More

    ಸರ್ಕಾರವೇ ಗಾಬರಿಯಾಗುವಂತಹ ಟಫ್ ರೂಲ್ಸ್ ಜಾರಿಗೊಳಿಸಿದ ಎಸ್​ಐ! ಕರೊನಾ ಸಮಯದಲ್ಲಿ ಇದು ಸರಿನಾ?

    ಮೈಸೂರು: ಸರ್ಕಾರವೇ ಬೆರಗಾಗುವಂತಹ ಕಠಿಣ ನಿಯಮವನ್ನು ಜಾರಿ ಮಾಡಿ ಬೈಕ್​ ಸವಾರನೊಬ್ಬನನ್ನು ಸಬ್​ಇನ್ಸ್​ಪೆಕ್ಟರ್​ ಪರಿಪರಿಯಾಗಿ ಕಾಡಿರುವ ಘಟನೆ ಮೈಸೂರಿನ ಜಯಪುರದಲ್ಲಿ ನಡೆದಿದೆ.

    ಕರೊನಾ ಸಂಕಷ್ಟದ ಸಮಯದಲ್ಲಿ ಮಾನವೀಯತೆಯಿಂದ ವರ್ತಿಸಬೇಕಾದ ಕೆಲ ಪೊಲೀಸರು ಮೃಗಗಳಂತಾಗಿರುವುದು ದುರ್ದೈವದ ಸಂಗತಿ. ಎಲ್ಲ ದಾಖಲೆಗಳಿದ್ದರೂ ಜಮೀನಿಗೆ ತೆರಳುತ್ತಿದ್ದ ರೈತನ ಬೈಕ್‌ಗೆ ಎಮಿಷನ್ ಟೆಸ್ಟ್ ಕೇಸ್ ಹಾಕಿದ ಸಬ್​ಇನ್ಸ್​ಪೆಕ್ಟರ್ 1000 ರೂಪಾಯಿ ದಂಡ ವಿಧಿಸಿದ್ದಾರೆ.

    ಜಮೀನಿನ ಲೀಸ್​ ದಾಖಲಾತಿಗಳನ್ನು ತೋರಿಸಿದರೂ ಸಹ ಬೈಕ್ ವಶಕ್ಕೆ ಪಡೆದ ಪೊಲೀಸರು. ಬೆಳಗ್ಗೆ 6 ರಿಂದ ಹತ್ತು ಗಂಟೆ ಒಳಗಡೆ ಮಾತ್ರ ಓಡಾಟ ಮಾಡುವಂತೆ ತಾಕೀತು ಹಾಕಿದರು. ಜಮೀನಿನಲ್ಲಿ ಬಾಳೆ ಬೆಳೆ ಹಾಳಾಗುತ್ತಿದೆ ಬಿಡಿ ಸ್ವಾಮಿ ಎಂದು ಗೋಗರೆದರೂ ಬಿಡದೆ ಪಿಎಸ್ಐ ಅಮಾನವೀಯವಾಗಿ ವರ್ತಿಸಿದ್ದಾರೆ.

    ಮೈಸೂರಿನಲ್ಲಿ ವಾಸವಾಗಿದ್ದ ರೈತ ಪ್ರಶಾಂತ್, ಹುಲ್ಲಹಳ್ಳಿ ಸಮೀಪದ ಹರದನಹಳ್ಳಿ, ಕಣ್ಣೇನೂರಿನಲ್ಲಿ ಜಮೀನು ಗುತ್ತಿಗೆ ಪಡೆದಿದ್ದಾರೆ. ಜಯಪುರ ಮಾರ್ಗವಾಗಿ ಜಮೀನಿಗೆ ತೆರಳುವ ವೇಳೆ ಪೊಲೀಸರು ಬೈಕ್ ವಶಕ್ಕೆ ಪಡೆದಿದ್ದಾರೆ. ಡಿಎಲ್, ಆರ್‌ಸಿ, ಇಶ್ಯುರೆನ್ಸ್‌ನಂತಹ ಡಾಕ್ಯುಮೆಂಟ್ ಇದ್ದರೂ ಸಹ ಎಮಿಷನ್ ಟೆಸ್ಟ್ ಇಲ್ಲ ಅಂತ 1 ಸಾವಿರ ದಂಡ ವಿಧಿಸಿದ್ದಾರೆ.

    ಕರೊನಾ ಸಮಯದಲ್ಲಿ ಆತ್ಮ ವಿಶ್ವಾಸ ತುಂಬ ಬೇಕಿದ್ದ ಪೊಲೀಸರು ಈ ರೀತಿ ನಡೆದುಕೊಂಡರೇ ಹೇಗೆ ಎಂದು ಪ್ರಶ್ನಿಸಿ, ಪಿಎಸ್ಐ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮುಂದಿನ ವಾರದಿಂದ ದೇಶಿ ಮಾರುಕಟ್ಟೆಗಳಲ್ಲಿ ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆ ಲಭ್ಯ: ಬೆಲೆ ಹೀಗಿದೆ ನೋಡಿ!

    ಮುಂಬೈ 2ನೇ ಅಲೆಯನ್ನು ಎದುರಿಸಿದ್ದು ಹೇಗೆ?; ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಶ್ರಮದ ಫಲ

    ಲಾಕ್​ಡೌನ್​ನಿಂದ ತಗ್ಗಿದ ಸೋಂಕು: ಜುಲೈಗೆ ಎರಡನೇ ಅಲೆ ಇಳಿಕೆ, 3-5 ತಿಂಗಳ ಬಳಿಕ 3ನೇ ಅಲೆ ಅಬ್ಬರ, ತಜ್ಞರ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts