More

    ಚಿನ್ನದಂಗಡಿ ದರೋಡೆ ಕೇಸ್​​ – ಖದೀಮರ ಗ್ಯಾಂಗ್​ನಲ್ಲಿ ಇಬ್ಬರು ಪೊಲೀಸರು!

    ಬೆಂಗಳೂರು: ಸಿನಿಮೀಯ ಶೈಲಿಯಲ್ಲೇ ನಡೆದಿತ್ತು ಆ ರಾಬರಿ. ಬೆಂಗಳೂರಿನ ನಗರತ್ ಪೇಟೆಯ ಅಣ್ಣಯ್ಯ ಗಲ್ಲಿಯಲ್ಲಿದ್ದ ಚಿನ್ನದ ಅಂಗಡಿಗೆ ಫೇಕ್​ ರೇಡ್ ನಡೆಸಿದ್ರು ಆ ಖದೀಮರು. ಸರಳವಾಗಿಯೇ ಈ ಕೇಸ್ ಬಗೆಹರಿಸಿದ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ರು. ಬಂಧಿತರ ಖದೀಮರ ಗುಂಪಿನಲ್ಲಿದ್ರು ಇಬ್ಬರು ಪೊಲೀಸರು !

    ಬಂಧಿತರನ್ನು ಸೂರಜ್​ ಯಾದವ್ (25), ಶೇಖ್ ಮಹಮ್ಮದ್ (34), ಅಶೋಕ (29), ನದೀಮ್ ಪಾಷಾ (32), ಸಂದೀಪ್ (25), ಸೈಯದ್ ಫೈರೋಜ್ (33) ಎಂದು ಗುರುತಿಸಲಾಗಿದೆ. ಈ ಪೈಕಿ ಸೂರಜ್​ ಬಿಲ್ಡಿಂಗ್ ಮಾಲೀಕನ ಪುತ್ರ. ರಾಬರಿಯ ಸೂತ್ರಧಾರ. ಅಶೋಕ ಪೊಲೀಸ್ ಕಾನ್ಸ್​ಸ್ಟೆಬಲ್​. ಇನ್ನೊಬ್ಬ ಆರೋಪಿ ಪೊಲೀಸ್ ಕಾನ್ಸ್​ಟೆಬಲ್​ ಚೌಡೇಗೌಡ ತಲೆಮರೆಸಿಕೊಂಡಿದ್ದಾನೆ.

    ಇದನ್ನೂ ಓದಿ: Web Exclusive|ಭೂಮಿ ಖರೀದಿ ಜೋರು – ಮುಗಿಬಿದ್ದ ತಮಿಳುನಾಡು, ಕೇರಳೀಯರು !

    ನಗರತ್ ಪೇಟೆಯ ಅಣ್ಣಯ್ಯ ಗಲ್ಲಿಯಲ್ಲಿದ್ದ ಚಿನ್ನದ ಅಂಗಡಿ ಅದು. ಅಲ್ಲಿ ಆರೇಳು ಜನ ಚಿನ್ನದ ಕೆಲಸಗಾರರು ಕೆಲಸ ಮಾಡುತ್ತಿದ್ದರು. ಅದರ ಮಾಲೀಕ ಕಾರ್ತಿಕ್​. ಆತ ಪರವಾನಗಿ ಇಲ್ಲದೇ ಅಂಗಡಿ ವ್ಯವಹಾರ ನಡೆಸುತ್ತಿದ್ದ. ಈ ವಿಚಾರ ಆ ಕಟ್ಟಡ ಮಾಲೀಕನ ಮಗ ಸೂರಜ್​ಗೆ ತಿಳಿದಿತ್ತು. ಇವರನ್ನು ದೋಚಿದ್ರೆ ದೂರು ನೀಡಲ್ಲ ಎಂಬ ಖಾತರಿಯೊಂದಿಗೆ ದುರಾಲೋಚನೆಯೊಂದು ಹುಟ್ಟಿತ್ತು ಸೂರಜ್​ಗೆ. ಫೇಕ್​ ರೇಡ್​​ಗೆ ಸ್ಕೆಚ್​ ರೂಪಿಸಿದ. ಸ್ನೇಹಿತರನ್ನು ಒಂದುಗೂಡಿಸಿದ. ಪೊಲೀಸರು ಜತೆಗಿದ್ರೆ ಸೇಫ್ ಅನ್ನೋ ಭಾವನೆಯಿಂದ ಅಶೋಕ್ ಮತ್ತು ಚೌಡೇಗೌಡರನ್ನು ಹಣದ ಆಸೆ ಒಡ್ಡಿ ಬುಟ್ಟಿಗೆ ಹಾಕ್ಕೊಂಡ.

    ಇದನ್ನೂ ಓದಿ: ತಾಯಿಯೇ ಹಂತಕಿಯಾದಾಗ…: ಡಾ.ಡಿ.ವಿ.ಗುರುಪ್ರಸಾದ್ ಅವರ ಆ ಕ್ಷಣ.. ಅಂಕಣ

    ನವೆಂಬರ್ 11 ರಂದು ಅಪರಾಹ್ನ 3ರಿಂದ 4 ಗಂಟೆ ಸುಮಾರಿಗೆ ಅಂಗಡಿ ಕದ ತಟ್ಟಿತು ಈ ತಂಡ. ಅರ್ಧ ಪೊಲೀಸ್ ಸಮವಸ್ತ್ರ ಧರಿಸಿದ್ದ ಗ್ಯಾಂಗ್​ ನೋಡಿ ಊಟದ ಅವಧಿಯಲ್ಲೂ ಬಾಗಿಲು ತೆರೆದ್ರು ಕಾರ್ಮಿಕರು. ಒಳ ನುಗ್ಗಿದ ತಂಡ ತಾವು ಪೊಲೀಸರೆಂದು ಹೇಳಿಕೊಳ್ಳುತ್ತ ಪರವಾನಗಿ ತೋರಿಸಲು ಹೇಳಿದ್ರು. ಇಲ್ಲ ಎಂದಾಗ, ಅಲ್ಲಿದ್ದ 300 ಗ್ರಾಂ ಚಿನ್ನ, ಎರಡು ಮೊಬೈಲ್ ಫೋನ್​ ಎತ್ತಿಕೊಂಡು ಹೊರಟು ಹೋಗಿದ್ದಾರೆ.

    ಇದನ್ನೂ ಓದಿ: ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಮಂಡಳಿ – ನಾಳೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ

    ಪೊಲೀಸರಿಗೆ ದೂರು ಕೊಡುವುದೋ ಬೇಡವೋ ಎಂದು ಅಂಜುತ್ತಲೇ ಎರಡು ದಿನಗಳ ಬಳಿಕ ಪೊಲೀಸರಿಗೆ ದೂರು ನೀಡಿದ್ರು ಕಾರ್ತಿಕ್. ಇದರೊಂದಿಗೆ ಸೂರಜ್ ಹಾಕಿದ ಪ್ಲ್ಯಾನ್ ಫ್ಲಾಪ್ ಆಯಿತು. ಕೂಡಲೇ ಸಿಸಿಟಿವಿ ದೃಶ್ಯಾವಳಿ ಗಮನಿಸಿದ ಪೊಲೀಸರು ದರೋಡೆ ಗ್ಯಾಂಗ್ ಅನ್ನು ಬೆನ್ನಟ್ಟಿದ್ರು. ಏಳು ಆರೋಪಿಗಳು ಬಲೆಗೆ ಬಿದ್ರು. ತಲೆಮರೆಸಿಕೊಂಡಿರುವ ಚೌಡೇಗೌಡನ ಬಂಧನಕ್ಕೆ ಪೊಲೀಸರ ಬಲೆಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)

    ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ತೇಜಸ್ವಿ ವಿಪಕ್ಷ ನಾಯಕನಾಗಬಾರದು- ಜೆಡಿಯು ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts