More

    ಗೀತಕ್ಕನ ಕನಸು ನನಸು ಮಾಡೋಣ

    ಯಾದಗಿರಿ: ನಾಡಿನ ಪ್ರಖ್ಯಾತ ಸಾಹಿತಿ ನಾಡೋಜ ಡಾ.ಗೀತಾ ನಾಗಭೂಷಣ ನಿಧನರಾದ ಹಿನ್ನೆಲೆಯಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ ಮಾತನಾಡಿ, ಕೇವಲ ಶಬ್ದಾಡಂಬರದ ರಂಜನೀಯ ಸಾಹಿತ್ಯ ನಮಗೆ ಬೇಡ. ಸಾಹಿತ್ಯ ಒಂದು ಮಾನಸಿಕ ಸುಧಾರಣೆಯ ಸಾಧನ. ಅದು ಸಮಾಜದ ಅಭ್ಯುದಯಕ್ಕಾಗಿ ದುಡಿಯುವಂತಾಗಬೇಕು. ವಿಜ್ಞಾನಿಯ ತಲೆ, ಸಂತನ ಹೃದಯ ಈ ದೇಶಕ್ಕೆ ಬೇಕು. ಬುದ್ಧನ ಕರುಣೆ, ಬಸವನ ಛಲ, ಬಾಬಾ ಸಾಹೇಬರ ಸ್ವಾಭಿಮಾನ ಮತ್ತು ಗಾಂಧೀಜಿಯ ಅಹಿಂಸೆಯ ತುಡಿತ ಈ ಎಲ್ಲವನ್ನೂ ಹುರಿಗೊಳಿಸಿ ಹೊಸೆದ ಹಗ್ಗದಿಂದಲೇ ನಾವು ಸರ್ವರ ಅಭ್ಯುದಯ ಸಾಧಿಸಬಲ್ಲ ನಭೋಸ್ಪಶರ್ಿ ವ್ಯವಸ್ಥೆಗೆ ಏಣಿ ಕಟ್ಟಬೇಕಾಗಿದೆ ಎಂಬ ಕನಸನ್ನು ಸಾಹಿತಿ ಗೀತಾ ಕಂಡಿದ್ದರು ಎಂದು ಸ್ಮರಿಸಿದರು.

    ಕಲ್ಯಾಣ ಕನರ್ಾಟಕ ಭಾಗದಲ್ಲಿ ಗಟ್ಟಿ ಸಾಹಿತ್ಯ ರಚಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಮಹತ್ತರ ಕೊಡುಗೆ ಕೊಟ್ಟಿದ್ದಾರೆ. ಅವರು ಬಿಟ್ಟು zದ ಆದರ್ಶ ಮತ್ತು ಕನಸನ್ನು ನಾವೆಲ್ಲ ನನಸು ಮಾಡುವ ಅಗತ್ಯವಿದೆ ಎಂದರು.

    ಡಾ.ಭೀಮರಾಯ ಲಿಂಗೇರಿ, ವಡಗೇರಾ ವಲಯ ಅಧ್ಯಕ್ಷ ಡಾ.ಘಾಳೆಪ್ಪ ಪೂಜಾರಿ, ಬಸವಂತರಾಯಗೌಡ ಪಾಟೀಲ್, ಸ್ವಾಮಿದೇವ ದಾಸನಕೇರಿ, ನಾಗೇಂದ್ರ ಜಾಜಿ, ನೂರೊಂದಪ್ಪ ಲೇವಡಿ, ಸುರೇಶ ತಡಿಬಿಡಿ, ಗುರುಪ್ರಸಾದ ವೈದ್ಯ, ದೇವು ವರ್ಕನಳ್ಳಿ, ಮಲ್ಲು ಹಳ್ಳಿಕಟ್ಟಿ, ಇದ್ದರು. ಡಾ.ಎಸ್.ಎಸ್. ನಾಯಕ ಪ್ರಾಸ್ತಾವಿಕ ಮಾತನಾಡಿ, ಗೀತಕ್ಕನ ಸಾಧನೆ, ಬದುಕನ್ನು ಪರಿಚಯಿಸಿಕೊಟ್ಟು ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts