More

    ಮುಂದುವರಿದ ಸಾವಿನ ಸರಣಿ

    ಕೋವಿಡ್‌ಗೆ ನಾಲ್ವರು ಬಲಿ. 702ಕ್ಕೇರಿದ ಸೋಂಕಿತರ ಸಂಖ್ಯೆ

    ಮೈಸೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಮತ್ತೆ ನಾಲ್ವರು ಮೃತಪಟ್ಟಿದ್ದು, ಹೊಸದಾಗಿ 51 ಜನರಿಗೆ ಸೋಂಕು ತಗುಲಿದೆ.
    ಕ್ಷಿಪ್ರಗತಿಯಲ್ಲಿ ಕರೊನಾ ಸೋಂಕು ಹರಡುತ್ತಿದ್ದು, ಶುಕ್ರವಾರದ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 702ಕ್ಕೆ ಏರಿಕೆಯಾಗಿದೆ. ವೈರಾಣು ಪ್ರಸರಣ ತ್ವರಿತವಾಗುತ್ತಿದ್ದಂತೆ ಸಾವಿನ ಸರಣಿಯೂ ಮುಂದುವರಿದ್ದು, ಈವರೆಗೆ 20 ಜನರನ್ನು ಕೋವಿಡ್ ಬಲಿ ಪಡೆದಿದೆ.
    ಮೃತರೆಲ್ಲರೂ ತೀವ್ರ ಉಸಿರಾಟ ಸಮಸ್ಯೆಯಿಂದ (ಎಸ್‌ಎಆರ್‌ಐ) ಬಳುತ್ತಿದ್ದರು. 83 ಮತ್ತು 72 ವರ್ಷದ ವೃದ್ಧರು, 65 ವರ್ಷದ ವೃದ್ಧೆ, 45 ವರ್ಷದ ವ್ಯಕ್ತಿ ಕರೊನಾದಿಂದ ಮೃತಪಟ್ಟವರು. ಐದು ದಿನದ ಹಿಂದಷ್ಟೇ ನಗರದ ಕಾರಾಗೃಹದಲ್ಲಿ ಕರೊನಾ ಪತ್ತೆಯಾಗಿದ್ದ ಸುಪಾರಿ ಕೊಲೆ ಪ್ರಕರಣದ ಆರೋಪಿಯ ಸಂಪರ್ಕದಲ್ಲಿದ್ದ ನಾಲ್ವರು ವಿಚಾರಣಾಧೀನ ಕೈದಿಗಳಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಇದು ಕಾರಾಗೃಹದ ಕೈದಿಗಳಲ್ಲೂ ಆತಂಕ ಮೂಡಿಸಿದೆ.
    ಕ್ವಾರಂಟೈನ್‌ನಲ್ಲಿದ್ದ ಪಾಲಿಕೆಯ ಇಬ್ಬರು ಆರೋಗ್ಯ ಸಿಬ್ಬಂದಿ, ತರಬೇತಿಯಲ್ಲಿದ್ದ ಒಬ್ಬರು ಡಿವೈಎಸ್‌ಪಿ, ಶಾಸಕ ಎಸ್.ಎ.ರಾಮದಾಸ್ ಅವರ ಇಬ್ಬರು ಆಪ್ತ ಸಹಾಯಕರು, ನಾಲ್ವರು ಪೊಲೀಸ್ ಸಿಬ್ಬಂದಿಗೂ ರೋಗ ತಗುಲಿದೆ. ಎಚ್.ಡಿ.ಕೋಟೆಯ ಸರಗೂರು ಸಮೀಪದ ಪುರದಕಟ್ಟೆ ಗ್ರಾಮದ ಒಂದೇ ಮನೆಯ ನಾಲ್ವರು, ಮೈಸೂರಿನ ಅಜೀಜ್‌ಸೇಠ್‌ನಗರ ಬೀಡಿ ಕಾಲನಿಯ ಒಂದೇ ಮನೆಯ ನಾಲ್ವರಲ್ಲಿ ಸೋಂಕು ಇರುವುದು ಖಚಿತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts