More

  ನನ್ನ ಗೆಲುವಿಗೆ ಅಭಿವೃದ್ಧಿ ಕೆಲಸಗಳೆ ಕಾರಣ

  ಚಿಕ್ಕೋಡಿ: ನಿಪ್ಪಾಣಿ ಕ್ಷೇತ್ರದ ಮನೆ ಮಗಳಾದ ನನಗೆ ಕ್ಷೇತ್ರದ ಮತದಾರರು ಅಮೂಲ್ಯವಾದ ಮತ ನೀಡುವ ಮೂಲಕ ಮೂರನೇ ಬಾರಿ ಶಾಸಕಿಯಾಗಿ ಆಯ್ಕೆ ಮಾಡಿದ್ದಾರೆ. ನನ್ನ ಹ್ಯಾಟ್ರಿಕ್ ಸಾಧನೆಗೆ ನಾನು ಕೈಗೊಂಡಿರುವ ಅಭಿವೃದ್ಧಿ ಕೆಲಸಗಳೆ ಕಾರಣ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

  ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಸೋಮವಾರ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಅಧಿಕಾರದ ಅವಧಿಯಲ್ಲಿ ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದಾರೆ ಎಂದರು.

  ನಿಪ್ಪಾಣಿ ಕ್ಷೇತ್ರವನ್ನು ಸುಮಾರು 2 ಸಾವಿರ ಕೋಟಿ ರೂ. ಅನುದಾನದ ತಂದು ಅಭಿವೃದ್ಧಿಗೊಳಿಸಿದ್ದೇನೆ. ಜತೆಗೆ ಮುಜರಾಯಿ ಸಚಿವೆಯಾಗಿ ನೆರೆಯ ಮಹಾರಾಷ್ಟ್ರದ ಗುಡ್ಡಾಪುರ ದಾನಮ್ಮ, ಸವದತ್ತಿಯ ಯಲ್ಲಮ್ಮ ಸೇರಿ ಹಲವು ದೇವಸ್ಥಾನಗಳನ್ನು ಅಭಿವೃದ್ಧಿಗೊಳಿಸಿದ್ದೇನೆ ಎಂದರು.

  ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಿರೋಳ ದತ್ತ ಸಹಕಾರಿ ಸಕ್ಕರೆ ಕಾರ್ಖಾಣೆ ಚೇರ್ಮನ್ ನಿರ್ದೇಶಕರಾದ ಬಸವರಾಜ ತೇಲಿ, ಶಿವಗೌಡ ಪಾಟೀಲ, ಸದಲಗಾ ಪಪಂ ಸದಸ್ಯರು ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts