More

    ನಾಗರಪಂಚಮಿ ಸರಳ ಆಚರಣೆ

    ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಾಗರಪಂಚಮಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.
    ಕುಕ್ಕೆ ಸುಬ್ರಹ್ಮಣ್ಯದ ಒಳಾಂಗಣದಲ್ಲಿ ನಾಗರ ಹಾವು ಪ್ರತ್ಯಕ್ಷಗೊಂಡು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಪಡುವಣ ಬಾಗಿಲಿನ ಮೂಲಕ ಹೊರಗೆ ತೆರಳಿದೆ.

    ಸಂಭ್ರಮದ ನಾಗರಪಂಚಮಿ ಆಚರಣೆಗೆ ಕರೊನಾ ಅಡ್ಡಿಯಾಗಿದೆ. ಎಲ್ಲ ಪ್ರಸಿದ್ಧ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿ ವಿಶೇಷ ಪೂಜೆ ನಡೆಯಿತು. ಸೀಯಾಳ, ಹಾಲು ಅಭಿಷೇಕ ನಡೆದು ಪೂಜೆ ಸಲ್ಲಿಸಲಾಯಿತು. ಅರ್ಚಕ ವರ್ಗ ಹಾಗೂ ದೇವಳದ ಅಧಿಕಾರಿಗಳು ಉಪಸ್ಥಿತರಿದ್ದರು. ಸಾವಿರಾರು ಜನ ಸೇರುವ ಕುಡುಪು ಶ್ರೀ ಅನಂತ ಪದ್ಮನಾಭ ದೇವಾಲಯದಲ್ಲಿ ಅರ್ಚಕ ವರ್ಗ ನಾಗ ದೇವರಿಗೆ ಸೀಯಾಳ, ಹಾಲು ಅಭಿಷೇಕ ನಡೆಸಿದರು.

    ಉಡುಪಿ ಜಿಲ್ಲಾದ್ಯಂತ ನಾಗರಪಂಚಮಿಯನ್ನು ಸರಳವಾಗಿ ಆಚರಿಸಲಾಯಿತು. ಸಾರ್ವಜನಿಕರು ತಮ್ಮ ಕುಟುಂಬದ ನಾಗಬನಗಳಲ್ಲಿ ನಾಗನ ಮೂರ್ತಿಗೆ ಹಾಲಿನ ಅಭಿಷೇಕ ನೆರವೇರಿಸಿ ಸೇವೆ ಸಲ್ಲಿಸಿದರು. ಧಾರ್ಮಿಕ ಸ್ಥಳದಲ್ಲಿ 20ಕ್ಕಿಂತ ಹೆಚ್ಚು ಮಂದಿ ಸೇರಬಾರದು ಎಂಬ ನಿಯಮ ಅನ್ವಯ ದೇವಸ್ಥಾನಗಳಿಗೆ ಬೆರಳೆಣಿಕೆಯ ಭಕ್ತರು ಮಾತ್ರ ಆಗಮಿಸಿದ್ದರು. ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿ ಸೇರಿದಂತೆ ಹಲವೆಡೆ ಸರಳವಾಗಿ ನಾಗರಪಂಚಮಿ ಆಚರಿಸಿದರು.

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಾಜ ಪತ್ಯಕ್ಷ
    ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯ ದಿನ ನಿಜ ನಾಗರಾಜ ಪ್ರತ್ಯಕ್ಷಗೊಂಡು ಭಕ್ತರನ್ನು ಮಂತ್ರಮುಗ್ಧಗೊಳಿಸಿದೆ.
    ದೇವಳದ ಗರ್ಭಗುಡಿಯಲ್ಲಿ ದೇವರಿಗೆ ಮಹಾಭಿಷೇಕ ನಡೆಯುವ ಸಂದರ್ಭ ಗರ್ಭಗುಡಿಯ ಹುತ್ತದಿಂದ ನಾಗರಹಾವು ಹೊರಾಂಗಣಕ್ಕೆ ಬಂದು ನಾಗಪ್ರತಿಷ್ಠಾ ಮಂಟಪದ ಸಮೀಪವಾಗಿ ದೇವಳಕ್ಕೆ ಸುತ್ತು ಹಾಕಿತು. ಬಳಿಕ ಒಳಾಂಗಣಕ್ಕೆ ಪ್ರವೇಶಿಸಿತು. ಈ ತನಕ ನಾಗರಪಂಚಮಿಯಂದು ಘಟಿಸದ ಈ ವಿಶೇಷ ದೃಶ್ಯ ಭಕ್ತರಿಗೆ ಆನಂದ ನೀಡಿತು. ಉಳಿದಂತೆ, ಕರಾವಳಿಯ ಪ್ರಮುಖ ನಾಗಾರಾಧನಾ ಕ್ಷೇತ್ರಗಳಲ್ಲಿ ಅರ್ಚಕರೇ ನಾಗನ ಮೂರ್ತಿಗೆ ಹಾಲಿನ ಅಭಿಷೇಕ ನೆರವೇರಿಸಿದರು. ಭಕ್ತರಿಗೆ ದೇವಳ ಪ್ರವೇಶ ಅವಕಾಶ ಇರಲಿಲ್ಲ.

    ಜೀವಂತ ನಾಗನಿಗೆ ಪೂಜೆ
    ಕಾಪು: ಉಡುಪಿ ಜಿಲ್ಲೆಯ ಮಜೂರು ಮಲ್ಲಾರಿನ ಗೋವರ್ಧನ್ ಭಟ್ ಜೀವಂತ ಹಾವುಗಳಿಗೆ ಪೂಜೆ ಸಲ್ಲಿಸಿದರು.
    ಕಾಪು ಪರಿಸರದಲ್ಲಿ ಹಾವುಗಳು ಸಂಕಷ್ಟದಲ್ಲಿದ್ದರೆ ನೆರವಿಗೆ ಧಾವಿಸುವ ಗೋವರ್ಧನ್, ಗಾಯಗೊಂಡ ಹಾವುಗಳ ಆರೈಕೆ ಮಾಡಿ ಗುಣವಾದ ನಂತರ ಕಾಡಿಗೆ ಬಿಡುವ ಉರಗ ಪ್ರೇಮಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts