More

    ಸುಧಮ್ಮರ ಮುಡಿಗೇರಲಿದೆ ಮತ್ತೊಂದು ಗೌರವ

    ಮೈಸೂರು: ಸರಳತೆ, ಸಜ್ಜನಿಕೆಗೆ ಹೆಸರಾದ, ಲಕ್ಷಾಂತರ ಜನರ ಬದುಕಿನ ಆಶಾಕಿರಣ, ದೇಶದ ಯಾವುದೇ ಮೂಲೆಯಲ್ಲೂ ಸಂಕಷ್ಟ ಎದುರಾಗುತ್ತಿದ್ದಂತೆ ಕೂಡಲೇ ನೆರವಿಗೆ ಬರುವ ಅಮ್ಮ ಎಂದರೆ ಅದು ನಮ್ಮ ಸುಧಮ್ಮ! ಅವರೇ ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ.

    ಡಾ.ಸುಧಾಮೂರ್ತಿ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ಇದೀಗ ಸದ್ಯದಲ್ಲೇ ಮತ್ತೊಂದು ಗೌರವ ಅವರ ಮುಡಿಗೇರಲಿದೆ. ಮೈಸೂರು ವಿಶ್ವವಿದ್ಯಾಲಯಕ್ಕೀಗ 100ನೇ ವಾರ್ಷಿಕ ಘಟಿಕೋತ್ಸವದ ಸಂಭ್ರಮ. ಈ ಸುಸಂದರ್ಭದಲ್ಲಿ ಮೈಸೂರು ವಿವಿಯು ಡಾ.ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್​ ಪದವಿ ನೀಡಿ ಗೌರವಿಸುತ್ತಿದೆ.

    ಅ.19ರ ಬೆಳಗ್ಗೆ 10.30ಕ್ಕೆ ಕ್ರಾಫರ್ಡ್​ ಭವನದಲ್ಲಿ ಮೈಸೂರು ವಿವಿ ಘಟಿಕೋತ್ಸವ ನಡೆಯಲಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್​ ಮಾಧ್ಯಮದ ಮೂಲಕ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ವಿ.ಆರ್​. ವಾಲಾ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್​.ಅಶ್ವತ್ಥನಾರಾಯಣ್​ ಪಾಲ್ಗೊಳ್ಳಲಿದ್ದಾರೆ ಎಂದು ಕುಲಪತಿ ಪ್ರೊ.ಜಿ. ಹೇಮಂತಕುಮಾರ್​ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

    ಸುಧಮ್ಮರ ಮುಡಿಗೇರಲಿದೆ ಮತ್ತೊಂದು ಗೌರವಗೌರವ ಡಾಕ್ಟರೇಟ್​ ಪದವಿಗೆ ಇನ್ಫೋಸಿಸ್​ ಫೌಂಡೇಷನ್​ ಅಧ್ಯಕ್ಷೆ ಡಾ.ಸುಧಾಮೂರ್ತಿ ಭಾಜನರಾಗಿದ್ದು, ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು. ಈ ವಿಷಯವಾಗಿ ರಚಿಸಲಾಗಿದ್ದ ಸಮಿತಿಯು ಮೂವರ ಹೆಸರನ್ನು ಅಂತಿಮಗೊಳಿಸಿ ರಾಜ್ಯಭವನಕ್ಕೆ ಕಳುಹಿಸಿಕೊಟ್ಟಿತ್ತು. ಇದನ್ನು ಪರಿಶೀಲನೆ ಮಾಡಿದ ರಾಜ್ಯಪಾಲರು ಗೌರವ ಡಾಕ್ಟರೇಟ್​ ಪದವಿಗೆ ಸುಧಾಮೂರ್ತಿ ಹೆಸರನ್ನು ಮಾತ್ರ ಅನುಮೋದಿಸಿದ್ದಾರೆ. ಉಳಿದ ಇಬ್ಬರ ಹೆಸರನ್ನು ತಿರಸ್ಕರಿಸಿದೆ ಎಂದು ಕುಲಪತಿ ತಿಳಿಸಿದರು.

    ಕರೊನಾ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಯ್ದಿರಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಘಟಿಕೋತ್ಸವದಲ್ಲಿ ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು, ಸಂಶೋಧಕರು, ಸಾರ್ವಜನಿಕರು ನೇರವಾಗಿ ಭಾಗವಹಿಸಲು ನಿರ್ಬಂಧಿಸಲಾಗಿದೆ. ಮೈವಿವಿಯ ವೆಬ್​ಸೈಟ್​ https://uni-mysore.ac.in/ , ಫೇಸ್​ಬುಕ್​ ಮತ್ತು ಯುಟ್ಯೂಬ್​ ಮೂಲಕ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

    ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಈ ಬಾರಿಯೂ ಬಾಯಲಕಿಯರೇ ಮೇಲುಗೈ

    VIDEO| ಜೂ.ಚಿರು ಸ್ವಾಗತಕ್ಕೆ ಸರ್ಜಾ ಫ್ಯಾಮಿಲಿಯಿಂದ ಸ್ಪೆಷಲ್​ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts