More

    ನನ್ನ ಪ್ರೀತಿಯ ಅಪ್ಪ ಹೆಣ್ಣುಮಗುವಿಗಾಗಿ ಹರಕೆ ಕಟ್ಟಿದ್ದ

    ಇಂದು ಅಪ್ಪಂದಿರ ದಿನದ ವಿಶೇಷ. ಈ ಹಿನ್ನೆಲೆಯಲ್ಲಿ ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ವಿಜಯವಾಣಿಗೆ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದುಕೊಡಲಾಗಿದೆ.

    ನಮ್ಮ ಚಿಕ್ಕ ಕುಟುಂಬದಲ್ಲಿ ಅಪ್ಪನೇ ಆಲದ ಮರ. ಬಹಳ ವರ್ಷಗಳ ಬಳಿಕ ಹುಟ್ಟಿದ ನಾನು ಅವರ ಮುದ್ದಿನ ಮಗಳು. ಮೊದಲ ಮಗು ಹೆಣ್ಣಾಗಲಿ ಅಪ್ಪ ದೇವರಲ್ಲಿ ಹರಕೆ ಕಟ್ಟಿದ್ದರಂತೆ. ಆ ದೇವರ ವರದಿಂದ ಜನಿಸಿದ್ದಕ್ಕೆ ನನ್ನ ಮೇಲೆ ತಂದೆಯವರದ್ದು ಬಹಳ ಪ್ರೀತಿ. ನನಗೆ ತಂಗಿ, ತಮ್ಮ ಇದ್ದರೂ ಅಪ್ಪನ ಪ್ರೀತಿಯ ಹೆಚ್ಚಿನ ಪಾಲು ನನಗೆ. ನಾನು ಯಾವುದೇ ಕೆಲಸಕ್ಕೂ ಮುಂದಾದರೂ ಅದಕ್ಕೆ ಮೊದಲ ಒಪ್ಪಿಗೆ ಅಪ್ಪನದಾಗಿರುತ್ತಿತ್ತು. ಎಂದಿಗೂ ಬೇಸರಿಸಿಕೊಂಡವರಲ್ಲ. ಹಾಗಾಗಿ ಅಪ್ಪ ನನ್ನ ಜೀವನದ ಮೊದಲ ಹೀರೋ. ನಾನು ಅವರ ಎದೆಯ ಮೇಲೆ ಇಟ್ಟ ಪುಟ್ಟ ಹೆಜ್ಜೆ, ತೊದಲು ನುಡಿಯೇ ಅವರಿಗೆ ಸ್ವರ್ಗ ಸದೃಶವಾಗಿತ್ತು. ಬೆಳೆದು ದೊಡ್ಡವಳಾದ ಮೇಲೆ ಹಾಸ್ಟೆಲ್​ಗೆ ಹೋಗುವಾಗ ಅವರು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗಗಳು ಇವೆ. ಆಗ ಮಗು ನಾನೋ, ಅವರೂ ಎಂದು ಅನ್ನಿಸಿದ್ದಿದೆ. ಆ ಭಾವನೆಗೆ ಇಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದೇ ಅಪ್ಪನ ತೋಳ ಸ್ಪರ್ಶದ ಅನುಭವ ಇಂದಿಗೂ ನನ್ನನ್ನು ತೇಲಿಸುತ್ತಿದೆ.

    | ಅಕ್ಷತಾ ನಂದಿಕೇಶ್ವರಮಠ ವಿಜಯಪುರ

    ಇಂದು ಅಪ್ಪನ ದಿನ: ಅಪ್ಪ ಇದ್ದಾರೆಂಬ ಭರವಸೆಯೇ ನನಗೆ ಶಕ್ತಿ, ಸ್ಫೂರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts