More

    ಜಿಲ್ಲಾಡಳಿತದ ಆದೇಶ ಪಾಲಿಸಲು ಸೂಚನೆ, ನಿಯಮಗಳ ಬಗ್ಗೆ ಮಾಹಿತಿ

    ಕುಂದಾಪುರ: ನಾಗರ ಪಂಚಮಿ ಆಚರಣೆ ಹಿನ್ನೆಲೆಯಲ್ಲಿ ಬೇಳೂರು ನಾಯಕರಬೆಟ್ಟು ದೇವಸ್ಥಾನದಲ್ಲಿ ಕೋಟ ಠಾಣೆ ಪೊಲೀಸರು ಸಾರ್ವಜನಿಕ ಸಭೆ ನಡೆಸಿ ಆಚರಣೆ ಸಂದರ್ಭ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

    ಪೂಜೆ, ಸಾಮೂಹಿಕ ಪ್ರಾರ್ಥನೆ, ದರ್ಶನ ಇಲ್ಲದಿರುವುದರಿಂದ ಜಿಲ್ಲಾಡಳಿತದ ಆದೇಶ ಎಲ್ಲರೂ ಪಾಲಿಸಬೇಕು. ನಿಯಮ ಉಲ್ಲಂಘಿಸಿ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಕಾರ‌್ಯ ನಡೆಸಿದರೆ ಪೂಜೆ ಮಾಡಿದವರ ಹಾಗೂ ಮಾಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದರು.

    ನಾಗಾರಾಧನೆಗೆ ಜಿಲ್ಲೆಯಲ್ಲಿ ವಿಶೇಷ ಮಹತ್ವವಿದ್ದು, ನಾಗರ ಪಂಚಮಿ ದಿನ ಭಕ್ತರು ನಾಗನಿಗೆ ತನು ಎರೆದು ಪೂಜೆ ಸಲ್ಲಿಸುವುದು ನಡೆದು ಬಂದ ಪದ್ಧತಿಯಾದರೂ ಕೋವಿಡ್ -19 ಹಿನ್ನೆಲೆಯಲ್ಲಿ ಸರಳ ಆಚರಣೆಗೆ ನಿರ್ಧರಿಸಲಾಗಿದೆ.

    ಬ್ರಹ್ಮರಪಾಡಿಯಲ್ಲಿ ಪೂಜೆ ರದ್ದು
    ಉಡುಪಿ: ಕರೊನಾ ಸಾಂಕ್ರಾಮಿಕ ರೋಗ ನಿಯಂತ್ರಣ, ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಆದೇಶದನ್ವಯ ಪಾಂಗಳ, ಬ್ರಹ್ಮರಪಾಡಿ ಆದಿ ಆಲಡೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಜುಲೈ 25ರ ಸಾರ್ವಜನಿಕ ನಾಗರಪಂಚಮಿ ಪೂಜೆ ರದ್ದುಗೊಳಿಸಲಾಗಿದೆ. ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    ನಿಯಮ ಉಲ್ಲಂಘಿಸಿದರೆ ಕ್ರಮ
    ಬ್ರಹ್ಮಾವರ: ಕರೊನಾ ನಿಯಂತ್ರಣಕ್ಕಾಗಿ ಸಾಮೂಹಿಕ ನಾಗರ ಪಂಚಮಿ ಆಚರಿಸದಂತೆ ಸರ್ಕಾರದ ಆದೇಶವಿರುವುದರಿಂದ ಉಲ್ಲಂಘಿಸಿದವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗುತ್ತದೆ ಎಂದು ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ. ಹೇಳಿದರು. ಬುಧವಾರ ಬಾರಕೂರು ಬಳಿಯ ನಾಯರ್‌ಬೆಟ್ಟು ರಮೇಶ್ ಭಟ್ ಮನೆಯಲ್ಲಿ ಜರುಗಿದ ಬ್ರಹ್ಮಾವರ ತಾಲೂಕಿನ ಬ್ರಾಹ್ಮಣ ವಲಯ ಸಭೆಯಲ್ಲಿ ಮಾತನಾಡಿದರು. ಬಳಿಕ ಸಭೆಯಲ್ಲಿ ಸರ್ವ ಸದಸ್ಯರ ಅಭಿಪ್ರಾಯದಂತೆ ನಾಗರ ಪಂಚಮಿಯನ್ನು ಈ ಬಾರಿ ನಾಗಬನದಲ್ಲಿ ಪೂಜೆಗೆ ಭಾಗವಹಿಸದಿರುವಂತೆ ನಿರ್ಧರಿಸಲಾಯಿತು. ಮಂಜುನಾಥ್ ಭಟ್ ವಂದಿಸಿದರು.

    ನಾಗರಪಂಚಮಿ ಸಾಮೂಹಿಕ ಆಚರಣೆ ಇಲ್ಲ
    ಬ್ರಹ್ಮಾವರ: ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಜುಲೈ 25ರಂದು ಜರುಗಬೇಕಿದ್ದ ನಾಗರ ಪಂಚಮಿ, 31ರಂದು ಜರುಗಬೇಕಿದ್ದ ವರಮಹಾಲಕ್ಷ್ಮೀ ವ್ರತ ಪೂಜೆ ಮತ್ತು ಆಗಸ್ಟ್ 4ರಂದು ಜರುಗಬೇಕಿದ್ದ ಋಗುಪಾಕರ್ಮ ಸಾಮೂಹಿಕ ಆಚರಣೆ ಇರುವುದಿಲ್ಲ. ಕೋವಿಡ್ -19 ಸಂಬಂಧ ಜಿಲ್ಲಾಧಿಕಾರಿ ಆದೇಶದಂತೆ ಸಾಮೂಹಿಕ ಆಚರಣೆಗೆ ನಿರ್ಬಂಧ ಇರುವುದರಿಂದ ಈ ಎಲ್ಲ ಕಾರ್ಯಕ್ರಮ ರದ್ದುಪಡಿಸಲಾಗಿದ್ದು ದೇವಸ್ಥಾನದಲ್ಲಿ ನಿತ್ಯಾನುಷ್ಠಾನ ಮಾತ್ರ ಇರಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts