More

    ಮುಸ್ಲಿಮರ ಮೀಸಲಾತಿ ಹೆಚ್ಚಿಸಿ

    ದೇವದುರ್ಗ: ಮುಸ್ಲಿಮರಿಗೆ 2ಬಿ ಮೀಸಲಾತಿ ಮರುಸ್ಥಾಪಿಸಿ ಶೇ.8ಕ್ಕೆ ಹೆಚ್ಚಳ ಮಾಡಬೇಕೆಂದು ಎಸ್‌ಡಿಪಿಐ ರಾಜ್ಯ ಸಂಚಾಲಕ ಬಿ.ಆರ್.ಭಾಸ್ಕರ್ ಪ್ರಸಾದ್ ತಿಳಿಸಿದರು.

    ಇದನ್ನೂ ಓದಿ: ಮುಸ್ಲಿಮರ ಮೀಸಲಾತಿಯನ್ನು ಮರುಸ್ಥಾಪಿಸಿ

    ಪಟ್ಟಣದ ಜೈಹಿರುದ್ದೀನ್ ಪಾಷಾ ವೃತ್ತದಲ್ಲಿ ಎಸ್‌ಡಿಪಿಐನಿಂದ ಮೀಸಲು ಹೆಚ್ಚಳಕ್ಕಾಗಿ ಆಯೋಜಿಸಿದ್ದ ಬೆಳಗಾವಿ ಚಲೋ ಹೋರಾಟದಲ್ಲಿ ಶನಿವಾರ ಮಾತನಾಡಿದರು.

    ಹಿಂದುಳಿದ ವರ್ಗದ ಕಾಂತರಾಜ್ ಆಯೋಗದ ವರದಿ ಹಾಗೂ ಪರಿಶಿಷ್ಟಜಾತಿ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ ಮಾಡಬೇಕು.

    ರಾಜ್ಯದಲ್ಲಿ ಶೇ.17ರಷ್ಟು ಮುಸ್ಲಿಮರಿದ್ದು ಅವರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ಹಿಂದಿನ ಬಿಜೆಪಿ ಸರ್ಕಾರ ರದ್ದು ಮಾಡಿತ್ತು. ಅದನ್ನು ಮರುಸ್ಥಾಪನೆ ಮಾಡಿ, ಮೀಸಲಾತಿ ಹೆಚ್ಚಿಸಿ.

    ಎಲ್ಲ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಮಾಹಿತಿ ಸಂಗ್ರಹಿಸಿದ ಕಾಂತರಾಜ್ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯನ್ನು ಸ್ವೀಕರಿಸಿ ಜಾರಿಗೊಳಿಸಬೇಕು. ಸಮುದಾಯಗಳ ವಿವಿಧ ಬೇಡಿಕೆಗಳು ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಪೂರೈಸಬೇಕು. ಇದಕ್ಕಾಗಿ ಸಂಘಟನೆಯಿಂದ ಬೆಳಗಾವಿ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

    ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಪ್ರಧಾನ ಕಾರ್ಯದರ್ಶಿ ಅಪ್ಸರೆ ಕೂಡ್ಲಿಪೇಟ್, ಅಬ್ದುಲ್ ಗಫೂರ್, ರಿಯಾಜ್ ಬಾಲೆ, ಖಾದರ್ ಪಾಷಾ, ನವಾಜ್ ಕಬಡಿ, ಎಂ.ಎ.ಅಜೀಮ್, ಸಜೀದ್ ಫೇರೋಜ್ ಖಾನ್, ಮಹಬೂಬ್, ಅಬ್ದುಲ್, ಅಲ್ತಾಫ್, ಬಾಬಾ ನವಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts