More

    ಬಂಗಾಳದಲ್ಲಿ ಟಿಎಂಸಿ ಬೆಂಬಲಿಗರಿಂದ ಕಲ್ಲು ತೂರಾಟ- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಾರು..

    ಡೈಮಂಡ್ ಹಾರ್ಬರ್​: ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲು ಹೋಗಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಇತರೆ ಬಿಜೆಪಿ ನಾಯಕರ ವಾಹನಗಳ ಮೇಲೆ ಟಿಎಂಸಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. ಘಟನೆಯಲ್ಲಿ ನಡ್ಡಾ ಅವರು ಕೂದಲೆಳೆ ಅಂತರದಲ್ಲಿ ಪಾರಾದರೆ, ಅನೇಕ ನಾಯಕರು, ಕಾರ್ಯಕರ್ತರು ಗಾಯಗೊಂಡಿದ್ದಾರೆ.

    ಕಳವಳಪಟ್ರು ರಾಜ್ಯಪಾಲರು

    ಡೈಮಂಡ್ ಹಾರ್ಬರ್​ನಲ್ಲಿ ಬಿಜೆಪಿ ನಾಯಕರ ವಾಹನಗಳ ಮೇಲೆ ಕಲ್ಲು ತೂರಾಟದ ಸುದ್ದಿ ಕೇಳಿ ರಾಜ್ಯಪಾಲ ಜಗದೀಪ್ ಧನ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದು, ರಾಜ್ಯದ ಪ್ರಧಾನ ಕಾರ್ಯದರ್ಶಿ ಮತ್ತು ಡಿಜಿಪಿಗೆ ಬಿಜೆಪಿ ಸಮಾವೇಶಕ್ಕೂ ಒಂದು ದಿನ ಮುಂಚಿತವಾಗಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳುವಂತೆ ಎಚ್ಚರಿಸಿದ್ದೆ. ಆದರೂ ಹೀಗಾಯಿತು ಎಂದು ಅವರು ವಿಷಾದಿಸಿದ್ದಾರೆ.

    ಲೋಕಸಭೆಯಲ್ಲಿ ಡೈಮಂಡ್ ಹಾರ್ಬರ್ ಕ್ಷೇತ್ರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುತ್ತಿದ್ದು, ಅಲ್ಲಿನ ಟಿಎಂಸಿ ಬೆಂಬಲಿಗರೇ ಕಲ್ಲು ತೂರಾಟ ನಡೆಸಿರುವಂಥದ್ದು. ನಡ್ಡಾ ಅವರು ಬುಲೆಟ್ ಪ್ರೂಫ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾರಣ ಅವರು ಗಾಯಗೊಂಡಿಲ್ಲ. ಆದರೆ, ಅವರ ಹಿಂದೆ ಬೇರೆ ಬೇರೆ ಕಾರುಗಳಲ್ಲಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಮತ್ತು ಇತರೆ ನಾಯಕರು ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಇನ್ಮೇಲೆ ಪ್ರತಿ ತಿಂಗಳೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಅಮಿತ್​ ಷಾ, ಜೆ.ಪಿ.ನಡ್ಡಾ

    ಆದಾಗ್ಯೂ ಸಮಾವೇಶ ಸ್ಥಳಕ್ಕೆ ತಲುಪಿದ ನಡ್ಡಾ ಅವರು ಹೇಳಿದ್ದಿಷ್ಟು – ದುರ್ಗಾ ಮಾತೆಯ ಕೃಪೆಯಿಂದ ಇಲ್ಲಿ ತಲುಪಿದೆವು. ಬಂಗಾಳದಲ್ಲಿ ನಮ್ಮ ಸಾಮಾನ್ಯ ಕಾರ್ಯಕರ್ತರ ಪಾಡೇನು ಎಂಬುದನ್ನು ನನ್ನ ಅರಿವಿನಲ್ಲಿದೆ. ಇವತ್ತು ಅಘಾತಕಾರಿ ಮತ್ತು ಅನಿರೀಕ್ಷಿತ ದಾಳಿಯನ್ನು ನಾವು ಎದುರಿಸಬೇಕಾಯಿತು. ಇಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಗೂಂಡಾ ರಾಜ್​ ಚಾಲ್ತಿಯಲ್ಲಿದೆ. ಗೂಂಡಾ ರಾಜ್ ಅನ್ನು ಕೊನೆಗೊಳಿಸುವುದಕ್ಕೆ ಇದು ಸಕಾಲ. ನಾವು ಗೆದ್ದೇ ಗೆಲ್ತೇವೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಅಮೆರಿಕದ ಸರ್ಕಾರಿ ಶಾಲೆಗಳಲ್ಲಿ ಅಧಿಕೃತವಾಗಿ ಕನ್ನಡ ಭಾಷೆ ಕಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts