More

    ಬಿಡದಿಗೆ ಹೊರಟ ಮುತ್ತಪ್ಪ ರೈ ಅಂತಿಮ ಯಾತ್ರೆ

    ರಾಮನಗರ: ಜಯಕರ್ನಾಟಕ ಸಂಘಟನೆ ಸಂಸ್ಥಾಪಕ, ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅಂತಿಮ ವಿಧಿವಿಧಾನ ಬಿಡದಿಯ ಅವರ ಸ್ವಗೃಹದ ಬಳಿ ಸಂಜೆ 4ಕ್ಕೆ ನೆರವೇರಲಿದ್ದು, ಆಸ್ಪತ್ರೆಯಿಂದ ಮನೆಯತ್ತ ಅಂತಿಮ ಯಾತ್ರೆ ಹೊರಟಿದೆ.

    ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅವರನ್ನು ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಎರಡು ದಿನಗಳ‌ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಸುಕಿನ 2 ಗಂಟೆ ಸುಮಾರಿನಲ್ಲಿ ಮೃತಪಟ್ಟಿದ್ದು, ಬೆಳಗ್ಗೆ 11.20ರ ಸುಮಾರಿಗೆ ಆಸ್ಪತ್ರೆಯಿಂದ ಮೃತದೇಹ ಹೊತ್ತು ಹೊರಟಿರುವ ಆಂಬುಲೆನ್ಸ್​ ಇನ್ನು ಕಲವೇ ಕ್ಷಣಗಳಲ್ಲಿ ಬಿಡದಿಗೆ ಬರಲಿದೆ.

    ಇದನ್ನೂ ಓದಿರಿ VIDEO| ರೌಡಿಸಂ ಹಾದಿ ಹಿಡಿದವರಿಗೆ ಮಾಜಿ ಭೂಗತ ದೊರೆ ಮುತ್ತಪ್ಪ ರೈ ನೀಡಿದ್ದರು ಉಪಯುಕ್ತ ಸಲಹೆ!

    ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಡದಿ ಬಳಿಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿರುವ ಪೊಲೀಸರು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಬಂದೋಬಸ್ತ್ ಮಾಡಿದ್ದಾರೆ.

    ಕರೊನಾ ಲಾಕ್​ಡೌನ್ ಇರುವ ಕಾರಣ ಅಂತಿಮ ವಿಧಿವಿಧಾನ ಕಾರ್ಯದಲ್ಲಿ ಪಾಲ್ಗೊಳ್ಳಲು 25 ಜನರಿಗಷ್ಟೇ ಅವಕಾಶ ಮಾಡಿಕೊಟ್ಟಿರುವ ಪೊಲೀಸ್ ಇಲಾಖೆ, ಮಾಧ್ಯಮಗಳ ಚಿತ್ರೀಕರಣಕ್ಕೂ ಅವಕಾಶ ನೀಡಿಲ್ಲ. ಲಾಕ್​ಡೌನ್​ ನಿಯಮಕ್ಕೆ ಅಭಿಮಾನಿಗಳು ಸಹಕರಿಸಬೇಕು ಎಂದು ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ಮನವಿ ಮಾಡಿದ್ದಾರೆ. ಮೃತದೇಹ ಹೊತ್ತು ಬೆಂಗಳೂರಿಂದ ಬಿಡದಿಗೆ ಬರುತ್ತಿರುವ ವಾಹನಕ್ಕೆ ದಾರಿಯುದ್ದಕ್ಕೂ ಅಲ್ಲಲ್ಲಿ ನಿಂತ ಮುತ್ತಪ್ಪ ರೈ ಅಭಿಮಾನಿಗಳು ದೂರದಿಂದಲೇ ಪುಷ್ಪನಮನ ಸಲ್ಲಿಸುತ್ತಿರುವ ದೃಶ್ಯ ಕಂಡು ಬಂತು.

    ಇದನ್ನೂ ಓದಿರಿ ಭೂಗತ ಲೋಕದ ಮಾಜಿ ಡಾನ್​​ಗೆ ಮರುಜನ್ಮ ನೀಡಿದ ಬಿಡದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts