More

    ಎನ್.ಮಲ್ಲೇಶಯ್ಯಗೆ ರಾಜ್ಯೋತ್ಸವ ಪ್ರಶಸ್ತಿ : ರಂಗಭೂಮಿ ಕ್ಷೇತ್ರದ ಸಾಧನೆಗೆ ಗೌರವ, 60ಕ್ಕೂ ಹೆಚ್ಚು ನಾಟಕ ಪ್ರದರ್ಶನ

    ಮಾಗಡಿ: ರಂಗಭೂಮಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ತಾಲೂಕಿನ ಜುಟ್ಟನಹಳ್ಳಿಯ ಎನ್.ಮಲ್ಲೇಶಯ್ಯ ಅವರು 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    ಮಾಗಡಿಯಿಂದ 5 ಕಿಮೀ. ದೂರವಿರುವ ಜುಟ್ಟನಹಳ್ಳಿ ಗ್ರಾಮದಲ್ಲಿ ಲಿಂಗೇಗೌಡ ಮತ್ತು ಪುಟ್ಟರಂಗಮ್ಮಅವರ 3ನೇ ಪುತ್ರನಾಗಿ (ಒಟ್ಟು 7ಮಂದಿ) ಜನಿಸಿದ ಇವರು, 13ನೇ ವಯಸ್ಸಿನಿಂದಲೇ ರಂಗಭೂಮಿ ಕಡೆಗೆ ಆಕರ್ಷಿತರಾಗಿ ಇಲ್ಲಿಯವರೆಗೂ 60ಕ್ಕೂ ಹೆಚ್ಚು ಪೌರಾಣಿಕ ನಾಟಕಗಳನ್ನು ಮಾಡಿ ವಿವಿಧ ಪಾತ್ರಗಳ ಮೂಲಕ ಪ್ರೇಕ್ಷರನ್ನು ರಂಜಿಸಿದ್ದಾರೆ.

    ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ  ಇವರ ಸಹೋದರರಾದ ಬೈರಪ್ಪ ಕೂಡ 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವರ ತಮ್ಮ ಜಯರಾಂ ಕೂಡ 20ಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಿದ್ದಾರೆ. ಮಲ್ಲೇಶಯ್ಯ ಪಕ್ಕದ ಹಳ್ಳಿಯಾದ ಕೆಂಪಸಾಗರದಲ್ಲಿ 1 ರಿಂದ 7ನೇ ತರಗತಿಯವರೆಗೂ, ನಂತರ 7 ರಿಂದ 10ನೇ ತರಗತಿಯನ್ನು ವಾಗಡಿ ಪಟ್ಟಣದ ಮುನಿಸಿಪಲ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ.

    ರಾಜ್ಯೋತ್ಸವ ಪ್ರಶಸ್ತಿಗೆ ಈ ಹಿಂದೆ ಕೂಡ ನನ್ನ ವಿವರ ಸಲ್ಲಿಸಿದ್ದೆ, ಇಲ್ಲಿಯವರೆಗೂ ಸರ್ಕಾರ ಗುರುತಿಸಿರಲಿಲ್ಲ. ಆದರೆ ಈ ಬಾರಿ ಗುರುತಿಸಿರುವುದು ಸಂತೋಷ ತಂದಿದೆ. ಇದೇ ರೀತಿ ರಾಜ್ಯ ಸರ್ಕಾರ ಗ್ರಾಮೀಣ ಕಲಾವಿದರನ್ನು ಗುರುತಿಸುವ ಕೆಲಸ ಮಾಡಬೇಕಿದೆ.
    ಮಲ್ಲೇಶಯ್ಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ರಾಗನಟ, ಜುಟ್ಟನಹಳ್ಳಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts