More

    ‘ನಮೋ’ ವಿಶ್ವದ ಬಲಿಷ್ಠ ನಾಯಕ

    ಎಂ.ಕೆ.ಹುಬ್ಬಳ್ಳಿ: ದೇಶದ ಸಮಗ್ರ ಅಭಿವೃದ್ಧಿಯ ಜತೆಗೆ ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿ, ಬಡವರನ್ನು ಬಲಿಷ್ಠರನ್ನಾಗಿಸಲು ಶ್ರಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಪಡೆದ ಭಾರತೀಯರಾದ ನಾವು ಪುಣ್ಯವಂತರು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದ್ದಾರೆ.

    ಸಮೀಪದ ದಾಸ್ತಿಕೊಪ್ಪ ಗ್ರಾಮದ ದೇವರಕೊಂಡ ಮಠದಲ್ಲಿ ಕಿತ್ತೂರು ಮಂಡಳ ಬಿಜೆಪಿ ಯುವ ಮೋರ್ಚಾ ವತಿಯಿಂದ ಕೆಎಲ್‌ಇ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ರಕ್ತದಾನ ಶ್ರೇಷ್ಠದಾನವಾಗಿದ್ದು, ರಕ್ತದಾನ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ. ಪ್ರಧಾನಿ ನರೇಂದ್ರ ಮೋದಿ ಅವರು, ದೇಶದಲ್ಲಿ ಅಭಿವೃದ್ಧಿಯ ಜತೆಗೆ ಡಿಜಿಟಲ್ ಕ್ರಾಂತಿ ಮಾಡುತ್ತಿದ್ದಾರೆ. ಪರಿಣಾಮ ರೈತರು ಸಹ ಇಂದು ಮೊಬೈಲ್‌ಗಳ ಮೂಲಕ ಇಂಟರ್‌ನೆಟ್‌ನಿಂದ ಮಾಹಿತಿ ತಿಳಿದುಕೊಳ್ಳುವಂತಾಗಿದೆ ಎಂದರು.

    ಡಾ.ಮಂಜುನಾಥ ಮುದಕನಗೌಡ್ರ ಅವರ ತಂಡದಿಂದ ರಕ್ತದಾನ ಶಿಬಿರ ನಡೆಯಿತು. ರೈತಮೋರ್ಚಾ ಮಾಜಿ ಅಧ್ಯಕ್ಷ ಬಸನಗೌಡ ಸಿದ್ರಾಮನಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳೆಗಡ್ಡಿ, ನಿಂಗನಗೌಡ ಪಾಟೀಲ, ಸಿ.ಎಸ್.ಮೊಖಾಶಿ, ಬಿ.ಎ್.ಕೊಳದೂರ, ತಾಪಂ ಅಧ್ಯಕ್ಷೆ ಚನ್ನಮ್ಮ ಹೊಸಮನಿ, ಬೈಲಹೊಂಗಲ ತಾಪಂ ಉಪಾಧ್ಯಕ್ಷ ಮಲನಾಯ್ಕ ಬಾವಿ, ಸಂದೀಪ ದೇಶಪಾಂಡೆ, ಯುವಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಕುಲಕರ್ಣಿ, ಉಮೇಶ ಸಿದ್ರಾಮನಿ, ಶ್ರೀಕರ ಕುಲಕರ್ಣಿ, ಮಹಾಂತೇಶ ಗಾಣಿಗೇರ, ರಾಜು ಡೂಗನವರ, ದೀಪಕ ಹಿರೇಮಠ, ಮಹೇಶ ಅಂಬಡಗಟ್ಟಿ, ಗಂಗಾಧರ ತಿಗಡಿ, ಸಿದ್ದರಾಮ, ರಾಜು ಬೆಂಡಿಗೇರಿ, ಸಿದ್ದರಾಮ ಸಿದ್ರಾಮನಿ, ಶಿವಲಿಂಗ ಸಿದ್ರಾಮನಿ, ಅಶೋಕ ಹುಚ್ಚಗೌಡ್ರ, ಬಸವರಾಜ ದಾಸ್ತಿಕೊಪ್ಪ, ರುದ್ರಯ್ಯ ಹಿರೇಮಠ, ಡಾ.ಸವಿತಾ ಕಲ್ಮಠ, ವಿಠ್ಠಲ ಮಾನೆ, ಮಹೇಶ ಮೋಹಿತೆ ಹಾಗೂ ನೂರಾರು ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರಿದ್ದರು.

    ಗುರುವಾರ ರಾತ್ರಿ ನಿಧನರಾದ ರಾಜ್ಯಸಭಾ ಸದಸ್ಯ ಆಶೋಕ ಗಸ್ತಿ ಅವರ ಆತ್ಮಕ್ಕೆ ಮೌನಾಚರಣೆ ಮೂಲಕ ಶಾಂತಿ ಕೋರಲಾಯಿತು. ಶಿವಾನಂದ ಹನುಮಸಾಗದ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ವೈದ್ಯರು, ಶಾಸಕ ಮಹಾಂತೇಶ ದೊಡಗೌಡರ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. 110ಜನರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ಶಾಸಕ ಮಹಾಂತೇಶ ದೊಡಗೌಡರ ಸಹ ರಕ್ತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts