More

    ಹಗರಣಗಳ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಎನ್​.ಆರ್​. ರಮೇಶ್ ಆಹ್ವಾನ​

    ಬೆಂಗಳೂರು: ತಮ್ಮ ಅವಧಿಯಲ್ಲಿ ಕಾನೂನು ಇಲಾಖೆಯಲ್ಲಿ ನಡೆದ ಬೃಹತ್ ಹಗರಣವನ್ನು ಮರೆತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಲಿ ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯವು ಹೋದಲ್ಲಿ ಬಂದಲ್ಲಿ ಬೊಬ್ಬೆ ಹೊಡೆಯುತ್ತಿದ್ದು, ತಮ್ಮ ಅವಧಿಯ ಹಗರಣದ ಬಗ್ಗೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್​.ಆರ್​. ರಮೇಶ್​ ಅವರು ಸಿದ್ದರಾಮಯ್ಯರನ್ನು ಹಗರಣಗಳ ಕುರಿತ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎನ್​.ಆರ್​. ರಮೇಶ್, ಕರ್ನಾಟಕ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿಯಿದ್ದ 197 ಮಂದಿ ಎಪಿಪಿ (ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್) ಮತ್ತು ಎಜಿಪಿ (ಸಹಾಯಕ ಸರ್ಕಾರಿ ಪ್ಲೀಡರ್)ಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 2013-14ರ ಸಾಲಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಮಾಜಿ ಸಿಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಅಂದಿನ ಕಾನೂನು ಸಚಿವ ಟಿ. ಬಿ. ಜಯಚಂದ್ರ ಅವರು ಪ್ರತಿಯೊಬ್ಬ ಅಭ್ಯರ್ಥಿಯಿಂದ ತಲಾ 30 ರಿಂದ 40 ಲಕ್ಷ ರೂಪಾಯಿಗಳಷ್ಟು ಹಣ ಪಡೆದು ನಡೆಸಿದ್ದ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯವು 31 ಮಂದಿ ಅಧಿಕಾರಿಗಳನ್ನು ಈಗಾಗಲೇ ಅಮಾನತುಗೊಳಿಸಿದೆ.

    ಆದರೆ, ತಮ್ಮ ಅವಧಿಯ ಕಾನೂನು ಇಲಾಖೆಯ ಈ ಬೃಹತ್ ಹಗರಣವನ್ನು ಮರೆತಿರುವ ಸಿದ್ದರಾಮಯ್ಯನವರು ತಮ್ಮದೇ ಅವಧಿಯಲ್ಲಿ ನಡೆದ ಮತ್ತೊಂದು ಶಿಕ್ಷಕರ ನೇಮಕಾತಿ ಹಗರಣವನ್ನೂ ಸಹ ಮರೆತು, ಹಾಲಿ ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯ ತಾವು ಹೋದಲ್ಲಿ ಬಂದಲ್ಲಿ ಬೊಬ್ಬೆ ಹೊಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಅವರ ಕಾಲದಲ್ಲಿ ನಡೆದ ಕಾನೂನು ಇಲಾಖೆಯ 197 ಮಂದಿ APP ಮತ್ತು AGPಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳನ್ನು ವಿಧಾನಸೌಧದ ಅವರ ಅಧಿಕೃತ ಕಚೇರಿಗೆ ನೆನಪಿನ ಪತ್ರದೊಂದಿಗೆ ಕಳುಹಿಸಲಾಗಿತ್ತು. ಆದರೆ, ಅವರಿಂದ ಅಂದು ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಇಬ್ಬರು ವಕೀಲರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಆದರೂ ಈ ಬಗ್ಗೆ ನೀವು ತುಟಿ ಬಿಚ್ಚಲೇ ಇಲ್ಲ.

    ಸಿದ್ದರಾಮಯ್ಯನವರೇ ತಮ್ಮ ಅವಧಿಯಲ್ಲಿ ನಡೆದ ಬೃಹತ್ ಹಗರಣ ಸಂಬಂಧ ಈಗಲಾದರೂ ಮಾಧ್ಯಮಗಳ ಸಮ್ಮುಖದಲ್ಲಿ ಬಹಿರಂಗವಾಗಿ ಚರ್ಚಿಸಲು ಸಾಧ್ಯವೇ? ಎನ್ನುವ ಮೂಲಕ ಎನ್​.ಆರ್​. ರಮೇಶ್​ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬಹಿರಂಗ ಪತ್ರದ ಮೂಲಕ ಆಹ್ವಾನಿಸಿದ್ದಾರೆ.

    ರಮೇಶ್ ಎನ್.ಆರ್. ಅವರು ಬರೆದಿರುವ ಬಹಿರಂಗ ಪತ್ರ ಈ ಕೆಳಕಂಡಂತಿದೆ….

    ಹಗರಣಗಳ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಎನ್​.ಆರ್​. ರಮೇಶ್ ಆಹ್ವಾನ​

    ಹಗರಣಗಳ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಎನ್​.ಆರ್​. ರಮೇಶ್ ಆಹ್ವಾನ​

    ಹಗರಣಗಳ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಎನ್​.ಆರ್​. ರಮೇಶ್ ಆಹ್ವಾನ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts