ಬ್ರಾಸಿಲಿಯಾ: ದಾಂಪತ್ಯ ದ್ರೋಹದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಹಿಳೆಯೊಬ್ಬಳು ತನ್ನ ಪತಿ ಅಥವಾ ತಾಯಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದಿದ್ದು, ತಾನು ಆಸ್ಪತ್ರೆಯ ಬೆಡ್ನಲ್ಲಿ ಸಾವು ಬದುಕಿನ ನಡುವೆ ಹೋರಾಡುವಾಗ ನಡೆದ ಜೀವನ ಕರಾಳ ಘಟನೆಯನ್ನು ಮೆಲುಕು ಹಾಕಿದ್ದಾರೆ.
ಅನಾರೋಗ್ಯದಿಂದಾಗಿ ಬ್ರೆಜಿಲ್ನ ಪೆರ್ನಂಬುಕೊ ಮೂಲದ ಕಾಮ್ಯಲ್ಲಾ ಡಿ ಮೆಲೊ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಜೀವನ್ಮರಣ ಹೋರಾಟ ನಡೆಸಿ 78 ದಿನಗಳ ಬಳಿಕ ಡಿಸ್ಚಾರ್ಜ್ ಆದರು. ಆದರೆ, ತಾನು ಜೀವನದಲ್ಲಿ ಹೆಚ್ಚಾಗಿ ನಂಬಿದ್ದ ಪತಿ ಮತ್ತು ತಾಯಿಯ ಮೋಸದ ಬಗ್ಗೆ ತಿಳಿದಾಗ ಆಕೆಯ ಮನಸ್ಸು ನುಚ್ಚು ನೂರಾಗಿತ್ತು.
ಅಷ್ಟಕ್ಕೂ ಮಹಿಳೆಯ ಜೀವನದಲ್ಲಿ ನಡೆದಿರುವ ಆಘಾತಕಾರಿ ಘಟನೆಯೆಂದರೆ ತನ್ನ ಪತಿ ಮತ್ತು ತಾಯಿಯ ನಡುವಿನ ಅಕ್ರಮ ಸಂಬಂಧ ಬಯಲಾಗಿದ್ದು, ಈ ಬಗ್ಗೆ ಸ್ವತಃ ಕಾಮ್ಯಲ್ಲಾ ಅವರು ಬ್ರೆಜಿಲಿಯನ್ ನ್ಯೂಸ್ ಕ್ಯಾಂಡಿಡ್ ಮಾಧ್ಯಮ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ನನ್ನ ತಾಯಿ ನನಗಿಂತ 20 ವರ್ಷ ಹಿರಿಯಳು. ನನ್ನ ಉಡುಪುಗಳು ಸಹ ನನ್ನ ತಾಯಿಗೆ ಸರಿಯಾಗಿ ಹೊಂದುತ್ತವೆ. ಅವರು ಮಾಡುವ ಊಟವು ಸಹ ಉತ್ತಮವಾದದ್ದು. ಆದರೆ, ನಾನು ಮಾಡಿದ ಯಾವುದು ಸಹ ಉತ್ತಮವಾಗಿಲ್ಲ. ನಾನು 25ನೇ ವಯಸ್ಸಿನಲ್ಲಿ ನನಗಿಂತ 10 ವರ್ಷ ಹಿರಿಯ ವ್ಯಕ್ತಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದೆ. 2013 ಆಗಸ್ಟ್ ತಿಂಗಳಲ್ಲಿ ಮದುವೆ ಸಹ ಆದೆವು. ನಮಗೆ ಆರು ವರ್ಷದ ಮಗನು ಸಹ ಇದ್ದಾನೆ ಎಂದು ಕಾಮ್ಯಲ್ಲಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಗ್ಯಾಂಗ್ರೇಪ್ ಪ್ರಕರಣ: ಯೋಗಿ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್
ಮುಂದುವರಿದು ಮಾತನಾಡಿ 2017ರ ಕೊನೆಯಲ್ಲಿ ನಾನು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾದೆ. ತೂಕವನ್ನು ಕಳೆದುಕೊಳ್ಳದೆ ನನ್ನ ಹಾರ್ಮೋನ್ ಪ್ರಮಾಣವನ್ನು ನೋಡಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಚಿಕಿತ್ಸೆಯ ಬಳಿಕ ಪಾರ್ಶ್ವವಾಯುಗೆ ಸಿಲುಕಿದೆ. ಹೀಗಾಗಿ ಮತ್ತೆ ಆಸ್ಪತ್ರೆಗೆ ದಾಖಲಾದೆ. ಈ ಸಮಯದಲ್ಲಿ ನನ್ನ ತಾಯಿ ನನ್ನ ಪತಿಗೆ ಹಾಗೂ ಮಗನಿಗೆ ಸಹಾಯ ಮಾಡವುದಾಗಿ ಮನೆಗೆ ಹೋದರು. ಈ ವೇಳೆ ನನ್ನ ಮಗನಿಗೆ 4 ವರ್ಷ ವಯಸ್ಸಾಗಿತ್ತು. ನನ್ನ ತಂದೆ ಪೆರ್ನಂಬುಕೊದಲ್ಲಿನ ನಿವಾಸದಲ್ಲಿ ನನ್ನ ತಮ್ಮನೊಂದಿಗೆ ಇದ್ದರು. ಆಸ್ಪತ್ರೆಯಲ್ಲಿದ್ದಾಗ ನನ್ನ ಪತಿ ಎರಡು ಬಾರಿ ಮಾತ್ರ ಭೇಟಿ ನೀಡಿದ್ದರು. ಆದರೆ, ನನ್ನ ತಾಯಿ ಒಮ್ಮೆಯು ಭೇಟಿ ನೀಡಿ ವಿಚಾರಿಸಿರಲಿಲ್ಲ. ಆಸ್ಪತ್ರೆಯಲ್ಲಿ ಸುಮಾರು 4 ತಿಂಗಳು ಕಳೆದ ಬಳಿಕ 2018, ಮಾರ್ಚ್ 22ರಂದು ನನ್ನ ತಂದೆ ಆಸ್ಪತ್ರೆಗೆ ಬಂದು ನನ್ನನ್ನು ಕರೆದೊಯ್ದರು.
ಮೊದಲೇ ನಾನು ದೈಹಿಕವಾಗಿ ತುಂಬಾ ನೋವಿನಲ್ಲಿದ್ದೆ. ಇದೇ ವೇಳೆ ನನ್ನ ತಂದೆ ಒಂದು ನೋವಿನ ವಿಚಾರ ಹೇಳಿದರು. ನನ್ನ ತಾಯಿ ಮತ್ತು ನನ್ನ ಪತಿಯ ನಡುವೆ ಅಕ್ರಮ ಸಂಬಂಧವಿದೆ ಎಂದರು. ನನಗೆ ಆಘಾತವಾಯಿತು. ಮೊದಲೇ ದೈಹಿಕವಾಗಿ ನೋವಿನಲ್ಲಿದ್ದ ನನಗೆ ಮಾನಸಿಕವಾಗಿಯೂ ಘಾಸಿಯಾಯಿತು. ನನ್ನ ತಂದೆಯ ಮಾತು ನನ್ನ ಎದೆಗೆ ಇರಿದಂತಾಯಿತು. ತುಂಬಾ ಅಸ್ವಸ್ಥಗೊಂಡಿದ್ದ ನಾನು ನನ್ನ ತಾಯಿಯನ್ನು ಕರೆದು ಕೇಳಿದೆ. ಅದಕ್ಕೆ ಉತ್ತರಿಸಿ ತಾಯಿ ಹೌದು ಎಂದರು. ನಾವಿಬ್ಬರು ಸಂತೋಷವಾಗಿದ್ದೇವು ಎಂದು ಹೇಳಿದ್ದನ್ನು ಕೇಳಿ ನನಗೆ ನಂಬಲು ಆಗಲಿಲ್ಲ. ಇನ್ನು ಮುಂದೆ ಆಕೆಯನ್ನು ನನ್ನ ತಾಯಿ ಎಂದು ಕರೆಯಲು ಸಹ ಇಷ್ಟಪಡುವುದಿಲ್ಲ ಎಂದು ಕಾಮ್ಯಲ್ಲಾ ಹೇಳಿಕೊಂಡಿದ್ದಾರೆ.
ಸದ್ಯ ಕಾಮ್ಯಲ್ಲ ದಂಪತಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಆದರೆ, ಕೋರ್ಟ್ ಆದೇಶದಂತೆ ಕಾಮ್ಯಲ್ಲ ಮಗ ವಾರದಲ್ಲಿ ಎರಡು ಅಥವಾ ಮೂರು ಬಾರಿ ಮಾತ್ರ ತಂದೆಯೊಂದಿಗೆ ಇರುತ್ತಾನೆ. ನನ್ನ ಮಗನಿಗಾಗಿ ವಿಷಕಾರಿ ಮತ್ತು ಹಾನಿಕಾರಕ ಸಂಬಂಧವನ್ನು ಕಡಿದುಕೊಂಡಿದ್ದೇನೆಂದು ತಿಳಿಸಿದ್ದಾರೆ. ಅಲ್ಲದೆ, ವಿಚ್ಛೇದನ ಪಡೆದು ಈಗ 2 ವರ್ಷಗಳಾಗಿದ್ದು, ಒಬ್ಬ ಒಳ್ಳೆಯ ವ್ಯಕ್ತಿಯ ಪರಿಚಯವಾಗಿದ್ದು, ಆತನೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. 10 ತಿಂಗಳಿಂದ ಜತೆಗಿದ್ದೇವೆ. ಇಬ್ಬರು ಪರಸ್ಪರ ಗೌರವಿಸುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್)
ದುರ್ಗಾವತಾರಕ್ಕೆ ಮುಸ್ಲಿಮರಿಂದ ಬೆದರಿಕೆ: ಲಂಡನ್ನಲ್ಲಿ ಭದ್ರತೆ ಕೇಳಿದ ಸಂಸದೆ ನುಸ್ರತ್