More

    ಟೀಮ್ ಇಂಡಿಯಾ ಕೋಚ್ ಹುದ್ದೆಯ ರೇಸ್‌ನಿಂದ ಕುಂಬ್ಳೆ ಔಟ್​, ಪಂಜಾಬ್​ ಕಿಂಗ್ಸ್​ ನೀರಸ ನಿರ್ವಹಣೆಯೇ ಕಾರಣ?

    ನವದೆಹಲಿ: ರವಿಶಾಸ್ತ್ರಿ ನಿರ್ಗಮನದ ಬಳಿಕ ಟೀಮ್ ಇಂಡಿಯಾಗೆ ಮತ್ತೆ ವಿದೇಶಿ ಕೋಚ್ ನೇಮಕಗೊಳ್ಳುವ ಸಾಧ್ಯತೆ ಕಾಣಿಸಿದೆ. ಅನಿಲ್ ಕುಂಬ್ಳೆ ಕೋಚ್ ಆಗಿ ಮರಳುವ ಸಾಧ್ಯತೆ ದೂರವಾದ ಬೆನ್ನಲ್ಲೇ ಬಿಸಿಸಿಐ, ಸಮರ್ಥ ವಿದೇಶಿ ಕೋಚ್‌ಗಾಗಿ ಹುಡುಕಾಟ ಆರಂಭಿಸಿದೆ ಎಂದು ವರದಿಯಾಗಿದೆ.

    ಈ ಮುನ್ನ 2016-17ರ ಸಾಲಿನಲ್ಲಿ ಟೀಮ್ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರನ್ನು ಮತ್ತೆ ನೇಮಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗೆ ಆಸಕ್ತಿ ತೋರಿದ್ದರು. ಆದರೆ ಸ್ವತಃ ಅನಿಲ್ ಕುಂಬ್ಳೆ ಮತ್ತೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿಲ್ಲ ಮತ್ತು ಬಿಸಿಸಿಐ ವಲಯದಲ್ಲೂ ಅವರ ಮರುನೇಮಕಕ್ಕೆ ಸಹಮತ ವ್ಯಕ್ತವಾಗಿಲ್ಲ ಎನ್ನಲಾಗಿದೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿ ಕುಂಬ್ಳೆ ನಿರ್ವಹಣೆ ತೃಪ್ತಿದಾಯಕವಾಗಿಲ್ಲ. ಹೀಗಾಗಿ ಕೆಲ ಬಿಸಿಸಿಐ ಅಧಿಕಾರಿಗಳು ಕುಂಬ್ಳೆ ಮರುನೇಮಕವನ್ನು ವಿರೋಧಿಸಿದ್ದಾರೆ ಎನ್ನಲಾಗಿದೆ. ಕಳೆದ 2 ವರ್ಷಗಳಿಂದ ಅನಿಲ್​ ಕುಂಬ್ಳೆ, ಪಂಜಾಬ್​ ಕಿಂಗ್ಸ್ ತಂಡದ ಕೋಚ್​ ಆಗಿದ್ದರೂ, ತಂಡ ಕನಿಷ್ಠ ಪ್ಲೇಆಫ್​ ಹಂತಕ್ಕೇರಲು ಪರದಾಡುತ್ತಿದೆ.

    ಹಾಲಿ ಕೋಚ್ ರವಿಶಾಸ್ತ್ರಿ ಮುಂಬರುವ ಟಿ20 ವಿಶ್ವಕಪ್ ಬಳಿಕ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ಈ ಮುನ್ನ ನಾಯಕ ವಿರಾಟ್ ಕೊಹ್ಲಿ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಕುಂಬ್ಳೆ 2017ರ ಜೂನ್‌ನಲ್ಲಿ ಪದತ್ಯಾಗ ಮಾಡಿದ್ದರು. ಬಳಿಕ ರವಿಶಾಸ್ತ್ರಿ ಹುದ್ದೆ ಅಲಂಕರಿಸಿದ್ದರು.

    ಡ್ರೀಮ್ ಇಲೆವೆನ್‌ನಲ್ಲಿ ಐಪಿಎಲ್ ಪಂದ್ಯಕ್ಕೆ 49 ರೂ. ಹೂಡಿಕೆ ಮಾಡಿ 1 ಕೋಟಿ ರೂ. ಗೆದ್ದ ಕ್ಷೌರಿಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts