ಟಾಲಿವುಡ್ ನಟ ನಾಗಾರ್ಜುನ್ ಇಂದು 61ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇಡೀ ಭಾರತೀಯ ಸಿನಿಮಾರಂಗ ಅವರ ಜನ್ಮ ದಿನಕ್ಕೆ ಶುಭಾಶಯ ಹೇಳುತ್ತಿದೆ. ಅದೇ ರೀತಿ ಸಿನಿಮಾ ತಂಡಗಳು ಪೋಸ್ಟರ್ಗಳನ್ನು ಬಿಡುಗಡೆ ಮಾಡಿಕೊಂಡು ವಿಶ್ ಮಾಡುತ್ತಿವೆ.
ಇದನ್ನೂ ಓದಿ: ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ಶಾರುಖ್ ನಟಿಸುವುದು ಯಾವಾಗ?; ಇಲ್ಲಿದೆ ಉತ್ತರ…
ಅದೇ ರೀತಿ ನಾಗಾರ್ಜುನ್ ಜನ್ಮದಿನಕ್ಕೆ ಕಾಡು ನಾಯಿ ಕಡೆಯಿಂದಲೂ ಉಡುಗೊರೆ ಬಂದಿದೆ. ಅಂದರೆ, ಅಹಿಸೋರ್ ಸೋಲೊಮನ್ ನಿರ್ದೇಶನದಲ್ಲಿ ಸಿದ್ಧವಾಗಿರುವ ವೈಲ್ಡ್ ಡಾಗ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಕುತೂಹಲಭರಿತವಾಗಿದೆ.
Thank you team #wildDog !! Looking forward to start the shoot on Monday!! https://t.co/iHUkBaoC4W
— Nagarjuna Akkineni (@iamnagarjuna) August 29, 2020
ಇದನ್ನೂ ಓದಿ: `ರ‍್ಯಾಂಬೋ’ ನಿರ್ದೇಶಕ ಚೇಂಜ್ … ಸಿದ್ಧಾರ್ಥ್ ಬದಲು ರೋಹಿತ್
ಈ ಚಿತ್ರದಲ್ಲಿ ಎನ್ಐಎ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ನಾಗಾರ್ಜುನ್, ಅರಣ್ಯದಲ್ಲಿ ಶತ್ರುಗಳ ಸಂಹಾರ ಮಾಡಲು ಸಂಚು ಹಾಕುತ್ತಿರುವ ಭಂಗಿಯಲ್ಲಿ ಪೋಸ್ಟರ್ ಡಿಸೈನ್ ಮಾಡಲಾಗಿದ್ದು, ಶೇ. 70 ಭಾಗದ ಶೂಟಿಂಗ್ ಮಾಡಲಾಗಿದೆ.
ದಿಯಾ ಮಿರ್ಜಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸಹಾಮಿ ಖೇರ್ ಸಹ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಮ್ಯಾಟಿನಿ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಮೂಡಿಬಂದಿರುವ ಈ ಚಿತ್ರ ನೈಜ ಘಟನೆ ಆಧರಿತವಾಗಿದೆ. (ಏಜೆನ್ಸೀಸ್)
ಶೂಟಿಂಗ್ನಲ್ಲಿ ಭಾಗಿಯಾದ ನಟಿ ಹರಿಪ್ರಿಯಾ; ಆದ್ರೆ, ಇದು ಸಿನಿಮಾ ಅಲ್ಲ!