More

    ಎಲ್ಲ ಕಾಲಕ್ಕೂ ಪ್ರಜಾಪ್ರಭುತ್ವಕ್ಕೇ ಶಕ್ತಿ: ಯದುವೀರ ಒಡೆಯರ್

    ಶಿವಮೊಗ್ಗ: ಮೈಸೂರು ಆಸ್ಥಾನಲ್ಲಿದ್ದರೂ ನಾನು ಕೂಡ ಸಾಮಾನ್ಯರಲ್ಲಿ ಸಾಮಾನ್ಯ. ಎಲ್ಲ ಸಮಯಕ್ಕೂ ಪ್ರಜಾಪ್ರಭುತ್ವ ಶಕ್ತಿ ನೀಡುತ್ತದೆ. ಅದೇ ಆದರ್ಶದಿಂದ ಕೆಲಸ ಮಾಡುತ್ತಿದ್ದೇನೆ ಎಂದು ಮೈಸೂರು ಮಹಾ ಸಂಸ್ಥಾನದ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
    ಡಿವಿಎಸ್ ಆವರಣದಲ್ಲಿ ಬುಧವಾರ ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯ ಕೆಲಸ ಮಾಡಬೇಕು. ನಮ್ಮ ರೀತಿ-ನೀತಿ ಜನಪರವಾಗಿರಬೇಕು. ಹಲವು ದಶಕಗಳ ಹಿಂದೆಯೇ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ವರ್ಗವಾಗಿದ್ದು ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ನಮ್ಮ ಧರ್ಮವಾಗಿದೆ ಎಂದರು.
    ದಸರಾ ಸಂದರ್ಭದಲ್ಲಿ ಮಾತ್ರ ಸಾಂಕೇತಿಕವಾಗಿ ರಾಜಪ್ರಭುತ್ವದ ಕಾರ್ಯಗಳು ಅರಮನೆಯಲ್ಲಿ ನಡೆಯುತ್ತವೆ. ಅವು ನಿಜವಾದ ವಿಧಿ-ವಿಧಾನಗಳೇ ಆಗಿವೆ. ದಸರಾ ಸಂದರ್ಭದಲ್ಲಿ ಖಾಸಗಿ ದರ್ಬಾರ್‌ನ ಮಹತ್ವವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಖಾಸಗಿ ದರ್ಬಾರ್ ಎಂಬುದು ದಸರಾ ವೇಳೆ ನಡೆಯುವ ಒಂದು ವಿಧಿಯಾಗಿದೆ. ಅರಮನೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಪೂಜಾ ಕೈಂಕಾರ್ಯಳು ನಡೆಯುತ್ತವೆ. ಅಲ್ಲಿ ರಾಜತ್ವಕ್ಕೆ ಮರ್ಯಾದೆ ನೀಡಲಾಗುತ್ತದೆ. ಅದೇ ಖಾಸಗಿ ದರ್ಬಾರ್ ಎನಿಸಿಕೊಂಡಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts