More

    ಮೈಸೂರು ಮೇಯರ್ ಚುನಾವಣೆ : ಶಾಸಕ ತನ್ವೀರ್ ಸೇಠ್​ಗೆ ಡಿಕೆಶಿ ಬುಲಾವ್

    ಬೆಂಗಳೂರು: ಮೈಸೂರು ನಗರಪಾಲಿಕೆ ಮೇಯರ್ ಚುನಾವಣೆಯ ವಿಚಾರವಾಗಿ ಶಾಸಕ ತನ್ವೀರ್ ಸೇಠ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರ ಬುಲಾವ್ ಬಂದಿದೆ. ಮೈಸೂರು ಮೇಯರ್ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್​ ಜೊತೆಗೆ ಮೈತ್ರಿ ನಡೆಸಿದ ಬಗ್ಗೆ ಮತ್ತು ಮೇಯರ್ ಸ್ಥಾನದ ಬದಲು ಉಪಮೇಯರ್ ಸ್ಥಾನ ಕಾಂಗ್ರೆಸ್ ಪಾಲಾಗಿದ್ದರ ಬಗ್ಗೆ ಡಿಕೆಶಿ ವಿವರಣೆ ಕೇಳಿದ್ದಾರೆ ಎನ್ನಲಾಗಿದೆ.

    ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ನಿನ್ನೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಮನೆಯಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್​ಕುಮಾರ್ ಮತ್ತು ಮಾಜಿ ಸಚಿವ ಕೃಷ್ಣ ಬೈರೇಗೌಡ ಡಿಕೆಶಿಯನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಆಗ ಶಾಸಕ ತನ್ವೀರ್ ಸೇಠ್​ ಮಾತಿನ ಮೇಲೆ ತಾವು ನಡೆದುಕೊಂಡಿದ್ದಾಗಿ ಡಿಕೆಶಿ ಹೇಳಿದ್ದು, ಈ ಬಗ್ಗೆ ಶಾಸಕ ಸೇಠ್​ಗೆ ಕೆಪಿಸಿಸಿಯಿಂದ ನೋಟೀಸ್ ಕೊಡುವಂತೆ ಸಿದ್ದರಾಮಯ್ಯ ಮತ್ತು ರಮೇಶ್​ಕುಮಾರ್ ಒತ್ತಾಯಿಸಿದ್ದರು ಎನ್ನಲಾಗಿದೆ.

    ಈ ಹಿನ್ನೆಲೆಯಲ್ಲಿ ಡಿಕೆಶಿ, ಮೇಯರ್ ಚುನಾವಣೆಯ ಸಂಬಂಧ ಸಮಗ್ರ ವಿವರಣೆ ಕೊಡಲು ಬೆಂಗಳೂರಿಗೆ ಬರುವಂತೆ ಶಾಸಕ ತನ್ವೀರ್ ಸೇಠ್​ಗೆ ತಿಳಿಸಿದ್ದಾರೆ. ಡಿಕೆಶಿ ಅವರು ನಾಳೆ ನಾಡಿದ್ದು ಮಂಗಳೂರು ಮತ್ತು ಉಡುಪಿ ಪ್ರವಾಸಕ್ಕೆ ಹೋಗಲಿರುವ ಕಾರಣ, ತನ್ವೀರ್ ಸೇಠ್ ಸೋಮವಾರ ಬಂದು ವಿವರಣೆ ಕೊಡಲಿದ್ದಾರೆ ಎನ್ನಲಾಗಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮದುವೆ ಮಂಟಪವಾಗಿ ಬದಲಾದ ಜೈಲು! ವಿಚಾರಣಾಧೀನ ಖೈದಿಯ ವಧು ಯಾರು ಗೊತ್ತೆ?

    ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts