More

    VIDEO| ಭೂಗತ ಲೋಕಕ್ಕೆ ಮುತ್ತಪ್ಪ ರೈ ಬಂದಿದ್ದೇಕೆ?: ಹಿಂದೆ ನೀಡಿದ್ದ ಸಂದರ್ಶನದಲ್ಲಿ ಕುತೂಹಲಕಾರಿ ವಿಚಾರಗಳು!

    ಬೆಂಗಳೂರು: ಕ್ಯಾನ್ಸರ್​ ಕಾಯಿಲೆಯಿಂದ ಇಂದು (ಶುಕ್ರವಾರ) ಬೆಳಗ್ಗೆ ವಿಧಿವಶರಾದ ಮಾಜಿ ಭೂಗತ ದೊರೆ ಮುತ್ತಪ್ಪ ರೈ, ಕೆಲವು ದಿನಗಳ ಹಿಂದಷ್ಟೇ ದಿಗ್ವಿಜಯ 24X7 ನ್ಯೂಸ್​ಗೆ ನೀಡಿದ್ದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಭೂಗತ ಲೋಕಕ್ಕೆ ಪ್ರವೇಶ ನೀಡಿದ್ದು ಹಾಗೂ ಸಂಘಟನೆಯನ್ನು ಕಟ್ಟಿದ್ದು ಹೇಗೆ? ಎಂಬುದನ್ನು ಬಹಿರಂಗಪಡಿಸಿದ್ದರು.

    ಇದನ್ನೂ ಓದಿ: ಜೈಲಿನಲ್ಲಿ ಸಹ ಕೈದಿ ಬಳಿ ಮುತ್ತಪ್ಪ ರೈ ಬಿಚ್ಚಿಟ್ಟಿದ್ದ ಸ್ಪೋಟಕ ಮಾಹಿತಿ ಇದು…

    ಭೂಗತ ಲೋಕವೆಂದು ನನಗೆ ಹಳೆಯದೊಂದು ಹೆಸರಿತ್ತು. ನಾನು ಈ ಭೂಗತ ಲೋಕಕ್ಕೆ ಬಂದದ್ದು ಹಣ ಸಂಪಾದನೆಗಾಗಲಿ, ಹೆಸರು ಮಾಡಬೇಕೆನ್ನುವ ಉದ್ದೇಶಕ್ಕಲ್ಲ. ಅನಿವಾರ್ಯವಾದ ಒತ್ತಡಕ್ಕೆ ಸಿಲುಕಿ, ಜನರಿಗೆ ಸಹಾಯ ಮಾಡುವುದಕೋಸ್ಕರ ಸರ್ಕಾರವೇ ನನ್ನನ್ನು ತೊಡಗಿಸಿಕೊಂಡು ಸಹಾಯ ಕೇಳಿದಾಗ ನನ್ನ ಧೈರ್ಯವನ್ನು ದುರಪಯೋಪಡಿಸಿಕೊಂಡು ನನ್ನನ್ನು ಭೂಗತ ಲೋಕದಲ್ಲಿ ಒಳಗೊಳ್ಳುವಂತೆ ಮಾಡಿದರು. ಯಾವಾಗ ನಾನು ಪಾತಕ ಲೋಕಕ್ಕೆ ಕಾಲಿಟ್ಟನೋ ಅದರಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.

    ಇದನ್ನೂ ಓದಿ: VIDEO| ಅಂಡರ್​ವರ್ಲ್ಡ್​ ಡಾನ್​ಗೆ ಲವ್ ಆಗಿದ್ಹೇಗೆ? ಪತ್ನಿ ಬಗ್ಗೆ ‘ರೈ’ ಅಂತರಾಳದ ಮಾತು!

    ರೌಡಿಸಂ ಮುಂದುವರಿದಂತೆ ನನ್ನ ಮೇಲೆ ಹಲವು ಪ್ರಕರಣಗಳು ದಾಖಲಾಗಿ, ಕೊನೆಗೊಂದು ದಿನ ದೇಶವನ್ನೇ ಬಿಟ್ಟು ಹೋಗುವಂತಾಯಿತು. ಮತ್ತೆ ದೇಶಕ್ಕೋಸ್ಕರ ಹೊರಗಡೆಯಿಂದ ಕೆಲಸ ಮಾಡಿಕೊಂಡು, ಮತ್ತೆ ಮರಳಿ ಬಂದು ನನ್ನ ಎಲ್ಲ ಪ್ರಕರಣಗಳನ್ನು ಮುಗಿಸಿ, ಅದರಿಂದ ಮುಕ್ತನಾಗುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು ಎಂದು ಹೇಳಿದ್ದರು.

    ಇದನ್ನೂ ಓದಿ: PHOTOS| ಮಾಜಿ ಭೂಗತ ದೊರೆ ಹೀಗಿದ್ರು ನೋಡಿ…

    ಎಲ್ಲ ಅನುಭವಿಸಿದ ಬಳಿಕ ನನ್ನ ತಪ್ಪಿನ ಅರಿವಾಯಿತು. ಜನರಿಂದ ದೂರವಿದ್ದು, ಅವರಿಗೆ ಸಿಕ್ಕದೇ ಅವರ ಪರವಾಗಿ ಕೆಲಸ ಮಾಡುವುದು ಸಾಧ್ಯವಿಲ್ಲ ಎಂದು ಗೊತ್ತಾಯಿತು. ಜನರ ಜತೆಯಲ್ಲಿ ಬೆರೆತು ಕೆಲಸ ಮಾಡಬೇಕೆಂದು ತಿಳಿಯಿತು. ಆಗ ನನಗೆ ಎರಡು ದಾರಿಗಳು ಕಂಡವು. ಒಂದು ರಾಜಕೀಯ ಅಥವಾ ಸಂಘಟನೆ ಕಟ್ಟಬೇಕು ಅನಿಸಿತು. ಅದರಲ್ಲಿ ನಾನು ಸಂಘಟನೆ ಆಯ್ಕೆ ಮಾಡಿಕೊಂಡೆ. ಹೀಗಾಗಿ ಜಯ ಕರ್ನಾಟಕ ಸಂಘಟನೆ ಹುಟ್ಟಿಕೊಂಡಿತು. ಆರಂಭದಲ್ಲಿ 10 ಜನರಿದ್ದ ಸಂಘಟನೆ ನಂತರದ ದಿನಗಳಲ್ಲಿ 40 ಲಕ್ಷ ಜನ ಸೇರಿದರು ಎಂದು ರೌಡಿಸಂಗೆ ಇಳಿದು ಅದನ್ನು ಬಿಟ್ಟು ಸಂಘಟನೆ ಕಟ್ಟಿದನ್ನು ಸಂದರ್ಶನದಲ್ಲಿ ವಿವರಿಸಿದ್ದರು.

    ಇದನ್ನೂ ಓದಿ: VIDEO| ಪತ್ನಿಯ ನೆನೆದು ಕಣ್ಣೀರಿಟ್ಟಿದ್ರೂ ಮುತ್ತಪ್ಪ ರೈ…!

    ಇನ್ನು ಸಾಕಷ್ಟು ವಿಚಾರಗಳ ಬಗ್ಗೆ ಮುತ್ತಪ್ಪ ರೈ ಅವರು ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದರು. ಅದರ ಸಂಪೂರ್ಣ ವಿಡಿಯೋವನ್ನು ನೀವಿಲ್ಲಿ ನೋಡಬಹುದಾಗಿದೆ.

    ಮಾಜಿ ಭೂಗತ ಲೋಕದ ದೊರೆ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68) ಇಂದು ಬೆಳಗ್ಗಿನ ಜಾವ 2 ಗಂಟೆಗೆ ಕೊನೆಯುಸಿರೆಳೆದರು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಬಿಡದಿ ನಿವಾಸದಲ್ಲಿಂದು ಅವರ ಅಂತ್ಯಕ್ರಿಯೆ ನೇರವೇರಲಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: VIDEO| ರೌಡಿಸಂ ಹಾದಿ ಹಿಡಿದವರಿಗೆ ಮಾಜಿ ಭೂಗತ ದೊರೆ ಮುತ್ತಪ್ಪ ರೈ ನೀಡಿದ್ದರು ಉಪಯುಕ್ತ ಸಲಹೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts