More

    ಮೈಸೂರಿಂದ ಪೂರ್ಣ ಪ್ರಮಾಣದ ವಿಮಾನಯಾನ

    ಮೈಸೂರು: ಮೈಸೂರು ವಿಮಾನ ನಿಲ್ದಾಣದಿಂದ ಪೂರ್ಣ ಪ್ರಮಾಣದಲ್ಲಿ ವಿಮಾನಯಾನ ಸೇವೆ ಗುರುವಾರದಿಂದ ಪುನರಾರಂಭಗೊಂಡಿದ್ದು, ಅಂತರ ರಾಜ್ಯಗಳ ನಡುವೆ ಕೂಡ ವಿಮಾನ ಸಂಚಾರ ಶುರುವಾಗಿದೆ.

    ಅಂತರ ಜಿಲ್ಲೆಗಳ ನಡುವೆ ವಿಮಾನಯಾನ ಸೇವೆ ಕಳೆದ ಮೇ 25ರಿಂದ ಆರಂಭಗೊಂಡಿದ್ದು, ಮೈಸೂರಿನಿಂದ ಬೆಂಗಳೂರು, ಬೆಳಗಾವಿಗೆ ಮಾತ್ರ ಸಂಚಾರ ನಡೆಸುತ್ತಿದ್ದವು. ಈಗ ಇಲ್ಲಿಂದ ಹೈದ್ರಾಬಾದ್, ಕೇರಳದ ಕೊಚ್ಚಿ, ಗೋವಾಗೆ ಕೂಡ ಈ ಹಿಂದಿನಂತೆ ವಿಮಾನ ಸಂಪರ್ಕಕ್ಕೆ ಚಾಲನೆ ದೊರೆತಿದೆ. ಅಲಯನ್ಸ್ ಏರ್ ಸಂಸ್ಥೆ ಈ ಸೇವೆ ನೀಡುತ್ತಿದೆ. ಲಾಕ್‌ಡೌನ್‌ನಿಂದಾಗಿ 2 ತಿಂಗಳಿಂದ ಈ ಸೇವೆ ಬಂದ್ ಆಗಿತ್ತು.

    ಬೆಳಗ್ಗೆ 6.30ಕ್ಕೆ ಹೈದ್ರಾಬಾದ್‌ನಿಂದ ಹೊರಡುವ ವಿಮಾನವು, ಮೈಸೂರಿಗೆ 8.15ಗಂಟೆಗೆ ಬರಲಿದೆ. ಇಲ್ಲಿಂದ 8.55ಗಂಟೆಗೆ ಹೊರಡುವ ವಿಮಾನವು ಕೊಚ್ಚಿಗೆ 10.25ಗಂಟೆಗೆ ತಲುಪಲಿದೆ. ಅಲ್ಲಿಂದ 11.05 ಗಂಟೆಗೆ ಹೊರಟ ವಿಮಾನವು, ಮೈಸೂರಿಗೆ ಮಧ್ಯಾಹ್ನ 12.35ಕ್ಕೆ ಬರಲಿದೆ. ಇಲ್ಲಿಂದ 1.15ಕ್ಕೆ ಹೊರಡುವ ವಿಮಾನವು ಹೈದ್ರಾಬಾದ್‌ಗೆ 3ಗಂಟೆಗೆ ತಲುಪಲಿದೆ.

    2.20ಗಂಟೆಗೆ ಬೆಂಗಳೂರಿನಿಂದ ಬರುವ ವಿಮಾನ ಇಲ್ಲಿಗೆ 3.15ಕ್ಕೆ ಬರಲಿದೆ. ಇಲ್ಲಿಂದ 3.55ಗಂಟೆಗೆ ಹೊರಡುವ ವಿಮಾನವು ಗೋವಾಕ್ಕೆ ಸಂಜೆ 6ಕ್ಕೆ ತಲುಪಲಿದೆ. ಅಂತೆಯೇ ಅಲ್ಲಿಂದ 7ಗಂಟೆ ಹೊರಡುವ ವಿಮಾನವು ಇಲ್ಲಿಗೆ ರಾತ್ರಿ 8.30ಕ್ಕೆ ಬರಲಿದೆ. ದಿನದ ಕೊನೆ ವಿಮಾನವು ಇಲ್ಲಿಂದ ರಾತ್ರಿ 8.55ಕ್ಕೆ ಹೊರಟು, ಬೆಂಗಳೂರಿಗೆ 9.45ಕ್ಕೆ ತಲುಪಲಿದೆ.

    ಅಂತೆಯೇ ಮೈಸೂರು-ಬೆಳಗಾವಿ ನಡುವೆ ಟ್ರೂಜೆಟ್ ವಿಮಾನ ಪ್ರಯಾಣ ಮಾಡಲಿದ್ದು, ಬೆಳಗಾವಿಯಿಂದ ಮಧ್ಯಾಹ್ನ 3ಕ್ಕೆ ಹೊರಟು, ಮೈಸೂರಿಗೆ 6.20ಕ್ಕೆ ಆಗಮಿಸಲಿದೆ. ಇಲ್ಲಿಂದ 6.55ಕ್ಕೆ ಹೊರಟು, ಬೆಳಗಾವಿಗೆ ರಾತ್ರಿ 8.15ಕ್ಕೆ ತಲುಪಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts