More

    VIDEO| 2002ರಲ್ಲಿ ಪರ್ಫೆಕ್ಟ್ 10 ಸನಿಹ ಬಂದಿದ್ದ ಮುರಳೀಧರನ್‌ಗೆ ನಿರಾಸೆ ತಂದಿದ್ದು ಯಾರು ಗೊತ್ತೇ?

    ನವದೆಹಲಿ: ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಮುಂಬೈ ಟೆಸ್ಟ್‌ನಲ್ಲಿ ಭಾರತ ವಿರುದ್ಧ ಇನಿಂಗ್ಸ್‌ನ ಎಲ್ಲ 10 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್‌ನ ಜಿಮ್ ಲೇಕರ್ ಮತ್ತು ಭಾರತದ ಅನಿಲ್ ಕುಂಬ್ಳೆ ವಿಶ್ವದಾಖಲೆಯನ್ನು ಸರಿಗಟ್ಟಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಸರ್ವಾಧಿಕ 800 ವಿಕೆಟ್ ಕಬಳಿಸಿರುವ ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಕೂಡ ವೃತ್ತಿಜೀವನದಲ್ಲಿ ಇಂಥ ಅಪರೂಪದ ಸಾಧನೆಯ ಸನಿಹ ಬಂದಿದ್ದರು ಎಂಬುದು ಗೊತ್ತೇ? ಆದರೆ ಅವರಿಗೆ ಆಗ ಪರ್ಫೆಕ್ಟ್ 10 ಸಾಧನೆ ಕೂದಲೆಳೆಯಲ್ಲಿ ತಪ್ಪಿಹೋಗಿತ್ತು.

    2002ರ ಜನವರಿಯಲ್ಲಿ ಜಿಂಬಾಬ್ವೆ ವಿರುದ್ಧದ ಕ್ಯಾಂಡಿ ಟೆಸ್ಟ್ ಪಂದ್ಯದಲ್ಲಿ ಮುರಳೀಧರನ್ ಇನಿಂಗ್ಸ್‌ನ ಮೊದಲ 9 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು ಮತ್ತು 10ನೇ ವಿಕೆಟ್ ಕಬಳಿಸುವ ಅಪೂರ್ವ ಅವಕಾಶವನ್ನೂ ಹೊಂದಿದ್ದರು. ಆದರೆ ಇನಿಂಗ್ಸ್‌ನ 10ನೇ ವಿಕೆಟ್ ಆಗ ವೇಗಿ ಚಾಮಿಂಡ ವಾಸ್ ಪಾಲಾಗಿತ್ತು.

    ವಾಸ್ ಎಸೆದ ಚೆಂಡು ಬ್ಯಾಟ್ಸ್‌ಮನ್ ಬ್ಯಾಟ್ ಸವರಿಕೊಂಡು ಹೋಗಿ ವಿಕೆಟ್ ಕೀಪರ್ ಕೈಸೇರಿತ್ತು. ಆಗ ಶ್ರೀಲಂಕಾ ಆಟಗಾರರು ಮನವಿ ಸಲ್ಲಿಸದಿದ್ದರೂ ಅಂಪೈರ್ ಔಟ್ ತೀರ್ಪು ನೀಡಿದ್ದರು. ಇದರಿಂದ ಮುರಳೀಧರನ್ 51 ರನ್‌ಗೆ 9 ವಿಕೆಟ್ ಗಳಿಸಿದ ಸಾಧನೆಗೆ ತೃಪ್ತಿಪಡಬೇಕಾಯಿತು.

    ಇದಕ್ಕೆ ಮುನ್ನ ಮುರಳೀಧರನ್ 10ನೇ ವಿಕೆಟ್ ಪಡೆಯುವ ಪ್ರಯತ್ನದಲ್ಲಿದ್ದಾಗ ಒಂದು ಕ್ಯಾಚ್ ಡ್ರಾಪ್ ಆಗಿದ್ದರೆ, ಮತ್ತೊಂದು ಬಲವಾದ ಎಲ್‌ಬಿಡಬ್ಲ್ಯು ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದರು. ಇಲ್ಲದಿದ್ದರೆ ಈಗ ಪರ್ಫೆಕ್ಟ್10 ಸಾಧಕರ ಸಾಲಿನಲ್ಲಿ ಮುರಳೀಧರನ್ ಹೆಸರು ಕೂಡ ಕಾಣಿಸುತ್ತಿತ್ತು. ಟೆಸ್ಟ್​ ಕ್ರಿಕೆಟ್​ನಲ್ಲಿ ಇನ್ನೂ ಅನೇಕರು 9 ವಿಕೆಟ್​ ಗೊಂಚಲು ಪಡೆದಿದ್ದರೂ, ಅವರೆಲ್ಲರೂ 9ನೇ ವಿಕೆಟ್​ ಪಡೆಯುವುದಕ್ಕೆ ಮುನ್ನವೇ ಮತ್ತೊಂದು ವಿಕೆಟ್​ ಬೇರೆಯವರು ಪಡೆದಿದ್ದರು ಅಥವಾ ರನೌಟ್​ ಆಗಿತ್ತು. ಆದರೆ ಮುರಳೀಧರನ್​ ಅವರೊಬ್ಬರೇ ಮೊದಲ 9 ವಿಕೆಟ್​ ಗಳಿಸಿದ ಬಳಿಕ 10ನೇ ವಿಕೆಟ್​ ಗಳಿಕೆಯಿಂದ ವಂಚಿತರಾದವರು.

    2 ಬಾರಿ ಪರ್ಫೆಕ್ಟ್ 10ಗೆ ಸಾಕ್ಷಿಯಾದ ಮೂವರು ದಿಗ್ಗಜರು…!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts