More

    ನಗರಸಭೆ ಮಳಿಗೆ ಕೊಳ್ಳಲು ನಿರಾಸಕ್ತಿ: 27 ಮಳಿಗೆಗಳ ಪೈಕಿ 4 ಮಳಿಗೆಗಳು ಹರಾಜು

    ಕನಕಪುರ: ನಗರಸಭೆ ನಿರ್ಮಿಸಿರುವ ನೂತನ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜಿಗೆ ನೀರಸ ಪ್ರತಿಕ್ರಿಯೆಯಿಂದ ವ್ಯಕ್ತವಾಗಿದ್ದು, 27 ಮಳಿಗೆಗಳ ಪೈಕಿ 4 ಮಳಿಗೆಗಳು ಹರಾಜಾದವು.

    ನಗರಸಭೆ ಕಚೇರಿಗೆ ಹೊಂದಿಕೊಂಡಂತೆ ಇರುವ 48 ಮಳಿಗೆಗಳ ಪೈಕಿ 5 ಹಾಗೂ ನಗರಸಭೆ ಎದುರು ನಿರ್ಮಿಸಿರುವ 34 ಮಳಿಗೆಗಳ ಪೈಕಿ ಹರಾಜಾಗದೆ ಉಳಿದಿದ್ದ 22 ಮಳಿಗೆಗಳ ಹರಾಜಿಗೆ ಸೋಮವಾರದಂದು ದಿನ ನಿಗದಿ ಮಾಡಲಾಗಿತ್ತು. ಆದರೆ, ಖರೀದಿಗೆ ನಿರಾಸಕ್ತಿ ಕಂಡುಬಂದಿದ್ದು, ಒಟ್ಟು 23 ಅಂಗಡಿ ಹಾಗೂ ಸರ್ಕಾರಿ ಆಸ್ಪತ್ರೆ ಮುಂಭಾಗದ ಶೌಚಗೃಹವನ್ನು ಹರಾಜಿನಲ್ಲಿ ಕೊಳ್ಳಲು ಯಾರು ಮುಂದೆ ಬರಲಿಲ್ಲ.

    ಮಳಿಗೆ ನಿರ್ಮಾಣವಾಗಿದ್ದರೂ, ಮೂಲಸೌಲಭ್ಯ ಒದಗಿಸಿಲ್ಲ. ಗ್ರಾಹಕರಿಗೆ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಈ ಎಲ್ಲ ಸೌಕರ್ಯಗಳನ್ನು ಕಲ್ಪಿಸಿ, ನಂತರ ಹರಾಜು ಪ್ರಕ್ರಿಯೆ ನಡೆಸುವಂತೆ ಹರಾಜಿನಲ್ಲಿ ಭಾಗವಹಿಸಿದ್ದ ಹಲವಾರು ನಾಗರಿಕರು ಹಾಗೂ ವರ್ತಕರು, ಒತ್ತಾಯಿಸಿದರು.

    ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ನಗರಸಭೆ ಲೆಕ್ಕ ಅಧೀಕ್ಷಕ ಶಿವಣ್ಣ ಮಾತನಾಡಿ, ಈಗಾಗಲೇ ಹರಾಜು ಪ್ರಕ್ರಿಯೆಗೆ ಸಾರ್ವಜನಿಕ ಪ್ರಕಟಣೆ ಮಾಡಲಾಗಿದೆ. ಮಳಿಗೆ ಕೊಳ್ಳಲು ಆಸಕ್ತಿಯಿರುವವರು ಬ್ಯಾಂಕ್‌ಗೆ ನಿಗದಿತ ಹಣ ಜಮಾ ಮಾಡಿ ಡಿಡಿ ಪಡೆದು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿರುವುದರಿಂದ, ಹರಾಜು ಮುಂದೂಡಲು ಸಾಧ್ಯವಿಲ್ಲ ಎಂದು ತಿಳಿಸಿ ಹರಾಜು ಮುಂದುವರೆಸಿದರು.
    ಮಳಿಗೆಗಳ ಮುಂಗಡ ಹಾಗೂ ನಿಗದಿಗೊಳಿಸಿರುವ ಬಾಡಿಗೆ ದರ ದುಬಾರಿಯಾಗಿರುವ ಕಾರಣ ಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿ ತೋರಲಿಲ್ಲ ಎಂದು ಹಲವರು ತಿಳಿಸಿದರು.

    ಕಂದಾಯ ಅಧಿಕಾರಿಗಳಾದ ವೆಂಕಟರಮಣ, ಶಿವರಾಜು, ಕಚೇರಿ ವ್ಯವಸ್ಥಾಪಕ ನಟರಾಜು, ಪರಿಸರ ಇಂಜಿನಿಯರ್ ಪಾರ್ವತಿ, ಕಾರ್ಯಪಾಲಕ ಅಭಿಯಂತರ ರಾಘವೇಂದ್ರ, ಕಿರಿಯ ಅಭಿಯಂತರ ವಿಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts