More

    ಏಷ್ಯನ್ ಪೇಂಟ್ಸ್ ಘಟಕಕ್ಕೆ ಭೂಮಿ ಮಾರಾಟ ಮಾಡಿದವರಿಗೆ ಉದ್ಯೋಗ

    ಮೈಸೂರು: ಸಾಮಾಜಿಕ ಜವಾಬ್ದಾರಿಯುತ ಕಂಪನಿ ಏಷ್ಯನ್ ಪೇಂಟ್ಸ್. ಸದಾ ತನ್ನ ಪಾಲುದಾರರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಕಂಪನಿಯು ತನ್ನ ಮೈಸೂರು ಪೇಂಟ್ ಘಟಕದ ಎಲ್ಲ ವಿವಾದಗಳಿಗೂ ತೆರೆ ಎಳೆಯುವ ನಿಟ್ಟಿನಲ್ಲಿ ಭೂಮಿ ಮಾರಾಟ ಮಾಡಿದವರಿಗೆ ಅದೇ ಭೂಮಿಯಲ್ಲಿ ಪರ್ಯಾಯ ಉತ್ಪಾದನಾ ಘಟಕ ಪ್ರಾರಂಭಿಸಲು ಯೋಜಿಸಿದೆ. ಆ ಮೂಲಕ ಪ್ರಾರಂಭದಲ್ಲಿ ಒಪ್ಪಿಕೊಂಡ ನಿಯಮ ಹಾಗೂ ನಿಬಂಧನೆಗಳ ಆಚೆಗೂ ಕಾರ್ಯ ನಿರ್ವಹಿಸುತ್ತಿದೆ.

    ಕಂಪನಿಯು ಕರ್ನಾಟಕ ಸರ್ಕಾರದೊಂದಿಗೆ ಸತತ ಮಾತುಕತೆ ನಡೆಸಿದ್ದು, ಭೂ ಮಾರಾಟಗಾರರ ಉದ್ಯೋಗ ಕುರಿತು ಹೆಚ್ಚುವರಿ ಪ್ರಸ್ತಾವನೆ ಒದಗಿಸಿದೆ. ಇದನ್ನು ಸರ್ಕಾರವೂ ಒಪ್ಪಿಕೊಂಡಿದೆ ಮತ್ತು ಭೂ ಮಾರಾಟಗಾರರು ಇದೇ ಪ್ರದೇಶದಲ್ಲಿ ಪ್ರತ್ಯೇಕ ಘಟಕದಲ್ಲಿ ಉದ್ಯೋಗ ಪಡೆಯಲೂ ಒಪ್ಪಿದ್ದಾರೆ. ಉದ್ಯೋಗಾವಕಾಶವು ಭೂ ಮಾರಾಟಗಾರರ ಕೌಶಲ ಅರ್ಹತೆಯನ್ನು ಅವಲಂಬಿಸಿರುತ್ತದೆ. ಈ ಮೇಲ್ಕಂಡ ಪ್ರಸ್ತಾವನೆಗಳೊಂದಿಗೆ ಏಷ್ಯನ್ ಪೇಂಟ್ಸ್ ಅರ್ಹ ಭೂ ಮಾಲೀಕರಿಗೆ ಸೂಕ್ತ ಸ್ಟೈಪೆಂಡ್‌ನೊಂದಿಗೆ 6 ತಿಂಗಳ ಅವಧಿಗೆ ತರಬೇತಿ ನೀಡಲಿದೆ. ಅದರಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಏಷ್ಯನ್ ಪೇಂಟ್ಸ್‌ಗೆ ಅರ್ಹ ಭೂ ಮಾರಾಟಗಾರರ ಅಂತಿಮ ಪಟ್ಟಿ ನೀಡಲಿದೆ. ಇದನ್ನೂ ಓದಿರಿ ಯಡಿಯೂರಪ್ಪನ ಬಂಡವಾಳ ನನ್ನ ಕೈಯಲ್ಲಿದೆ, ನನ್ನ ತಂಟೆಗೆ ಬಂದರೆ ಹುಷಾರ್​! ಸಿಎಂಗೆ ಎಚ್​ಡಿಕೆ ವಾರ್ನಿಂಗ್​

    ಏಷ್ಯನ್ ಪೇಂಟ್ಸ್ ಈಗಾಗಲೇ ಸರ್ಕಾರದ ಪ್ರಾಧಿಕಾರಗಳೊಂದಿಗೆ ಹಿಂದೆ ಹೆಚ್ಚುವರಿ 14 ಕೋಟಿ ರೂ. ವೆಚ್ಚದೊಂದಿಗೆ ಭೂ ಮಾಲೀಕರಿಗೆ ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯ ಪ್ರಾರಂಭಿಸಿದೆ. ಆರೋಗ್ಯ, ನೀರು, ನೈರ್ಮಲ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹಲವಾರು ಎನ್‌ಜಿಒಗಳೊಂದಿಗೆ ಕೆಲಸ ಮಾಡುತ್ತಿರುವ ಈ ಕಂಪನಿಯು ಆರ್ಥಿಕ ಯಶಸ್ಸಿನ ಅಗತ್ಯ ಅಳವಡಿಕೆ ಎಂದರೆ ಸದೃಢ ಸಮುದಾಯ ಎಂದು ಬಲವಾಗಿ ನಂಬಿದೆ.

    ಕಳೆದ 5 ವರ್ಷದಲ್ಲಿ ಏಷ್ಯನ್ ಪೇಂಟ್ಸ್, ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಒಟ್ಟು 2,400 ಕೋಟಿ ರೂ. ಹೂಡಿಕೆಯೊಂದಿಗೆ 2 ಬೃಹತ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದೆ. ಈ ಎರಡೂ ಘಟಕ ವಾರ್ಷಿಕ 3,00,000 ಕೆಎಲ್ ಅನುಷ್ಠಾನಗೊಳಿಸಿದ ಸಾಮರ್ಥ್ಯ ಹೊಂದಿದೆ ಮತ್ತು ಒಟ್ಟಾಗಿ 1200 ಉದ್ಯೋಗಿಗಳನ್ನು ಹೊಂದಿವೆ. ಈ ಘಟಕಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ‘ಸ್ಮಾರ್ಟ್ ಫ್ಯಾಕ್ಟರಿ’ ಪರಿಕಲ್ಪನೆಯೊಂದಿಗೆ ನಿರ್ಮಿಸಲಾಗಿದೆ. ಈ ಘಟಕಗಳು ಗರಿಷ್ಠ ಹಸಿರು ಶಕ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದು ಗಾಳಿಯ ಹಾಗೂ ತಾರಸಿಯ ಸೌರಶಕ್ತಿ ಒಳಗೊಂಡಿವೆ ಮತ್ತು ಐಜಿಬಿಸಿ(ಇಂಡಿಯನ್ ಗ್ರೀನ್ ಬಿಜಿನೆಸ್ ಕೌನ್ಸಿಲ್) ಪ್ಲಾಟಿನಂ ಪ್ರಮಾಣೀಕೃತ ಮಾನ್ಯತೆಯನ್ನು ತನ್ನ ಕಟ್ಟಡಗಳಿಗೆ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ)ಯಿಂದ ಪಡೆದಿದೆ.

    ಕುಮಾರಸ್ವಾಮಿ ನನ್ನ ಸ್ನೇಹಿತ..! ಸಚಿವರಾದ ಬೆನ್ನಲ್ಲೇ ಅಚ್ಚರಿ ಹೇಳಿಕೆ ಕೊಟ್ಟ ಯೋಗೇಶ್ವರ್​

    ಯಡಿಯೂರಪ್ಪನ ಬಂಡವಾಳ ನನ್ನ ಕೈಯಲ್ಲಿದೆ, ನನ್ನ ತಂಟೆಗೆ ಬಂದರೆ ಹುಷಾರ್​! ಸಿಎಂಗೆ ಎಚ್​ಡಿಕೆ ವಾರ್ನಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts