More

  ನಡಾಲ್, ಹಲೆಪ್​ಗೆ ಮುನ್ನಡೆ, ಹೊರಬಿದ್ದ ಒಸ್ತಾಪೆಂಕೊ

  ಮೆಲ್ಬೋರ್ನ್: ಪಂದ್ಯದ ಮೊದಲ ನಿಮಿಷದಿಂದಲೂ ಎದುರಾಳಿಯ ಮೇಲೆ ಒತ್ತಡ ಹೇರುವಲ್ಲಿ ಯಶ ಕಂಡ ಸ್ಪೇನ್​ನ ಮಾಜಿ ಚಾಂಪಿಯನ್ ರಾಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

  ಮಹಿಳಾ ವಿಭಾಗದಲ್ಲಿ ಸಿಮೋನಾ ಹಲೆಪ್, ಕ್ಯಾರೋಲಿನಾ ಪ್ಲಿಸ್ಲೋವಾ, ಏಂಜಲಿಕ್ ಕೆರ್ಬರ್ ಸರಳ ಜಯದೊಂದಿಗೆ ತೃತೀಯ ಸುತ್ತಿಗೇರಿದರೆ, ಸ್ಪೇನ್​ನ ಗಾರ್ಬಿನ್ ಮುಗುರುಜಾ ಹಾಗೂ ಉಕ್ರೇನ್​ನ ಎಲಿನಾ ಸ್ವಿಟೋಲಿನಾ ಗೆಲುವಿಗಾಗಿ ಪ್ರಯಾಸಪಟ್ಟರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಡಾಲ್ ಮಾತ್ರವಲ್ಲದೆ, 4ನೇ ಶ್ರೇಯಾಂಕದ ಆಟಗಾರ ರಷ್ಯಾದ ಡೆನಿಲ್ ಮೆಡ್ವೆಡೇವ್, ಜರ್ಮನಿಯ ಅಲೆಗ್ಸಾಂಡರ್ ಜ್ವೆರೆವ್, ಆತಿಥೇಯ ಆಸ್ಟ್ರೇಲಿಯಾದ ಆಶಾಕಿರಣ ನಿಕ್ ರ್ಕಿಗಿಯೋಸ್, ಆಸ್ಟ್ರಿಯಾದ ಡೊಮಿನಿಕ್ ಥೀಮ್ ಗೆಲುವು ದಾಖಲಿಸಿದರೆ, ರಷ್ಯಾದ ಕರೇನ್ ಕಚನೋವ್ ಗೆಲುವಿಗಾಗಿ ನಾಲ್ಕೂವರೆ ಗಂಟೆಗಳ ಕಾಲ ಹೋರಾಟ ಮಾಡಿದರು.

  2009ರ ಚಾಂಪಿಯನ್ ಹಾಗೂ ನಾಲ್ಕು ಬಾರಿಯ ರನ್ನರ್​ಅಪ್ ರಾಫೆಲ್ ನಡಾಲ್, ರಾಡ್ ಲೆವರ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾದ ಎಡಗೈ ಆಟಗಾರ ಫೆಡ್ರಿಸಿಯೋ ಡೆಲ್ಬೊನಿಸಿಸ್​ರನ್ನು 1 ಗಂಟೆ 30 ನಿಮಿಷದ ಹೋರಾಟದಲ್ಲಿ 6-3, 7-6 (4), 6-1 ರಿಂದ ಮಣಿಸಿ ಮುನ್ನಡೆ ಕಂಡರು.

  ನಡಾಲ್ ಮುಂದಿನ ಸುತ್ತಿನಲ್ಲಿ ದೇಶಬಾಂಧವ ಪಾಬ್ಲೊ ಕರೆನೋ ಬುಸ್ಟಾರನ್ನು ಎದುರಿಸಲಿದ್ದಾರೆ. ಬುಸ್ಟಾ 2ನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಪೀಟರ್ ಗೊಜೊವ್ಜಿಕ್​ರನ್ನು 6-4, 6-1, 1-6, 6-4 ರಿಂದ ಸೋಲಿಸಿದರು. 7ನೇ ಶ್ರೇಯಾಂಕದ ಆಟಗಾರ ಜರ್ಮನಿಯ ಜ್ವೆರೆವ್ 7-6, 6-4, 7-5 ರಿಂದ ಬೆಲಾರಸ್​ನ ಎಗೊರ್ ಗೆರಾಸಿಮೊವ್​ರನ್ನು ಸೋಲಿಸಿದರು. ರಷ್ಯಾದ ಡೆನಿಲ್ ಮೆಡ್ವೆಡೇವ್, ತಮ್ಮ ಮೂಗಿನಿಂದ ರಕ್ತ ಸೋರುತ್ತಿದ್ದ ನಡುವೆಯೂ 7-5, 6-1, 6-3 ರಿಂದ ಸ್ಪೇನ್​ನ ಪೆಡ್ರೋ ಮಾರ್ಟಿನೆಜ್​ರನ್ನು ಮಣಿಸಿ ಮುನ್ನಡೆ ಕಂಡರು.

  ಸ್ಟಾ್ಯನಿಸ್ಲಾಸ್ ವಾವ್ರಿಂಕಾ, ಗೀಲ್ ಮಾನ್​ಫಿಲ್ಸ್, ಟೈಲರ್ ಫಿಟ್ಜ್, ಅಲೆಕ್ಸಿ ಪಾಪ್​ಯಿುರ್ನ್, ಡೇವಿಡ್ ಗೊಫಿನ್, ಫೆರ್ನಾಂಡೋ ವೆರ್ಡಾಸ್ಕೋ, ಎರ್ನೆಸ್ಟ್ ಗುಲ್ಬಿಸ್, ಆಂಡ್ರೆ ರುಬಲೇವ್ ಹಾಗೂ ಜಾನ್ ಐಸ್ನೆರ್ 3ನೇ ಸುತ್ತಿಗೆ ಮುನ್ನಡೆ ಕಂಡರು.

  ಪ್ಲಿಸ್ಕೋವಾಗೆ ಜಯ

  ರೊಮೆನಿಯಾ ಆಟಗಾರ್ತಿ ಸಿಮೊನಾ ಹಲೆಪ್, ಇಂಗ್ಲೆಂಡ್​ನ ಹೇರಿಯಟ್ ಡಾರ್ಟ್ ರನ್ನು 6-2, 6-4 ರಿಂದ ಮಣಿಸಿದರು. ಗಾರ್ಬಿನ್ ಮುಗುರುಜಾ 6-3, 3-6, 6-3 ರಿಂದ ಆಸ್ಟ್ರೇಲಿಯಾದ ಆಜ್ಲಾ ಟೊಮ್ಲಾನೊವಿಕ್​ರನ್ನು ಮಣಿಸಿದರೆ, ಸ್ವಿಸ್ ಆಟಗಾರ್ತಿ ಬೆಲಿಂಡಾ ಬೆನ್ಸಿಕ್ 7-5, 7-5 ರಿಂದ 2017ರ ಫ್ರೆಂಚ್ ಓಪನ್ ಚಾಂಪಿಯನ್ ಲಾಟ್ವಿಯಾದ ಜೆಲೆನಾ ಒಸ್ತಾಪೆಂಕೊರನ್ನು ಸೋಲಿಸಿದರು. ಕ್ಯಾರೋಲಿನಾ ಪ್ಲಿಸ್ಕೋವಾ 6-3, 6-3 ರಿಂದ ಜರ್ಮನಿಯ ಲೌರಾ ಸಿಗ್ಮಂಡ್​ರ ವಿರುದ್ಧ ಜಯ ಸಾಧಿಸಿದರೆ, ಏಂಜಲಿಕ್ ಕೆರ್ಬರ್ 6-3, 6-2 ರಿಂದ ಪ್ರಿಸ್ಕಿಲಾ ಹಾನ್​ರನ್ನು ಸೋಲಿಸಿದರು. ಎಲಿನಾ ಸ್ವಿಟೋಲಿನಾ 6-2, 7-6 (8) ರಿಂದ ಲೌರಾ ಡೆವಿಸ್ ವಿರುದ್ಧ ಗೆದ್ದರು.

  ಹೊರಬಿದ್ದ ಸಾನಿಯಾ

  ತಾಯ್ತನದ ಸುದೀರ್ಘ ರಜೆಯ ಬಳಿಕ ಆಡಿದ ಮೊದಲ ಗ್ರಾಂಡ್ ಸ್ಲಾಂನಲ್ಲಿಯೇ ಸಾನಿಯಾ ಮಿರ್ಜಾ ಗಾಯದ ಸಮಸ್ಯೆಗೆ ತುತ್ತಾದರು. ಇದರಿಂದಾಗಿ ಮಹಿಳಾ ಡಬಲ್ಸ್ನ ಮೊದಲ ಸುತ್ತಿನಲ್ಲಿಯೇ ಅವರು ನಿರ್ಗಮನ ಕಂಡಿದ್ದಾರೆ. ಕಣಕಾಲಿನ ಗಾಯಕ್ಕೆ ತುತ್ತಾದ ಸಾನಿಯಾ ಮೊದಲ ಸುತ್ತಿನ ಪಂದ್ಯದ ಅರ್ಧದಲ್ಲಿಯೇ ನಿವೃತ್ತಿ ನಿರ್ಧಾರ ಮಾಡಿದರು. ಟೆನಿಸ್​ನಿಂದ ಎರಡು ವರ್ಷಗಳ ಕಾಲ ದೂರವಿದ್ದ ಸಾನಿಯಾ ಆಸ್ಟ್ರೇಲಿಯನ್ ಓಪನ್​ಗೂ ಮುನ್ನ ನಡೆದಿದ್ದ ಹೋಬರ್ಟ್ ಇಂಟರ್​ನ್ಯಾಷನಲ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಉಕ್ರೇನ್​ನ ನಾಡಿಯಾ ಕಿಚೆನಾಕ್ ಜತೆಗೂಡಿ ಚಾಂಪಿಯನ್ ಆಗಿದ್ದರು. ಈ ಗೆಲುವಿನ ವಿಶ್ವಾಸದೊಂದಿಗೆ ಆಡಲಿಳಿದ ಸಾನಿಯಾ ಮಿರ್ಜಾ ಹಾಗೂ ಕಿಚೆನಾಕ್ ಜೋಡಿ ಚೀನಾದ ಕ್ಸಿಯುನ್ ಹಾನ್ ಹಾಗೂ ಲಿ ಝುು ವಿರುದ್ಧ 2-6, 0-1 ರಿಂದ ಹಿನ್ನಡೆಯಲ್ಲಿದ್ದಾಗ ಸಾನಿಯಾ ಮಿರ್ಜಾ ಪಂದ್ಯ ತೊರೆಯುವ ನಿರ್ಧಾರ ಮಾಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts