ್​ಗೆ 23 ಹಾಗೂ ಒಂದು ಲೀಟರ್ 45 ರೂಪಾಯಿ.
* ಪರಿಷ್ಕೃತ ದರ 3 ರೂ. ಜಾಸ್ತಿಯಾದ್ರೆ ಅರ್ಧ ಲೀಟರ್​ಗೆ 26 ಹಾಗೂ ಒಂದು ಲೀಟರ್‌ಗೆ 48 ರೂ. ಆಗಲಿದೆ.

4. ನಂದಿನಿ ಸ್ಪೆಷಲ್
* ಸದ್ಯದ ದರ ಅರ್ಧ ಲೀಟರ್​ಗೆ 23 ಹಾಗೂ ಒಂದು ಲೀಟರ್​ಗೆ 45 ರೂಪಾಯಿ.
* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ಗೆ 26 ಮತ್ತು ಒಂದು ಲೀಟರ್‌ಗೆ 48 ರೂ. ಆಗಲಿದೆ.

ಇದನ್ನೂ ಓದಿ: 8 ತಿಂಗಳಲ್ಲಿ 2 ಮಹಾ ಸಂಚು!; ತಪ್ಪಿದ ಸಂಭಾವ್ಯ ಉಗ್ರ ದಾಳಿಗಳು ಬೆಂಗಳೂರು, ಮಂಗಳೂರಿನಲ್ಲಿ ವಿಧ್ವಂಸಕ್ಕೆ ಪ್ಲಾನ್

5. ನಂದಿನಿ ( ಸಮೃದ್ಧಿ)
* ಸದ್ಯದ ದರ ಅರ್ಧ ಲೀಟರ್​ಗೆ 24 ಹಾಗೂ ಒಂದು ಲೀಟರ್​ಗೆ 48 ರೂಪಾಯಿ.
* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ಗೆ 27 ಹಾಗೂ ಒಂದು ಲೀಟರ್‌ಗೆ 51 ರೂಪಾಯಿ ಆಗಲಿದೆ.

6. ನಂದಿನಿ ಹಸುವಿನ ಹಾಲು
* ಸದ್ಯದ ದರ ಅರ್ಧ ಲೀಟರ್​ಗೆ 22 ಹಾಗೂ ಲೀಟರ್‌ಗೆ 44 ರೂಪಾಯಿ.
* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ಗೆ 25 ಹಾಗೂ ಒಂದು ಲೀಟರ್‌ಗೆ 54 ರೂಪಾಯಿ.

ಸೀಮಾ-ಸಚಿನ್​ ಮದ್ವೆ ಫೋಟೋಗಳು ವೈರಲ್​: ಭಾರತದ ಪೌರತ್ವ ಕೋರಿ ರಾಷ್ಟ್ರಪತಿಗೆ ಅರ್ಜಿ

ಲೋಕಸಭೆ ಚುನಾವಣೆ ತಯಾರಿಗೆ ಕೈಹಾಕಿದ ಕಾಂಗ್ರೆಸ್: 28 ಕ್ಷೇತ್ರಗಳ ಚಿತ್ರಣ ಪಡೆಯಲು ಜವಾಬ್ದಾರಿ ಹಂಚಿಕೆ

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…