ಐಬಿ ಅಧಿಕಾರಿ ಕುಲಕರ್ಣಿ ಹತ್ಯೆ ಆರೋಪಿ ಮನೆ ಕೆಡವಲು ಮೈಸೂರು ನಗರ ಪಾಲಿಕೆ ಸಿದ್ಧತೆ

mcc
Published on

ಮೈಸೂರು: ಶಾರದಾದೇವಿ ನಗರದಲ್ಲಿ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಕುಲಕರ್ಣಿ ಅವರ ಮನೆಯ ಪಕ್ಕದ ನಿವೇಶನದಲ್ಲಿ ಸೆಟ್‌ಬ್ಯಾಕ್ ಬಿಡದೆ ನಿರ್ಮಾಣ ಮಾಡಿರುವ ಮನೆಯನ್ನು ಹತ್ತು ದಿನಗಳ ಒಳಗೆ ಮನೆ ಮಾಲೀಕರು ತೆರವುಗೊಳಿಸದೆ ಇದ್ದರೆ ನಗರ ಪಾಲಿಕೆಯಿಂದ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.

ಸೆಟ್‌ಬ್ಯಾಕ್ ಬಿಡದೆ ಮನೆ ನಿರ್ಮಾಣ ಮಾಡುತ್ತಿರುವ ಕುರಿತು ಕುಲಕರ್ಣಿ ಅವರು ನೀಡಿದ ದೂರಿನ ಮೇರೆಗೆ ನಗರ ಪಾಲಿಕೆಯಿಂದ ಮನೆ ಮಾಲೀಕರಿಗೆ ಎರಡು ನೋಟಿಸ್‌ಗಳನ್ನು ಜಾರಿ ಮಾಡಲಾಗಿತ್ತು. ಮನೆ ಮಾಲೀಕರು ಅವರಾಗಿಯೇ ಮನೆಯನ್ನು ತೆರವುಗೊಳಿಸದೆ ಇದ್ದರೆ ಪಾಲಿಕೆಯಿಂದ ತೆರವುಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ವಸೂಲಾತಿ ಮಾಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net