More

    ಕಲ್ಬಿಗಿರಿ ಶ್ರೀರಂಗನಾಥ ಸ್ವಾಮಿ ಬನ್ನಿ ಮಹೋತ್ಸವ

    ನ್ಯಾಮತಿ: ತಾಲೂಕಿನ ಕಲ್ಬಿಗಿರಿ ಬೆಟ್ಟದ ಮೇಲಿರುವ ರಂಗನಾಥ ಸ್ವಾಮಿ ದೀಪಾರಾಧನೆ, ಬನ್ನಿ (ಜಾತ್ರಾ) ಮಹೋತ್ಸವ ಭಾನುವಾರ ನೆರವೇರಿತು.

    ಸಕಲ ವಾದ್ಯಗಳೊಂದಿಗೆ ರಂಗನಾಥಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಬನ್ನಿ ವೃಕ್ಷದ ಕಟ್ಟೆಗೆ ಬಂದು, ಅರ್ಚಕರು ಪೂಜೆ ಸಲ್ಲಿಸಿದ ನಂತರ ಬನ್ನಿ ವಿತರಣೆ ಕಾರ್ಯಕ್ರಮ ನಡೆಯಿತು.

    ಬನ್ನಿ (ಜಾತ್ರಾ) ಮಹೋತ್ಸವದ ಅಂಗವಾಗಿ ಶುಕ್ರವಾರ, ಶನಿವಾರ ಶ್ರೀ ಕಲ್ಬಿಗಿರಿ ರಂಗನಾಥ ಸ್ವಾಮಿ ಶಿಲಾಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೀಪಾರಾಧನೆ, ವಿಶೇಷ ಅಲಂಕಾರ ಮಾಡಲಾಯಿತು. ಭಾನುವಾರ ಬನ್ನಿಯ ನಂತರ ಭೂತಪ್ಪನ ಸೇವೆ ನಡೆಯಿತು.

    ಕರೊನಾ ಕಾರಣ ಕಣಿವೆ ವೀರಣ್ಣ ಬೆಟ್ಟದ ಬಳಿ ಬರುವ ಭಕ್ತರನ್ನು ಸಾರ್ವಜನಿಕ ಆರೋಗ್ಯಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿ, ಕಲ್ಬಿಗಿರಿ ಬೆಟ್ಟಕ್ಕೆ ಬಿಡುತ್ತಿದ್ದರು. ಸಾರ್ವಜನಿಕ ಆರೋಗ್ಯ ಇಲಾಖೆ ಸಿಬ್ಬಂದಿ 245 ಜನರನ್ನು ತಪಾಸಣೆಗೊಳಪಡಿಸಿತು ಎಂದು ಆರೋಗ್ಯ ಇಲಾಖೆಯ ಜಗದೀಶ್ ಕೋಡಿಹಳ್ಳಿ ತಿಳಿಸಿದ್ದಾರೆ.

    ನ್ಯಾಮತಿ ತಹಸೀಲ್ದಾರ್ ತನುಜಾ ಟಿ.ಸವದತ್ತಿ, ನ್ಯಾಮತಿ ಠಾಣಾಧಿಕಾರಿ ಹನುಮಂತಪ್ಪ ಎಂ.ಶಿರೀಹಳ್ಳಿ, ಎಎಸ್‌ಐ ಬಸವರಾಜ್ ಸಿಬ್ಬಂದಿ ರಾಜು ದೊಡ್ಡಮನೆ, ಮಂಜಣ್ಣ, ಚನ್ನೇಶ್, ವಿಜಯನಗರ ಸಂಸ್ಥಾನದ ಬೆಳಗುತ್ತಿ ಅರಸರ ವಂಶಸ್ಥರು, ದೇಗುಲದ ಧರ್ಮದರ್ಶಿ ಬಿ.ಪಿ.ಸುಬ್ರಮಣ್ಯ ರಾಜ್, ಬಿ.ಪಿ.ನವೀನ್‌ರಾಜ ಅರಸ್, ಸುತ್ತಮುತ್ತಲ ಗ್ರಾಮಗಳ ಜನರು, ಭಕ್ತರು, ದಾಸರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts