More

    ಹಾಸಿಗೆಯಿಂದ ಫ್ಯಾನ್​ವರೆಗಿನ ಎತ್ತರ 5’11, ಸುಶಾಂತ್​ ಹೈಟು 5’10; ಆತ್ಮಹತ್ಯೆ ಹೇಗೆ ಸಾಧ್ಯ? ತನಿಖೆ ವೇಳೆ ಹೊಸ ವಾದ

    ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಎರಡು ತಿಂಗಳ ಬಳಿಕವೂ ತನಿಖೆಯಲ್ಲಿ ಅಚ್ಚರಿಯ ಸಂಗತಿಗಳು ಹೊರ ಬೀಳುತ್ತಲೇ ಇವೆ.

    ಬಾಂದ್ರಾದಲ್ಲಿರುವ ಮನೆಯಲ್ಲಿ ಜೂನ್​ 14ರಂದು ಸುಶಾಂತ್​ ಸಿಂಗ್​ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಬಂದು ಮಹಜರು ಅಥವಾ ಪಂಚನಾಮೆ ನಡೆಸಿದ್ದ ಪೊಲೀಸರ ವರದಿಯಲ್ಲಿ ಆಶ್ಚರ್ಯಕರ ಸಂಗತಿಯೊಂದು ಬಯಲಾಗಿದೆ.

    ಇದನ್ನೂ ಓದಿ; ಭಾರತದಲ್ಲಿ ಬಿಜೆಪಿ, ಆರ್​ಎಸ್​ಎಸ್​ ನಿಯಂತ್ರಣದಲ್ಲಿದೆಯೇ ಫೇಸ್​ಬುಕ್..? ಕೆಸರೆರಚಾಟಕ್ಕೆ ಕಾರಣವೇನು? 

    ಸುಶಾಂತ್​ ಸಿಂಗ್​ ಬೆಡ್​ರೂಮ್​ನಲ್ಲಿ ಮಂಚದ ಮೇಲಿದ್ದ ಹಾಸಿಗೆಯಿಂದ ಫ್ಯಾನ್​ವರೆಗಿನ ಎತ್ತರ 5 ಅಡಿ 11 ಅಂಗುಲ ಇದೆ. ಆದರೆ, ಸುಶಾಂತ್​ ಎತ್ತರ 5 ಅಡಿ 10 ಅಂಗುಲ ಇರುವುದು ಗೊತ್ತಾಗಿದೆ. ಹೀಗಿರುವಾಗ ಅಷ್ಟು ಎತ್ತರದ ವ್ಯಕ್ತಿ ಫ್ಯಾನಿನಿಂದ ನೇತಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ.

    ಈ ಪ್ರಶ್ನೆಯೇ ಸುಶಾಂತ್​ ಸಿಂಗ್​ ರಜಪೂತ್​ನದ್ದು ಆತ್ಮಹತ್ಯೆ ಎಂಬ ವಾದವನ್ನೇ ಪೊಳ್ಳು ಮಾಡುತ್ತದೆ. ಇದಲ್ಲದೇ, ಆತ್ಮಹತ್ಯೆಗೆ ಸ್ನಾನಗೃಹದ ನಿಲುವಂಗಿಯ ಬೆಲ್ಟ್​ ಬಳಸಿದ್ದ. ಅದು ತುಂಡಾಗಿತ್ತು. ಹಾಸಿಗೆ ಮೇಲೆಯೇ ಬಿದ್ದಿತ್ತು ಎಂಬುದು ಕೂಡ ಪೊಲೀಸ್​ ವರದಿಯಲ್ಲಿಯೇ ಇದೆ.

    ಇದನ್ನೂ ಓದಿ; ಸೆ.6ರವರೆಗೂ ಲಾಕ್​ಡೌನ್​ ವಿಸ್ತರಣೆ; ನಿರ್ಬಂಧಗಳನ್ನು ಹಿಂದಿನಂತೆಯೇ ಮುಂದುವರಿಸಿದ್ದೆಲ್ಲಿ? 

    ಕೊನೆಗೆ ಹಸಿರುಕುರ್ತಾ ಬಳಸಿಕೊಂಡು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ಹೇಳಿದ್ದರು. ಜತೆಗೆ ಫೊರೆನ್ಸಿಕ್​ ತನಿಖೆಯಲ್ಲೂ ಇದು ಖಚಿತವಾಗಿದೆ ಎಂದು ವರದಿ ನೀಡಿದ್ದರು. ತನಿಖೆ ಮುಂದುವರಿದಂತೆ ಹೊಸ ಹೊಸ ಸಂಗತಿಗಳ ಬಯಲಾಗುತ್ತಿರುವುದು ಪ್ರಕರಣವನ್ನು ಇನ್ನಷ್ಟು ಕಗ್ಗಂಟಾಗಿಸುತ್ತಿದೆ.

    ಇದು ಭಾರಿ ಭಯಾನಕ ಕರೊನಾ; ಈಗಿನದ್ದಕ್ಕಿಂತಲೂ ಹತ್ತು ಮಾರಕ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts