More

    ಮೈಸೂರು: ಮಹಿಳಾ ಹಂತಕನಿಗೆ ಜೀವಾವಧಿ ಶಿಕ್ಷೆ

    ಮಹಿಳೆಯೊಬ್ಬರನ್ನು ಹತ್ಯೆಗೈದ ಅಪರಾಧಿಗೆ ನಗರದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಹಾಡ್ಯ ಗ್ರಾಮದ ಮಹದೇವಸ್ವಾಮಿ ಪುತ್ರ ನಾಗೇಶ ಶಿಕ್ಷೆಗೆ ಗುರಿಯಾದ ಅಪರಾಧಿ. ಈತ 15 ನವೆಂಬರ್ 2019 ರಂದು ಹುಲ್ಲಹಳ್ಳಿ ಗ್ರಾಮದ ನಂಜಮ್ಮಣಿ ಪುತ್ರಿ ಲಕ್ಷ್ಮೀ ಎಂಬಾಕೆಯನ್ನು ಕುತ್ತಿಗೆಗೆ ಟವಲ್ ಬಿಗಿದು ಹತ್ಯೆಗೈದಿದ್ದ.

    ಪ್ರಕರಣದ ಸಾರಾಂಶ: ಲಕ್ಷ್ಮೀಯನ್ನು 2009ರಲ್ಲಿ ತೆರಕಣಾಂಬಿ ಗ್ರಾಮದ ಮಂಜೇಶ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಪುತ್ರ ಇದ್ದಾನೆ. ವಿವಾಹವಾದ ಮೂರು ವರ್ಷಗಳ ನಂತರ ಮಂಜೇಶ ಮೃತಪಟ್ಟರು. ಆ ನಂತರ ಲಕ್ಷ್ಮೀ ತವರು ಮನೆಯಲ್ಲಿ ವಾಸ ಮಾಡಲು ಪ್ರಾರಂಭಿಸಿದ್ದರು. ಜೀವನ ಸಾಗಿಸಲು ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುತ್ತಿದ್ದರು. ಆ ಸಂದರ್ಭ ಹಾಡ್ಯ ಗ್ರಾಮದ ನಾಗೇಶನ ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿತು.

    ಈ ಪ್ರೀತಿಗೆ ಲಕ್ಷ್ಮೀ ತಾಯಿ ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭ ಲಕ್ಷ್ಮೀ ಹಾಗೂ ನಾಗೇಶ ಹುಲ್ಲಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡಲು ಪ್ರಾರಂಭಿಸಿದರು. ಒಟ್ಟಿಗೆ ಬದುಕಲು ಪ್ರಾರಂಭಿಸಿದರೂ ನಾಗೇಶ ಲಕ್ಷ್ಮೀಯನ್ನು ವಿವಾಹವಾಗಿರಲಿಲ್ಲ. ಲಕ್ಷ್ಮೀ ಆಗಿಂ ದಾಗೆ ವಿವಾಹಕ್ಕೆ ಒತ್ತಾಯಿಸಿದಾಗ ಆಕ್ರೋಶಗೊಂಡ ನಾಗೇಶ ಕುತ್ತಿಗೆಗೆ ಟವಲ್ ಬಿಗಿದು ಹತ್ಯೆಗೈದಿದ್ದ.

    ನ್ಯಾಯಾಧೀಶರಾದ ಕೆ.ಭಾಗ್ಯ ಪ್ರಕರಣದ ವಿಚಾರಣೆ ನಡೆಸಿ ನಾಗೇಶನ ಮೇಲೆ ಹೊರಿಸಲಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ 1 ವರ್ಷ ಕಠಿಣ ಸಜೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts