More

    ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದ ರಾಫೆಲ್ ನಡಾಲ್..!

    ರೋಮ್: ಕಳೆದ ಏಳು ತಿಂಗಳಲ್ಲಿ ಆಡಿದ ಮೊದಲ ಟೂರ್ನಿಯಲ್ಲೇ ರಾಫೆಲ್ ನಡಾಲ್ ನಿರಾಸೆ ಅನುಭವಿಸಿದ್ದಾರೆ. ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ 9 ಬಾರಿ ಚಾಂಪಿಯನ್ ರಾಫೆಲ್ ನಡಾಲ್ 2-6, 5-7 ನೇರ ಸೆಟ್‌ಗಳಿಂದ ಅರ್ಜೆಂಟೀನಾದ ಡೀಗೊ ಸಚ್‌ವಾಟ್ಜಮನ್ ವಿರುದ್ಧ ಹೀನಾಯ ಸೋಲು ಕಂಡರು. ಇದರೊಂದಿಗೆ ಕರೊನಾ ಕಾಲದಲ್ಲಿ ಆಡಿದ ಮೊದಲ ಟೂರ್ನಿಯಲ್ಲೇ ನಡಾಲ್ ಮುಗ್ಗರಿಸಿದರು. ಮತ್ತೊಂದೆಡೆ, ಯುಎಸ್ ಓಪನ್‌ನಲ್ಲಿ 4ನೇ ಸುತ್ತಿನಲ್ಲೇ ಅನರ್ಹಗೊಂಡಿದ್ದ ನೊವಾಕ್ ಜೋಕೊವಿಕ್ 6-3, 4-6, 6-3 ರಿಂದ ಜರ್ಮನಿಯ ಡೊಮಿನಿಕ್ ಕೊಫೆರ್ ಎದುರು ಸುಲಭ ಜಯ ದಾಖಲಿಸಿದರು.

    ಇದನ್ನೂ ಓದಿ: ಸಿಎಸ್‌ಕೆ ಆಲ್ರೌಂಡರ್ ಡ್ವೈನ್ ಬ್ರಾವೊ ಇನ್ನೂ ಎರಡು ಪಂದ್ಯಗಳಿಗೆ ಫಿಟ್ ಇಲ್ಲ..!

    ವಿಶ್ವ ನಂ.15 ಆಟಗಾರನ ವಿರುದ್ಧ ನಿರೀಕ್ಷೆ ನಿರ್ವಹಣೆ ನೀಡಲು ಸ್ಟಾರ್ ಆಟಗಾರ ನಡಾಲ್ ವಿಫಲರಾದರು. ಜತೆಗೆ ಮುಂದಿನ ವಾರ ಆರಂಭಗೊಳ್ಳಲಿರುವ ಫ್ರೆಂಚ್ ಓಪನ್‌ಗೂ ಮುನ್ನ ಹಿನ್ನಡೆ ಅನುಭವಿಸಿದರು. ಕರೊನಾ ವೈರಸ್ ಭೀತಿಯಿಂದಾಗಿ ನಡಾಲ್ ಯುಎಸ್ ಓಪನ್‌ನಿಂದ ಹಿಂದೆ ಉಳಿದಿದ್ದರು. ಕಳೆದ ಫೆಬ್ರವರಿಯಲ್ಲಿ ಮೆಕ್ಸಿಕೋದಲ್ಲಿ ಕಡೇ ಬಾರಿಗೆ ನಡಾಲ್ ಆಡಿದ್ದರು. 13ನೇ ಫ್ರೆಂಚ್ ಓಪನ್ ಮೇಲೆ ಕಣ್ಣಿಟ್ಟಿರುವ ನಡಾಲ್, ಅನುಭವಿಸಿದ ಸೋಲಿಗೆ ಕ್ಷಮೆಯಿಲ್ಲ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಆಡುವ ವಾತಾವರಣ ಕೂಡ ಪೂರಕವಾಗಿರಿಲ್ಲ ಎಂದಿದ್ದಾರೆ.

    ಭಾರತದಲ್ಲಿ ಸಚಿನ್-ಕೊಹ್ಲಿಗಿಂತ ಈ ಕ್ರಿಕೆಟಿಗನೇ ಫೇಮಸ್ ಎಂದ ಗಾವಸ್ಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts