More

    ರಾತ್ರಿ ಕಾರು ಪಾರ್ಕ್​ ಮಾಡಿ ಬೆಳಗೆದ್ದು ನೋಡುವಷ್ಟರಲ್ಲಿ ದಂಪತಿಗೆ ಕಾದಿತ್ತು ಬಿಗ್​ ಶಾಕ್​!

    ಲಂಡನ್​: ನಮ್ಮ ಸುತ್ತಮುತ್ತ ನಿಗೂಢ ಎನಿಸುವ ಸಾಕಷ್ಟು ಘಟನೆಗಳು ನಡೆಯುತ್ತಿರುತ್ತವೆ. ನಮ್ಮ ಅರಿವಿಗೆ ಬರದೇ ಘಟನೆ ಹೇಗೆ ಸಂಭವಿಸಿತು ಎಂದು ಅದರ ಮೂಲ ಹುಡುಕುವ ಪ್ರಯತ್ನ ಮಾಡಿದರೂ ಕೆಲವೊಮ್ಮೆ ನಮಗೆ ಸಿಗುವ ಉತ್ತರವೂ ಸಹ ನಿಗೂಢವಾಗಿಯೇ ಇರುತ್ತದೆ. ಅಂಥದ್ದೆ ಒಂದು ವಿಚಿತ್ರ ಘಟನೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ನಡೆದಿದೆ.

    ಮನೆಯ ಹೊರಗಡೆ ರಾತ್ರಿ ಪಾರ್ಕ್​ ಮಾಡಿದ್ದ ಕಾರನ್ನು ಬೆಳಗೆದ್ದು ನೋಡುವಷ್ಟರಲ್ಲಿ ಅದರ ಮೇಲೆ ನಾಲ್ಕು ಬೆರಳಿನ ಹೆಜ್ಜೆ ಗುರುತು ಪತ್ತೆಯಾಗಿರುವುದು ನಿಗೂಢತೆಗೆ ಕಾರಣವಾಗಿದೆ. ಇಂಗ್ಲೆಂಡನ್​ ದಕ್ಷಿಣ ಭಾಗ ಗ್ರಿಂಬ್ಸಿ ನಗರ ವ್ಯಾಪ್ತಿಯಲ್ಲಿ ಬರುವ ಸ್ಕಾರ್ಥೋ ನಗರ ನಿವಾಸಿ ಹಾಗೂ ಕಾರು ಚಾಲಕಿ ಅಲಿಸಿಯಾ ಸ್ಮಿತ್​ ಹೆಜ್ಜೆ ಗುರುತನ್ನು ಪತ್ತೆಹಚ್ಚಿದ್ದಾರೆ.

    ಇದನ್ನೂ ಓದಿ: ಕೋವಿಡ್​ ರೋಗಿಯ ಜತೆ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ನರ್ಸ್​: ಪ್ರಕರಣದಲ್ಲಿದೆ ಊಹೆಗೂ ಮೀರಿದ ಸ್ಫೋಟಕ ಟ್ವಿಸ್ಟ್​!

    ಗುರುವಾರ ಬೆಳಗ್ಗೆ ಎಚ್ಚರಗೊಂಡ ಬಳಿಕ ಕಾರಿನ ಬಳಿ ಹೋಗಿ ನೋಡಿದಾಗ ವಿಂಡ್​ಶೀಲ್ಡ್​ ಮತ್ತು ಕಾರಿನ ರೂಫ್​ ಮೇಲೆ ನಾಲ್ಕು ಬೆರಳಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಹೆಜ್ಜೆ ಗುರುತು ಕೆಲವೇ ಇಂಚಿನಷ್ಟು ಉದ್ದವಾಗಿದೆ ಮತ್ತು ನಾಲ್ಕೇ ಬೆರಳುಗಳನ್ನು ಹೊಂದಿದ್ದು, ಸಾಕಷ್ಟು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.

    ರಾತ್ರಿ ಕಾರು ಪಾರ್ಕ್​ ಮಾಡಿ ಬೆಳಗೆದ್ದು ನೋಡುವಷ್ಟರಲ್ಲಿ ದಂಪತಿಗೆ ಕಾದಿತ್ತು ಬಿಗ್​ ಶಾಕ್​!

    ಇದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಅಲಿಸಿಯಾ ಮತ್ತು ಆಕೆಯ ಪತಿ ಜಾಲತಾಣದಲ್ಲಿ ಹಂಚಿಕೊಂಡು ಜಾಲತಾಣಿಗರ ಅಭಿಪ್ರಾಯ ಕೋರಿದ್ದಾರೆ. ಅದಕ್ಕೂ ಮುನ್ನ ವಿಚಿತ್ರ ಅನುಭವವನ್ನು ಹಂಚಿಕೊಂಡಿರುವ ಅವರು ಹಿಂದೆಂದಿಗೂ ಈ ರೀತಿ ನಾವು ನೋಡಿರಲಿಲ್ಲ. ಇದು ತುಂಬಾ ವಿಚಿತ್ರ. ಹೆಜ್ಜೆ ಗುರುತುಗಳಲ್ಲಿ ನಾಲ್ಕೇ ಬೆರಳಿತ್ತು. ನೋಡಲು ಮನುಷ್ಯನ ಹೆಜ್ಜೆಯಂತಿರಲಿಲ್ಲ. ಅದು ಮಗುವಿನ ಕಾಲೇ ಎಂಬುದು ನಮಗೆ ಖಚಿತವಾಗಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ತಾನಾಡಿದ ಒಂದೇ ಮಾತಿಗೆ ಸಂಬಂಧಿಯಿಂದಲೇ ಬರ್ಬರ ಹತ್ಯೆಯಾದ ಸುಂದರಿ: ಬೆಚ್ಚಿಬೀಳಿಸುತ್ತೇ ಕೊಲೆಗಾರನ ಕ್ರೌರ್ಯ!

    ತುಂಬಾ ಚಳಿಯ ಹಾಗೂ ಹಿಮದ ಹವಾಮಾನದಲ್ಲಿ ಯಾರಾದರೂ ಬರಿಗಾಲಿನಿಂದ ಏಕೆ ಇರುತ್ತಾರೆ? ಎಂದು ಪ್ರಶ್ನಿಸಿರುವ ದಂಪತಿ, ಕಾರನ್ನು ಮನೆಯ ಹೊರಭಾಗದಲ್ಲಿ ಪಾರ್ಕ್​ ಮಾಡಿದ್ದೆವು. ರಾತ್ರಿ ಯಾವುದೇ ಶಬ್ದವನ್ನು ಸಹ ಕೇಳಲಿಲ್ಲ. ಬೆಳಗ್ಗೆ 10.30ರ ಸುಮಾರಿಗೆ ಮನೆಯಿಂದ ಹೊರಗಡೆ ಬಂದೆವು. ಕಾರನ್ನು ನೋಡಿದಾಗ ಅದರ ಮೇಲೆ ಹೆಜ್ಜೆ ಗುರುತುಗಳನ್ನು ನೋಡಿ ಶಾಕ್​ ಆದೆವು. ಹೇಗೆ ಬಂದಿರಬಹುದು ಎಂಬುದರ ಐಡಿಯಾ ಇಲ್ಲ. ಯಾವುದೇ ಹೆಜ್ಜೆ ಗುರುತಲ್ಲೂ ಐದು ಬೆರಳುಗಳೇ ಇಲ್ಲ. ನಿಜಕ್ಕೂ ತುಂಬಾ ವಿಚಿತ್ರ ಅನಿಸುತ್ತಿದ್ದ ಎಂದು ಶೇರ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

    ಲವ್​ ಪ್ರಪೋಸ್​ಗೆ ಯೆಸ್​ ಎಂದ ಬೆನ್ನಲ್ಲೇ 650 ಅಡಿ ಪ್ರಪಾತಕ್ಕೆ ಬಿದ್ದ ಪ್ರೇಯಸಿ: ನಂತರ ನಡೆದಿದೆಲ್ಲ ಪವಾಡ!

    ಬ್ರಿಟನ್​ ದಂಪತಿಯ ಹಣದಾಸೆಗೆ ಬಲಿಯಾಯಿತು ಭಾರತದ ಕೂಸು! ದತ್ತು ಪಡೆದ ದಂಪತಿ ಹೀಗಾ ಮಾಡೋದು?

    ಕಣ್ಣುಗಳನ್ನು ಕಳೆದುಕೊಂಡ ಸಿಂಹದ ಮರಿಯ ನೋವಿನ ಕತೆ ಕೇಳಿದ್ರೆ ಕಣ್ಣೀರಿನ ಜತೆ ಕೋಪವು ಬರುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts