More

    ಶಿವಮೊಗ್ಗದಲ್ಲಿ ಶ್ರದ್ಧಾಭಕ್ತಿಯ ಮೊಹರಂ ಆಚರಣೆ

    ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಮಂಗಳವಾರ ಶ್ರದ್ಧಾಭಕ್ತಿಯಿಂದ ಮೊಹರಂ ಆಚರಿಸಲಾಯಿತು. ಹಿರಿಯರು, ಯುವಕರು, ಮಕ್ಕಳು ಶೋಕಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಮುಸ್ಲಿಂ ಸಮಾಜದವರು ಕೆಂಡ ಹಾಯ್ದು, ಪಂಜಾ ಮೆರವಣಿಗೆ ನಡೆಸಿದರು. ಕೆಲ ಮಸೀದಿಗಳಲ್ಲಿ ವಿಶೇಷ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿತ್ತು.
    ಸಾಗರ ತಾಲೂಕಿನ ಸೈದೂರಿನಲ್ಲಿ ಸೋಮವಾರ ತಡರಾತ್ರಿ ಬೆಂಕಿಯ ಸುತ್ತ ನರ್ತನ ಮಾಡುವ ಹಾಗೂ ಕೆಂಡ ಹಾಯುವ ಹರೆಕೆಯ ಮೂಲಕ ಐದು ದಿವಸಗಳ ಹಬ್ಬ ಮುಕ್ತಾಯಗೊಂಡಿತು. ಹಿಂದುಗಳೇ ಹೆಚ್ಚಿರುವ ಈ ಊರಿನಲ್ಲಿ ಹಿಂದೂಗಳೇ ಲಾಗಾಯ್ತಿನಿಂದಲೂ ಮೊಹರಂ ಆಚರಿಸುತ್ತಿರುವುದು ಭಾವೈಕ್ಯದ ಸಂಕೇತವಾಗಿದೆ.
    ಪರವೂರಿನ ಮುಸ್ಲಿಂ ವ್ಯಕ್ತಿಯೊಬ್ಬರು ಇಲ್ಲಿ ಬಂದು ಮಂಡಕ್ಕಿ ಪ್ರಸಾದ ನೀಡುವ ವಾಡಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಿಂದೂಗಳೇ ಇಲ್ಲಿ ಹೆಚ್ಚಾಗಿ ಹರಕೆ ಹೇಳಿಕೊಂಡು ವರಾಡ ವಂತಿಗೆ ಹಾಕಿಕೊಂಡು ಹಬ್ಬ ಆಚರಿಸುವುದು ವಿಶೇಷ. ಸೈಯದ್ ಎಂಬ ರಾಜನ ಆಳ್ವಿಕೆಯಲ್ಲಿದ್ದ ಕಾರಣ ಈ ಊರಿಗೆ ಸೈದೂರು ಎಂಬ ಹೆಸರು ಬಂದಿದ್ದು. ಕಾಲಾನಂತರ ಹಿಂದೂಗಳೇ ಹೆಚ್ಚಿದ ಕಾರಣ ಮುಸ್ಲಿಮರ ಆಚರಣೆ ಎಲ್ಲರಲ್ಲೂ ನೆಲೆಗೊಂಡಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts