More

    ರಬಕವಿ-ಬನಹಟ್ಟಿಯಲ್ಲಿ ನಾಗರಪಂಚಮಿ ಸಂಭ್ರಮ

    ರಬಕವಿ/ಬನಹಟ್ಟಿ: ಲೋಕಪಾಲಕ ವಿಷ್ಣುವಿನ ಶಯ್ಯೆ ಮತ್ತು ಭಗವಂತ ಶಂಕರನ ಕಂಠಾಭರಣವಾದ ಸರ್ಪ ನಮಗೆಲ್ಲ ನಂಬಿಕೆ-ಪೂಜ್ಯಭಾವನೆಯಷ್ಟೆ ಅಲ್ಲ, ಪರಿಸರವನ್ನು ಸಮತೋಲನವಾಗಿಡುವ ಅವಿಭಾಜ್ಯ ಅಂಗವೂ ಆಗಿದೆ.

    ಅದಕ್ಕಾಗಿಯೇ ಶ್ರಾವಣ ಶುಕ್ಲ ಪಂಚಮಿಯಂದು ನಾಗಪಂಚಮಿ ಆಚರಿಸುತ್ತ ಬಂದಿದ್ದೇವೆ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ತಿಳಿಸಿದರು.

    ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ನಾಗಪಂಚಮಿ ನಿಮಿತ್ತ ಬಾಲಕರಿಗೆ ಸೋಮವಾರ ಹಾಲು ಕುಡಿಸುವುದರ ಮೂಲಕ ಪಂಚಮಿ ಆಚರಿಸಿ ಅವರು ಮಾತನಾಡಿದರು.

    ಧಾರ್ಮಿಕತೆಗೆ ಧಕ್ಕೆ ಬಾರದಂತೆ ಅಲ್ಪ ಪ್ರಮಾಣದಲ್ಲಿ ಹಾಲನ್ನು ನಾಗದೇವನಿಗೆ ಅರ್ಪಿಸಬೇಕು. ಹಾಲು ನೆಲಪಾಲು ಮಾಡದೆ ಮಕ್ಕಳಿಗೆ ಕೊಟ್ಟರೆ ಸರಿಯಾಗುತ್ತದೆ ಎಂದರು.
    ಭಾರತೀಯರಾದ ನಾವು, ನಮಗೆ ಆಶ್ರಯ ನೀಡಿದ ಭೂಮಿಯನ್ನು ಪೂಜಿಸುವುದಷ್ಟೇ ಅಲ್ಲದೆ, ಈ ಭೂಮಿ ಮೇಲಿರುವ ಪ್ರಾಣಿ, ಪಕ್ಷಿ-ವೃಕ್ಷ ಮುಂತಾದವುಗಳಲ್ಲಿ ದೇವರನ್ನು ಕಂಡವರು ನಾವು.

    ಇದನ್ನೂ ಓದಿ: ವಿದ್ಯೆಯೇ ಬಾಳಿನ ಬೆಳಕು

    ಸರ್ಪ ಮಹಿಮೆಯನ್ನು ಅರಿತು ಪ್ರಾಚೀನ ಕಾಲದಿಂದ ಪೂಜಿಸಿಕೊಂಡು ಬಂದಿದ್ದೇವೆ ಎಂದರು.

    ನಾಗರಪಂಚಮಿ ದಿನದಂದು ನಾಗದೇವರನ್ನು ಪೂಜಿಸುವುದರಿಂದ ಸರ್ಪ ದೋಷಗಳಿಂದ ಮುಕ್ತಿ ದೊರೆಯುತ್ತದೆ ಎಂಬ ಅಪಾರವಾದ ನಂಬಿಕೆ ಉಳ್ಳವರು ನಾವು. ಸರ್ಪ ದೇವರನ್ನು ಮನೆಯ ರಕ್ಷಕ ಎಂದೂ ಪರಿಗಣಿಸಲಾಗುತ್ತದೆ.

    ಈ ದಿನ ನಾಗ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಅತಿಯಾದ ಮೌಢ್ಯಗಳತ್ತ ತಲೆಬಾಗಿಸದೆ ವೈಜ್ಞಾನಿಕ ತಳಹದಿಯಲ್ಲಿ ಬದುಕು ಸಾಗಿಸುವುದು ಸುಲಭವೆಂದು ಅನಿಸುತ್ತದೆ ಎಂದು ಶ್ರೀಗಳು ತಿಳಿಸಿದರು.

    ರಬಕವಿ ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಚಾವಡಿ ಗಲ್ಲಿ, ರಾಂಪುರ ಮಲ್ಲಿಕಾರ್ಜುನ ದೇವಸ್ಥಾನ, ಬನಹಟ್ಟಿ ಹನುಮಾನ ಹಾಗೂ ಕಾಡಸಿದ್ಧೇಶ್ವರ ದೇವಸ್ಥಾನಗಳು ಸೇರಿ ಹೀಗೆ ಅವಳಿ ನಗರದ ಹತ್ತು ಹಲವು ಕಡೆಗಳಲ್ಲಿ ಮಹಿಳೆಯರು ಮಣ್ಣು ನಾಗಪ್ಪನಿಗೆ ಹಾಲೆರೆದು ಭಕ್ತಿ ಮೆರೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts